Redmi Smart Band Pro: 110 ಕ್ಕೂ ಹೆಚ್ಚು ವರ್ಕೌಟ್ ಮೋಡ್‌, SpO2 ಟ್ರ್ಯಾಕಿಂಗ್‌ನೊಂದಿಗೆ ಲಾಂಚ್!

Published : Feb 09, 2022, 04:11 PM IST
Redmi Smart Band Pro: 110 ಕ್ಕೂ ಹೆಚ್ಚು ವರ್ಕೌಟ್ ಮೋಡ್‌, SpO2 ಟ್ರ್ಯಾಕಿಂಗ್‌ನೊಂದಿಗೆ ಲಾಂಚ್!

ಸಾರಾಂಶ

Redmi Smart Band Pro ಶಾಓಮಿಯಿಂದ ಇತ್ತೀಚಿನ ಸ್ಮಾರ್ಟ್ ಬ್ಯಾಂಡ್ ಆಗಿದೆ. ಬಜೆಟ್ ಬೆಲೆಯ ಸ್ಮಾರ್ಟ್ ಬ್ಯಾಂಡ್ ಫಿಟ್ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡಲು ಹಲವಾರು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 

Tech Desk: ಭಾರತದಲ್ಲಿ ತನ್ನ ಪ್ರಮುಖ ಉತ್ಪನ್ನ ಬಿಡುಗಡೆಯ ಭಾಗವಾಗಿ ರೆಡ್‌ಮಿ ಭಾರತದಲ್ಲಿ Redmi Smart Band Pro ರೂ 3,999 ಬೆಲೆಗೆ ಪರಿಚಯಿಸಿದೆ. ಶಾಓಮಿ ಉಪ-ಬ್ರಾಂಡ್‌ನ ಹೊಸ ಸ್ಮಾರ್ಟ್ ಬ್ಯಾಂಡ್ AMOLED ಡಿಸ್ಪ್ಲೇ, ನೀರಿನ ಪ್ರತಿರೋಧ (Resistant) ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ ಪ್ರೊನಲ್ಲಿ ಹೊಸದೇನಿದೆ ಮತ್ತು ಆರೋಗ್ಯಕರ ಜೀವನಶೈಲಿಗಾಗಿ ನಿಮಗೆ ಇದು  ಹೇಗೆ ಪ್ರಯೋಜನವನ್ನು ನೀಡುತ್ತದೆ ಎಂಬುದರ ಡಿಟೇಲ್ಸ್‌ ಇಲ್ಲಿದೆ,

Redmi Smart Band Pro ಬೆಲೆ ಮತ್ತು ಲಭ್ಯತೆ: ರೆಡ್ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ಅನ್ನು ಭಾರತದಲ್ಲಿ ರೂ 3,999 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಆದರೆ, ಇದು ರೂ 3,499 ರ ಪರಿಚಯಾತ್ಮಕ ಬೆಲೆಗೆ ಲಭ್ಯವಿರುತ್ತದೆ. ಶಾಓಮಿಯ ಅಧಿಕೃತ ವೆಬ್‌ಸೈಟ್  Mi ಇಂಡಿಯಾ ಮೂಲಕ ಸ್ಮಾರ್ಟ್‌ ಬ್ಯಾಂಡ್ ಭಾರತದಲ್ಲಿ ಫೆಬ್ರವರಿ 14 ರಂದು ಮಾರಾಟವಾಗಲಿದೆ.

ಇದನ್ನೂ ಓದಿ: Noise ColorFit Icon Buzz: 7 ದಿನ ಬ್ಯಾಟರಿ ಲೈಫ್‌, ಬ್ಲೂಟೂತ್ ಕಾಲ್‌ನೊಂದಿಗೆ ಸ್ಮಾರ್ಟ್‌ವಾಚ್ ಲಾಂಚ್!

Redmi Smart Band Pro specifications: ಸ್ಮಾರ್ಟ್ ಬ್ಯಾಂಡ್ ವಿಶೇಷತೆಗಳ ಕುರಿತು ಗಮನಿಸುವುದಾದರೆ Redmi Smart Band Pro 1.47-ಇಂಚಿನ AMOLED ಡಿಸ್ಪ್ಲೇ ಜೊತೆಗೆ 368 x 194 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 450nit ಬ್ರೈಟ್‌ನೆಸ್‌ನೊಂದಿಗೆ ಬರುತ್ತದೆ. ಇದು ನಾವು ರೆಡ್‌ಮಿ ಸ್ಮಾರ್ಟ್ ಬ್ಯಾಂಡ್‌ನಲ್ಲಿ ನೋಡಿದ 1.08-ಇಂಚಿನ ಡಿಸ್‌ಪ್ಲೇಗಿಂತ ಅಪ್‌ಗ್ರೇಡ್ ಆಗಿದೆ.  ಗಡಿಯಾರದ ಗಾತ್ರ ಕೊಂಚ ದೊಡ್ಡದಾಗಿರುವುದರಿಂದ ತೂಕ ತುಸು ಹೆಚ್ಚಿದೆ. ಸ್ಮಾರ್ಟ್‌ ಬ್ಯಾಂಡ್‌ ಒಟ್ಟು 15 ಗ್ರಾಂ ತೂಕವಿದೆ.  ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ 10.15mm ದಪ್ಪ ಮತ್ತು 24.45mm ಅಗಲವಿದೆ.

AMOLED ಡಿಸ್ಪ್ಲೇ  2.5D ಟೆಂಪರ್ಡ್ ಗ್ಲಾಸ್‌ನಿಂದ ರಕ್ಷಿಸಲ್ಪಟ್ಟಿದೆ ಹಾಗೂ ಫ್ರೇಮನ್ನು ಬಲವರ್ಧಿತ ಗಾಜಿನ ಫೈಬರ್‌ನಿಂದ ನಿರ್ಮಿಸಲಾಗಿದೆ. ಬ್ಯಾಂಡ್ ಸ್ಟ್ರಾಪ್ ಅನ್ನು TPU (Thermoplastic Polyurethane) ವಸ್ತುಗಳಿಂದ ಮಾಡಲಾಗಿದೆ. Redmi Smart Band Pro 5 ATM ವರೆಗೆ ಜಲನಿರೋಧಕವಾಗಿದೆ ಎಂದು ಶಾಓಮಿ ಹೇಳುತ್ತದೆ.

ಶಾಓಮಿಯ ಸ್ಮಾರ್ಟ್ ಬ್ಯಾಂಡ್ ಅಪೊಲೊ 3.5 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು Android 6.0 ಮತ್ತು ನಂತರದ ಅಥವಾ iOS 10.0 ಮತ್ತು ನಂತರದ ಬೆಂಬಲದೊಂದಿಗೆ ಬರುತ್ತದೆ. 200mAh ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿಯನ್ನು ಬೆಂಬಲಿಸುತ್ತದೆ, ಇದಕ್ಕೆ ಮ್ಯಾಗ್ನೆಟಿಕ್ ಚಾರ್ಜಿಂಗ್ ಅಗತ್ಯವಿದೆ ಮತ್ತು  ವಿಶಿಷ್ಟ ಬಳಕೆಯ ಅಡಿಯಲ್ಲಿ 14 ದಿನಗಳ ಬ್ಯಾಕಪ್ ನೀಡಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ: Redmi Smart TV X43: ಫೆ.9ಕ್ಕೆ ಭಾರತದಲ್ಲಿ ‌ಆ್ಯಂಡ್ರಾಯ್ಡ್ ಟಿವಿ ಲಾಂಚ್, ಬೆಲೆ ಎಷ್ಟು? ಏನೆಲ್ಲ ವಿಶೇಷತೆ?

Redmi Smart Band Pro 110 ಕ್ಕೂ ಹೆಚ್ಚು ವರ್ಕ್‌ಔಟ್ ಮೋಡ್‌ಗಳು, ರಕ್ತದ ಆಮ್ಲಜನಕ ಶುದ್ಧತ್ವ (SpO2) ಟ್ರ್ಯಾಕಿಂಗ್, ಹೃದಯ ಬಡಿತ ಮಾನಿಟರಿಂಗ್, ಯಾವಾಗಲೂ ಆನ್ ಡಿಸ್ಪ್ಲೇ, ಮಹಿಳೆಯರ ಋತುಚಕ್ರದ ಆರೋಗ್ಯ ಟ್ರ್ಯಾಕಿಂಗ್, ಒತ್ತಡ ಮಟ್ಟದ ಮೇಲ್ವಿಚಾರಣೆ ಮತ್ತು ನಿದ್ರೆ ಗುಣಮಟ್ಟದ ಟ್ರ್ಯಾಕಿಂಗ್‌ನೊಂದಿಗೆ ಬರುತ್ತದೆ.  ಹಲವಾರು ವೈಶಿಷ್ಟ್ಯಗಳನ್ನು ನೀಡುವುದರೊಂದಿಗೆ, ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ಸ್ಮಾರ್ಟ್ ಬ್ಯಾಂಡ್ ಪ್ರೊ ದರಗಳು ಹೇಗೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ. 
 

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ನಿಮ್ಮ ಪವರ್‌ ಬ್ಯಾಂಕ್‌ನಲ್ಲಿ ಈ 5 ಸಂಕೇತ ಕಂಡರೆ ಅದು ಟೈಂ ಬಾಂಬ್! ತಕ್ಷಣ ಈ ಕೆಲಸ ಮಾಡಿ, ದುರಂತ ತಪ್ಪಿಸಿ!
ಜಿ ಮೇಲ್ ಫುಲ್ ಆಗಿದ್ಯಾ? Zoho Mail ಟ್ರೈ ಮಾಡಿ