ಸಿಗ್ನಲ್ ಸಮಸ್ಯೆಯನ್ನು ನಿವಾರಿಸುವ ತಂತ್ರಜ್ಞಾನ ಇರುವ ಇಯರ್‌ಬಡ್ | ಫೋನ್ ಜೊತೆಗೆ ಸಂಪರ್ಕ ಸಾಧಿಸಲು ನೇಟಿವ್ ಅಸಿಸ್ಟೆಂಟ್ ಗುಂಡಿ | ವಾಲ್ಯೂಮ್ ಕಂಟ್ರೋಲ್, ಟ್ರ್ಯಾಕ್ ಕಂಟ್ರೋಲ್ ವ್ಯವಸ್ಥೆ
‘ಪುಷ್’ ಎಂಬ ಹೆಸರಿನ ವೈರ್‌ಲೆಸ್ ಇಯರ್‌ಬಡ್‌ಅನ್ನು ಸ್ಕಲ್ ಕ್ಯಾಂಡಿ ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಹೊರ ಪ್ರಪಂಚದ ಕರ್ಕಶ ಶಬ್ದಗಳ ಲೋಕದಿಂದ ಇಂಪಾದ ಮ್ಯೂಸಿಕ್ ಜಗತ್ತಿಗೆ ಗ್ರಾಹಕನನ್ನು ಕರೆದೊಯ್ಯುವ ಇಯರ್‌ಬಡ್‌ಗಳಿವು.
ಈ ಜನರೇಶನ್‌ಗೆ ಇಷ್ಟವಾಗುವಂಥ ತೆಳು ವಿನ್ಯಾಸದ ಈ ಇಯರ್‌ಬಡ್‌ನಲ್ಲಿ ಸಿಗ್ನಲ್ ಸಮಸ್ಯೆಯನ್ನು ನಿವಾರಿಸುವ ತಂತ್ರಜ್ಞಾನವಿದೆ. ವಾಲ್ಯೂಮ್ ಕಂಟ್ರೋಲ್, ಟ್ರ್ಯಾಕ್ ಕಂಟ್ರೋಲ್ ವ್ಯವಸ್ಥೆಯೂ ಇದೆ.
ಇದರಲ್ಲಿರುವ ನೇಟಿವ್ ಅಸಿಸ್ಟೆಂಟ್ ಗುಂಡಿಯನ್ನು ಒತ್ತಿ ಫೋನ್ ಜೊತೆಗೆ ಸಂಪರ್ಕ ಸಾಧಿಸಬಹುದು. ಒಮ್ಮೆ ಫುಲ್ ಚಾರ್ಜ್ ಮಾಡಿದರೆ 12 ಗಂಟೆಗಳಷ್ಟು ದೀರ್ಘಕಾಲ ಬ್ಯಾಟರಿ ಲೈಫ್ ಇರುತ್ತದೆ.
ಸ್ಕಲ್‌ಕ್ಯಾಂಡಿಯ ಫಿಟ್‌ಫಿನ್ ಇಯರ್ ಜೆಲ್‌ಗಳ ಚೋಡಣೆಗೆ ಅನುಕೂಲವಾಗಿದ್ದು, ಇಡೀ ದಿನ ಅಲ್ಲಾಡದಂತೆ ಇಯರ್‌ಬಡ್ ಕಿವಿಯಲ್ಲಿ ಕೂರುವ ಹಾಗೆ ಮಾಡುತ್ತದೆ.