Job ಗಾಗಿ ಬೇರೆ ಊರಿನಲ್ಲಿದ್ದೀರಾ? ಅಲ್ಲಿದ್ದುಕೊಂಡೇ ಮತ ಚಲಾಯಿಸಬಹುದು!

By Web DeskFirst Published Mar 18, 2019, 5:34 PM IST
Highlights

ಕೆಲಸದ ನಿಮಿತ್ತ ಪರ ಊರಿನಲ್ಲಿದ್ದೀರಾ?| ಮತ ಚಲಾಯಿಸುವುದು ಹೇಗೆಂಬ ಚಿಂತೆಯೇ?| ಚಿಂತಿಸಬೇಡಿ... ಮತದಾನ ನಿಮ್ಮ ಹಕ್ಕು| ನೀವಿರುವ ಸ್ಥಳದಲ್ಲೇ ಮತ ಚಲಾಯಿಸಿ| ಮತದಾರರ ಗುರುತಿನ ಚೀಟಿ ಪಡೆಯಲು ಅನುಸರಿಸಬೇಕಾದ ಕ್ರಮಗಳು ಹೀಗಿವೆ.

ಬೆಂಗಳೂರು[ಮಾ.18]: ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ರಾಜಕೀಯ ಮುಖಂಡರು ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲೆಡೆ ಚುನಾವಣಾ ಕಣ ರಂಗೇರಿದೆ. ಹೀಗಿರುವಾಗ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮೊದಲ ಹಂತ ಏಪ್ರಿಲ್ 11ರಂದು ನಡೆದರ ಅಂತಿಮ ಹಂತದ ಮತದಾನ ಮೇ 19ರಂದು ನಡೆಯಲಿದೆ ಹಾಗು ಮತ ಎಣಿಕೆ ಮೇ 23ರಂದು ನಡೆಯಲಿದೆ. 

ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವವರ ಸಂಖ್ಯೆ 90 ಕೋಟಿ. ಒಟ್ಟು ಮತದಾರರಲ್ಲಿ 1.50ಕೋಟಿ ಮತದಾರರು 18-19 ವರ್ಷ ವಯಸ್ಸಿನವರಾಗಿದ್ದಾರೆ. ಇವರಲ್ಲಿ ಹಲವರು ತಮ್ಮ ಊರಿನಿಂದ ದೂರ ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಉಳಿದುಕೊಂಡಿರುತ್ತಾರೆ. ಹೀಗಾಗಿ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಆದರೆ ನೀವು ಚುನಾವಣಾ ಕ್ಷೇತ್ರದಿಂದ ದೂರವಿದ್ದರೂ, ಪ್ರಸ್ತುತವಿರುವ ಚುನಾವಣಾ ಕ್ಷೇತ್ರದಿಂದ ಮತ ಚಲಾಯಿಸಲು ಸಾಧ್ಯ. ಇದಕ್ಕಾಗಿ ಆನ್ ಲೈನ್ ಮೂಲಕ ನಿಮ್ಮ ಕ್ಷೇತ್ರವನ್ನು ಬದಲಾಯಿಸಬೇಕಾಗುತ್ತದೆ. ನಿಮ್ಮ ಮಾಹಿತಿ ನೀಡಿ ನೀವು ಭಾರತದ ಯಾವುದೇ ಲೋಕಸಭಾ ಕ್ಷೇತ್ರದಿಂದ ಮತ ಚಲಾಯಿಸಬಹುದು.

ಒಂದು ವೇಳೆ ನೀವು ಕ್ಷೇತ್ರ ಬದಲಾಯಿಸಲು ವೋಟರ್ ಐಡಿ ಮಾಡಿಸಲು ಇಚ್ಛಿಸಿದ್ದರೆ ನಿಮ್ಮ ಬಳಿ ಮತದಾರರ ಚೀಟಿ ಇರಲೇಬೇಕು. Form 6 ಭರ್ತಿ ಮಾಡಿ ನೀವು ಹೊಸ ವೋಟರ್ ಐಡಿ ಮಾಡಿಸಿಕೊಳ್ಳಬಹುದು. Form 6ರಲ್ಲಿ ಎರಡು ಆಯ್ಕೆಗಳಿರುತ್ತವೆ, ಇದರಲ್ಲಿ ನೀವು ಹೊಸ ಮತದಾರರ ಚೀಟಿ ಇಲ್ಲವೇ ಚುನಾವಣಾ ಕ್ಷೇತ್ರ ಬದಲಾಯಿಸಿಕೊಳ್ಳಲು ಮತದಾರರ ಚೀಟಿ ಮಾಡಿಸಿಕೊಳ್ಳಬಹುದು. ಆನ್ ಲೈನ್ ಅಥವಾ ಆಫ್ ಲೈನ್ ಎರಡೂ ರೀತಿಯಲ್ಲಿ ಭರ್ತಿ ಮಾಡಬಹುದು. Form 6 ಭರ್ತಿ ಮಾಡುವ ಆನ್ಲೈನ್ ಪ್ರಕ್ರಿಯೆ ಹೇಗೆ ಎಂಬ ವಿವರ ಇಲ್ಲಿದೆ.

1] ಎಲ್ಲಕ್ಕಿಂತ ಮೊದಲು ನೀವು www.nvsp.in ವೆಬ್ ಸೈಟ್ ಗೆ ಲಾಗಾನ್ ಮಾಡಿಕೊಳ್ಳಬೇಕು. ಒಂದು ವೆಳೆ ನೀವು ನೂತನ ಮತದಾರರ ಚೀಟಿ ಅಥವಾ ಚುನಾವಣಾ ಕ್ಷೇತ್ರ ಬದಲಾಯಿಸಿಕೊಳ್ಳಲು ಇಚ್ಛಿಸುತ್ತೀರೆಂದಾದರೆ Form 6 ಮೇಲೆ ಕ್ಲಿಕ್ ಮಾಡಿ. ಇಲ್ಲಿ ಮೂರು ಭಾಷೆಗಳು[ಇಂಗ್ಲೀಷ್. ಹಿಂದಿ ಅಥವಾ ಮಲಯಾಳಂ] ಅಪ್ಲಿಕೇಷನ್ ಭರ್ತಿ ಮಾಡಬಹುದು.

2]ಭಾಷೆಯನ್ನು ಆಯ್ಕೆ ಮಾಡಿಕೊಂಡ ಬಳಿಕ ಯಾವ ರಾಜ್ಯದಲ್ಲಿದ್ದೀರಿ ಹಾಗೂ ಯಾವ ವಿಧಾನಸಭಾ/ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತೀರಿ ಎಂಬುವುದನ್ನು ಆಯ್ಕೆ ಮಾಡಿಕೊಳ್ಳಬೇಕು.

3] ಬಳಿಕ ಚುನಾವಣಾ ಕ್ಷೇತ್ರವನ್ನು ಬದಲಾಯಿಸುವ ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಬೇಕು.

4]ಇದಾದ ನಂತರ ನಿಮ್ಮ ಹೆಸರು, ಉಪನಾಮ, ತಂದೆ-ತಾಯಿಯ ಹೆಸರು, ಹೆಂಡತಿ ಹೀಗೆ ಎಲ್ಲಾ ವಿವರವನ್ನು ನಮೂದಿಸಬೇಕು.

5]ತದ ನಂತರ ಹುಟ್ಟಿದ ದಿನಾಂಕ ಹಾಗೂ ಲಿಂಗವನ್ನು ಆಯ್ಕೆ ಮಾಡಿಕೊಳ್ಳಬೇಕು.

6]ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಪ್ರಸ್ತುತ ನೀವಿರುವ ಸಂಪೂರ್ಣ ವಿಳಾಸ ಹಾಗೂ ಖಾಯಂ ವಿಳಾಸವನ್ನು ನಮೂದಿಸಬೇಕು. ಅಲ್ಲದೇ ಮೊಬೈಲ್ ಸಂಖ್ಯೆ ಹಾಗೂ ಈ-ಮೇಲ್ ಐಡಿ ವಿವರವನ್ನೂ ನೀಡಬೇಕು.

7]ಮುಂದಿನ ಹಂತದಲ್ಲಿ ಫೋಟೋ, ಜನ್ಮ ದಾಖಲೆ ಹಾಗೂ ವಿಳಾಸದ ದಾಖಲೆಯ ಫೋಟೋ ಅಪ್ಲೋಡ್ ಮಾಡಬೇಕು.

8] ಬಳಿಕ ಈ ಮಾಹಿತಿಯನ್ನು ದೃಢೀಕರಿಸುವ ಸಂದರ್ಭದಲ್ಲಿ ಜನ್ಮ ಸ್ಥಳದ ಮಾಹಿತಿ ನಮೂದಿಸಬೇಕು. ತದನಂತರ Captcha ದಲ್ಲಿ ತೋರಿಸಲಾದ ಸಂಖ್ಯೆಗಳನ್ನು ನಮೂದಿಸಿ Submit ಮಾಡಬೇಕು.

9] Submit ಮಾಡಿದ ಬಳಿಕ ನೀವು ನೀಡಿದ ಇ-ಮೇಲ್ ಐಡಿಗೆ ಮೇಲ್ ಬರುತ್ತದೆ.  ಇಲ್ಲಿ ನೀಡಲಾದ ಲಿಂಕ್ ನಿಂದ ನಿಮ್ಮ ವೋಟರ್ ಐಡಿಯ ಸ್ಟೇಟಸ್ ಪರಿಶೀಲಿಸಬಹುದು. ಇದಾದ ಕೆಲವೇ ದಿನಗಳಲ್ಲಿ ನಿಮ್ಮ ವೋಟರ್ ಐಡಿ ನಿಮಗೆ ಸಿಗುತ್ತದೆ.

ನಿಮ್ಮ ಬಳಿ ವೋಟರ್ ಐಡಿ ಇಲ್ಲದಿದ್ದರೂ ಸರ್ಕಾರದಿಂದ ನೀಡಲಾದ ಗುರುತಿನ ಚೀಟಿ ಮೂಲಕ ಮತದಾನ ಮಾಡಬಹುದು. 

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. 543 ಲೋಕಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು 90 ಕೋಟಿ ಮಂದಿ ಅರ್ಹರಾಗಿದ್ದಾರೆ

click me!