ಭಾರತದ ಸಾಧನೆಗೆ ಅಮೆರಿಕಾಕ್ಕೆ ಆಘಾತ

By Suvarna Web DeskFirst Published Mar 1, 2017, 3:52 PM IST
Highlights

ಕೋಟ್ಸ್ ಅವರು ಅಮೆರಿಕಾದ ಪ್ರಮುಖ ಗುಪ್ತಚರ ಸಂಸ್ಥೆ ಸಿಐಎ ಸೇರಿದಂತೆ ಹಲವು ಪ್ರಮುಖ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರಾಗಿ ನೇಮಕವಾಗಲಿದ್ದಾರೆ.

ವಾಷಿಂಗ್ಟನ್(ಮಾ.01):  ಭಾರತ ವಿಜ್ಞಾನ ರಂಗದಲ್ಲಿ ಮಾಡಿರುವ ಮಹತ್ತರ ಸಾಧನೆಗೆ ಅಮೆರಿಕಾಕ್ಕೆ ನಿಜಕ್ಕೂ ಆಘಾತವಾಗಿದೆ. ಭಾರತದ ಇಸ್ರೋ ಏಕಕಾಲದಲ್ಲಿ 100 ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆಗೊಳಿಸಿರುವುದಕ್ಕೆ ಸ್ವತಃ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಾಷ್ಟ್ರೀಯ ಗುಪ್ತಚರ ನಿರ್ದೇಶಕರಾಗಿ ಆಯ್ಕೆಯಾಗುವ ಡ್ಯಾನ್ ಕೋಟ್ಸ್ ಆಘಾತ ವ್ಯಕ್ತಪಡಿಸಿದ್ದಾರೆ.

'ಭಾರತ ಏಕಕಾಲದಲ್ಲಿ 100ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆಗೊಳಿಸಿರುವುದಕ್ಕೆ ನನಗೆ ನಿಜಕ್ಕೂ ಆಘಾತವಾಗಿತ್ತು. ವಿವಿಧ ಕಾರ್ಯ ನಿರ್ವಹಿಸುವ ಸಣ್ಣ ಗಾತ್ರದ 104 ಉಪಗ್ರಹಗಳನ್ನು ಒಮ್ಮೆಲೆ ಅಂತರಿಕ್ಷ ಕಕ್ಷೆಗೆ ಸೇರಿಸಿದೆ.  ಈ ರೀತಿಯ ಅಸಾಧ್ಯ ಸಾಧನೆ ಮಾಡಲು ಅಮೆರಿಕ ಕೂಡ ಹಿಂದೆ ಮುಂದೆ ನೋಡುತ್ತದೆ' ಎಂದು ಸಂಸದರಿಗೆ ಮಾಜಿ ಸೆನೇಟರ್ ಕೂಡ ಆಗಿರುವ ಕೋಟ್ ತಿಳಿಸಿದ್ದಾರೆ.

ಕೋಟ್ಸ್ ಅವರು ಅಮೆರಿಕಾದ ಪ್ರಮುಖ ಗುಪ್ತಚರ ಸಂಸ್ಥೆ ಸಿಐಎ ಸೇರಿದಂತೆ ಹಲವು ಪ್ರಮುಖ ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರಾಗಿ ನೇಮಕವಾಗಲಿದ್ದಾರೆ.

ಭಾರತದ ಅಂತರಿಕ್ಷ ಸಂಸ್ಥೆ ಇಸ್ರೋ ಫೆ.15 ರಂದು  ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಏಕ ಕಾಲದಲ್ಲಿ  104 ಉಪಗ್ರಹಗಳನ್ನು  ಉಡಾವಣೆಗೊಳಿಸಿತ್ತು. ಇಷ್ಟು ದೊಡ್ಡ ಮಟ್ಟದ ಉಪಗ್ರಹಗಳನ್ನು ಉಡಾವಣೆಗೊಳಿಸಿದ ವಿಶ್ವದ ಮೊದಲ ರಾಷ್ಟ್ರ ಭಾರತವಾಗಿದೆ. 2014ರಲ್ಲಿ ರಷ್ಯಾ 37 ಉಪಗ್ರಹಗಳನ್ನು ಉಡಾವಣೆಗೊಳಿಸಿದ್ದೆ ಇಲ್ಲಿಯವರೆಗಿನ ದೊಡ್ಡ ಸಾಧನೆಯಾಗಿತ್ತು.

ದೇಶೀಯ ಮೂರು ಸೇರಿದಂತೆ ಅಮೆರಿಕಾ, ಇಸ್ರೇಲ್, ಕಜಿಕಿಸ್ತಾನ್, ಹಾಲೆಂಡ್ ಸ್ವಿಟ್ಜರ್'ಲ್ಯಾಂಡ್  ಹಾಗೂ ಯುಎಇ ದೇಶಗಳ 96 ಉಪಗ್ರಹಗಳನ್ನು ಗಂಟೆಗೆ 27 ಸಾವಿರ ಕಿ.ಮೀ ವೇಗದಲ್ಲಿ ಏಕಕಾಲದಲ್ಲಿ ಉಡಾವಣೆಗೊಳಿಸಿತ್ತು. ಹಲವು ಉಪಗ್ರಹಗಳು ಅಮೆರಿಕಾದ ಸ್ಯಾನ್ ಪ್ರಾನ್ಸಿಸ್ಕೋದಲ್ಲಿನ ಅರ್ಥ್ ಇಮೇಜಿಂಗ್ ಕಂಪನಿಯ ಪ್ಲಾನೆಟ್ ಲ್ಯಾಬ್ಸ್ ಇಂಕ್'ನಿಂದ ತಯಾರಿತವಾದವು.

ಭಾರತ ಮಂಗಳ ಗ್ರಹಕ್ಕೆ ಅನ್ವೆಷಣೆಗಾಗಿ ಯಶಸ್ವಿಯಾಗಿ ಮಂಗಳಯಾನವನ್ನು ಉಡಾವಣೆಗೊಳಿಸದ ವಿಶ್ವದ 4 ರಾಷ್ಟ್ರಗಳಲ್ಲಿ ಒಂದಾಗಿದೆ.

click me!