ಇನ್ನೊಂದು ದಶಕದಲ್ಲಿ ಮುಕ್ತಾಯವಾಗಲಿದೆ ಐಎಸ್ಎಸ್ ಆಯಸ್ಸು
2031ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿವೃತ್ತಿ
ಪೆಸಿಪಿಕ್ ಸಮುದ್ರದ "ಸ್ಪೇಸ್ ಸಮಾಧಿ"ಗೆ ಬೀಳಲಿದೆ ISS
ವಾಷಿಂಗ್ಟನ್ (ಫೆ. 9): ಬಾಹ್ಯಾಕಾಶದಲ್ಲಿ ಮಾನವ ನಿರ್ಮಾಣ ಮಾಡಿದ ಅತ್ಯಂತ ವಿಶೇಷ ಯೋಜನೆ ಎನಿಸಿಕೊಂಡ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್ಎಸ್) 2031ರಲ್ಲಿ ನಿವೃತ್ತಿಯಾಗಲಿದೆ ಎಂದು ನಾಸಾ (NASA)ಪ್ರಕಟಿಸಿದೆ. ಬಹುತೇಕ ಇನ್ನೊಂದು ದಶಕದ ಆಯಸ್ಸನ್ನು ಐಎಸ್ಎಸ್ (ISS) ಹೊಂದಿದ್ದು, 2031ರ ಜನವರಿಯಲ್ಲಿ ಅದರ ನಿವೃತ್ತಿಯಾಗಲಿದೆ. ನಿವೃತ್ತಿಯ ನಂತರ ಐಎಸ್ಎಸ್ (International Space Station) ಭೂಮಿಗೆ ಬೀಳಲಿದೆ. ಈ ವೇಳೆ ಚಿಕ್ಕ ಚಿಕ್ಕ ಬಿಡಿಭಾಗಗಳು ಉರಿದು ಬೂದಿಯಾಗಲಿದ್ದರೆ, ದೊಡ್ಡ ಭಾಗಗಳು ಪೆಸಿಪಿಕ್ ಸಮುದ್ರದಲ್ಲಿರುವ "ಸ್ಪೇಸ್ ಸಮಾಧಿ" ಪಾಯಿಂಟ್ ನೆಮೋಗೆ (Point Nemo) ಬೀಳಲಿದೆ ಎಂದು ತಿಳಿಸಿದೆ.
ನಾಸಾ ತನ್ನ ನಿಲ್ದಾಣವನ್ನು ನಿವೃತ್ತಿ ಮಾಡುವ ಮೊದಲು, ISS ತನ್ನ ಅತ್ಯಂತ ಜನನಿಬಿಡ ದಶಕವನ್ನು ಎದುರು ನೋಡುತ್ತಿದೆ. ಪ್ರಯೋಗಗಳು, ವೈದ್ಯಕೀಯ ಮತ್ತು ತಾಂತ್ರಿಕ ಸಂಶೋಧನೆಗಳು ಮತ್ತು ಇತರ ವಿಷಯಗಳ ಜೊತೆಗೆ ಅಂತರರಾಷ್ಟ್ರೀಯ ಪಾಲುದಾರಿಕೆಗಳಿಂದ ಐಎಸ್ಎಸ್ ತುಂಬಿಹೋಗಿದೆ. "ISS ಈಗ ಸಂಶೋಧನೆಯ ಪ್ರಗತಿ, ವಾಣಿಜ್ಯ ಮೌಲ್ಯ ಮತ್ತು ಜಾಗತಿಕ ಪಾಲುದಾರಿಕೆ ಸೇರಿದಂತೆ ಅದರ ಮೂರನೇ ಮತ್ತು ಅತ್ಯಂತ ಉತ್ಪಾದಕ ದಶಕದ ಕಡೆಗೆ ಸಾಗುತ್ತಿದೆ' ಎಂದು ವರದಿಯೊಂದು ಹೇಳಿದೆ.
ಆಕಾಶದ ಮೇಲಿನ ಲ್ಯಾಬ್ ಐಎಸ್ಎಸ್: ಮೊದಲ ಮೂಲ ನಿಲ್ದಾಣವನ್ನು 1969 ರಲ್ಲಿ ಎರಡು ರಷ್ಯಾದ ಸೊಯುಜ್ ವಾಹನಗಳನ್ನು ಬಾಹ್ಯಾಕಾಶದಲ್ಲಿ ಜೋಡಿಸುವ ಮೂಲಕ ರಚಿಸಲಾಗಿತ್ತು. ISS ಅನ್ನು 1984 ರಲ್ಲಿ ಪ್ರಸ್ತಾಪ ಮಾಡಲಾಗಿದ್ದರೆ, 1998 ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಬಾಹ್ಯಾಕಾಶದಲ್ಲಿ ನಿಲ್ದಾಣವನ್ನು ಯಶಸ್ವಿಯಾಗಿ ಜೋಡಿಸಲು ಅಂದಾಜು 10 ವರ್ಷಗಳನ್ನು ತೆಗೆದುಕೊಂಡಿದ್ದು ಮಾತ್ರವಲ್ಲದೆ, 30ಕ್ಕೂ ಹೆಚ್ಚಿನ ಬಾಹ್ಯಾಕಾಶಯಾನಗಳನ್ನು ನಿಲ್ದಾಣ ನಿರ್ಮಾಣದ ಸಲುವಾಗಿಯೇ ಮಾಡಲಾಗಿತ್ತು.
"ಇದು 15 ದೇಶಗಳನ್ನು ಪ್ರತಿನಿಧಿಸುವ ಐದು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ಅಭೂತಪೂರ್ವ ವೈಜ್ಞಾನಿಕ ಮತ್ತು ಎಂಜಿನಿಯರಿಂಗ್ ಸಹಯೋಗದ ಫಲಿತಾಂಶವಾಗಿದೆ" ಎಂದು ISS ರಾಷ್ಟ್ರೀಯ ಪ್ರಯೋಗಾಲಯದ ಹೇಳುತತದೆ. ಈ ಐದು ಬಾಹ್ಯಾಕಾಶ ಸಂಸ್ಥೆಗಳೆಂದರೆ, NASA (US), Roscosmos (ರಷ್ಯಾ), JAXA (ಜಪಾನ್), ESA (ಯುರೋಪ್), ಮತ್ತು CSA (ಕೆನಡಾ). ಬಾಹ್ಯಾಕಾಶ ನಿಲ್ದಾಣವು ಸರಿಸುಮಾರು ಫುಟ್ಬಾಲ್ ಮೈದಾನದ ಗಾತ್ರದಲ್ಲಿದ್ದು, 460 ಟನ್ ಭಾರ ಹೊಂದಿದೆ. ಗಗನಯಾತ್ರಿಗಳು ಈ ನಿಲ್ದಾಣದಿಂದಲೇ ಭೂಮಿಯ ಮೇಲಿಂದ 250 ಮೈಲಿಗಷ್ಟು ದೂರದಿಂದ ಸುತ್ತತ್ತಿರುತ್ತಾರೆ. ಈ ನಿಲ್ದಾಣವು ಇಲ್ಲಿಯವರೆಗೆ 19 ವಿವಿಧ ದೇಶಗಳ 200ಕ್ಕೂ ಅಧಿಕ ಆಸ್ಟ್ರೋನಟ್ ಹಾಗೂ ಕಾಸ್ಮೋನಟ್ಸ್ ಗೆ ಆತಿಥ್ಯ ನೀಡಿದೆ.
Plastic Pollution: ಜೀವ ಸಂಕಟದಲ್ಲಿ ಜಲಚರ: ಸಮುದ್ರದ ಉದ್ದಗಲಕ್ಕೂ ಹಬ್ಬಿದ ಪ್ಲಾಸ್ಟಿಕ್ ಮಾಲಿನ್ಯ!
ISS ನ ಮೊದಲ ದಶಕವನ್ನು ಅದರ ಜೋಡಣೆಗಾಗಿ ಮೀಸಲಿಟ್ಟರೆ, ಎರಡನೆಯ ದಶಕವನ್ನು ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಬಾಹ್ಯಾಕಾಶದಲ್ಲಿ ಈ ಚಟುವಟಿಕೆಗಳನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ನಡೆಸುವುದು ಎಂಬುದನ್ನು ತಿಳಿಯಲು ಮೀಸಲಿಡಲಾಗಿತ್ತು. 20 ವರ್ಷಗಳಿಗೂ ಹೆಚ್ಚು ಕಾಲ, ವಿಜ್ಞಾನಿಗಳು ಮತ್ತು ಸಂಶೋಧಕರು ಜೈವಿಕ, ಭೌತಿಕ, ಬಯೋಮೆಡಿಸಿನ್, ವಸ್ತುಗಳು ಮತ್ತು ಭೂಮಿ ಮತ್ತು ಬಾಹ್ಯಾಕಾಶ ವಿಜ್ಞಾನದ ಸಂಶೋಧನೆಗಳನ್ನು ನಡೆಸಲು ISS ಅನ್ನು ಬಳಸಿದ್ದಾರೆ.
ಅಪಘಾತಕ್ಕೊಳಗಾದ ವ್ಯಕ್ತಿಯ ಜೀವ ಉಳಿಸಿದ Apple Watch
ಪಾಯಿಂಟ್ ನೆಮೋ "ಸ್ಪೇಸ್ ಸಮಾಧಿ": ನಿಷ್ಕ್ರಿಯಗೊಂಡ ಬಾಹ್ಯಾಕಾಶ ನೌಕೆ ಮತ್ತು ಉಪಗ್ರಹಗಳನ್ನು ನಾಸಾ ಪೆಸಿಪಿಕ್ ಸಾಗರದಲ್ಲಿರುವ ಪಾಯಿಟ್ ನೆಮೋದಲ್ಲಿ ಬೀಳಿಸುತ್ತದೆ. ಇದನ್ನು "ಸ್ಪೇಸ್ ಸಮಾಧಿ" ಎನ್ನುವ ಹೆಸರಿನಿಂದಲೂ ಕರೆಯಲಾಗುತ್ತದೆ. ಪಾಯಿಂಟ್ ನೆಮೊ, ಜೂಲ್ಸ್ ವೆರ್ನೆಸ್ ಟ್ವೆಂಟಿ ಥೌಸಂಡ್ ಲೀಗ್ಸ್ ಅಂಡರ್ ದಿ ಸೀನಿಂದ ಪ್ರಸಿದ್ಧ ಜಲಾಂತರ್ಗಾಮಿ ನಾವಿಕನ ಹೆಸರನ್ನು ಇಡಲಾಗಿದೆ, ಇದು ನ್ಯೂಜಿಲೆಂಡ್ ಕರಾವಳಿಯಿಂದ 4800 ಕಿಲೋಮೀಟರ್‌ಗಿಂತ ಹೆಚ್ಚು ಮತ್ತು ಅಂಟಾರ್ಕ್ಟಿಕಾದಿಂದ ಉತ್ತರಕ್ಕೆ 3200 ಕಿಲೋಮೀಟರ್ ದೂರದಲ್ಲಿದೆ. ಷ್ಯಾದ ಮೀರ್ ಬಾಹ್ಯಾಕಾಶ ನಿಲ್ದಾಣ ಮತ್ತು ನಾಸಾದ ಮೊದಲ ಬಾಹ್ಯಾಕಾಶ ನಿಲ್ದಾಣ ಸ್ಕೈಲ್ಯಾಬ್ ಅನ್ನು ಸಹ ಇಲ್ಲಿ ನಿಷ್ಜ್ರೀಯ ಮಾಡಲಾಗಿದೆ.