ಸಿನಿಪ್ರಿಯರಿಗೆ ಎಕ್ಸೈಟಿಂಗ್ ಸುದ್ದಿ! ಥಿಯೇಟರ್ ಗಳ ತಂತ್ರಜ್ಞಾನವನ್ನೇ ಬದಲಿಸಲಿದೆ ಸ್ಯಾಮ್‌ಸಂಗ್!

By Web DeskFirst Published Aug 31, 2018, 7:28 PM IST
Highlights
  • ಇದುವರೆಗೆ ಚಿತ್ರಮಂದಿರಗಳಲ್ಲಿ ಪ್ರೊಜೆಕ್ಟರ್‌ಗಳೇ ಪ್ರಧಾನ ಪಾತ್ರವಹಿಸುತ್ತಿದ್ದವು. ಆದರೆ ಈ ಸ್ಯಾಮ್‌ಸಂಗ್ ಓನಿಕ್ಸ್ ಎಲ್‌ಇಡಿ ಸ್ಕ್ರೀನ್‌ಗೆ ಪ್ರೊಜೆಕ್ಟರ್ ಬೇಕಾಗಿಲ್ಲ!

ಚಿತ್ರಮಂದಿರಗಳು ಬದಲಾಗಿವೆ. ಅದರಂತೆ ಚಿತ್ರಮಂದಿರಗಳ ಸ್ಕ್ರೀನ್‌ಗಳು ಕೂಡ ಬದಲಾಗಲಿವೆ. ಅದರ ಮೊದಲ ಹೆಜ್ಜೆ ಅನ್ನುವಂತೆ ಸ್ಯಾಮ್‌ಸಂಗ್ ಓನಿಕ್ಸ್ ಎಲ್‌ಇಡಿ ಸ್ಕ್ರೀನ್ ಅನ್ನು ಜಗತ್ತಿಗೆ ಪರಿಚಯಿಸಿದೆ. 

ಇಂಟರೆಸ್ಟಿಂಗ್ ಅಂದ್ರೆ ಪಿವಿಆರ್ ಸಂಸ್ಥೆ ಸ್ಯಾಮ್‌ಸಂಗ್ ಜೊತೆ ಸೇರಿ ನವದೆಹಲಿಯಲ್ಲಿ ಓನಿಕ್ಸ್ ಎಲ್‌ಇಡಿ ಸ್ಕ್ರೀನ್‌ನಲ್ಲಿ ಸಿನಿಮಾ ವೀಕ್ಷಿಸುವ ಅವಕಾಶ ಮಾಡಿಕೊಟ್ಟಿದೆ. ಇದು ಆರಂಭ.

ಇನ್ನು ನಿಧಾನಕ್ಕೆ ಮುಂಬೈ ಪಿವಿಆರ್, ಬೆಂಗಳೂರು ಪಿವಿಆರ್ ಗಳಲ್ಲಿ ಸ್ಯಾಮ್‌ಸಂಗ್ ಓನಿಕ್ಸ್ ಎಲ್‌ಇಡಿ ಸ್ಕ್ರೀನ್ ಬರಲಿದೆ. ಇದುವರೆಗೆ ಚಿತ್ರಮಂದಿರಗಳಲ್ಲಿ ಪ್ರೊಜೆಕ್ಟರ್‌ಗಳೇ
ಪ್ರಧಾನ ಪಾತ್ರವಹಿಸುತ್ತಿದ್ದವು. ಆದರೆ ಈ ಸ್ಯಾಮ್‌ಸಂಗ್ ಓನಿಕ್ಸ್ ಎಲ್‌ಇಡಿ ಸ್ಕ್ರೀನ್‌ಗೆ ಪ್ರೊಜೆಕ್ಟರ್ ಬೇಕಾಗಿಲ್ಲ. ಇದು ಟಿವಿ ಥರ ಕೆಲಸ ಮಾಡುತ್ತದೆ. ಅಲ್ಲದೇ ಸಾಮಾನ್ಯ ಸ್ಕ್ರೀನ್
ಗೂ ಈ ಎಲ್‌ಇಡಿ ಸ್ಕ್ರೀನ್‌ಗೂ ವ್ಯತ್ಯಾಸ ಅಜಗಜಾಂತರ.

ಪಿಕ್ಚರ್ ಕ್ವಾಲಿಟಿ, ಸೌಂಡು ಎಲ್ಲವೂ ವಿಶಿಷ್ಟ ಮತ್ತು ವಿಭಿನ್ನ. ಎಚ್‌ಡಿಆರ್ ಡಿಸ್‌ಪ್ಲೇ ಇರುವ ಈ ಸ್ಕ್ರೀನುಗಳಲ್ಲಿ ಸಣ್ಣ ಸಣ್ಣ ವಿವರಗಳು ಕೂಡ ಅದ್ಭುತವಾಗಿ ಕಾಣಿಸುತ್ತವೆ. ಈ ಎಲ್ಇಡಿ ಥಿಯೇಟರ್‌ನಲ್ಲಿ ಓನಿಕ್ಸ್ ವ್ಯೆ, ಓನಿಕ್ಸ್ ತ್ರೀಡಿ ಮತ್ತು ಓನಿಕ್ಸ್ ಸೌಂಡ್ ಫೀಚರ್‌ಗಳಿವೆ.

ದೆಹಲಿಯಲ್ಲಿ ಸ್ಯಾಮ್‌ಸಂಗ್ ಓನಿಕ್ಸ್ ಎಲ್‌ಇಡಿ ಸ್ಕ್ರೀನ್ ಲಾಂಚ್ ಸಂದರ್ಭದಲ್ಲಿ ಸ್ಯಾಮ್‌ಸಂಗ್ ಸಿಇಓ ಎಚ್‌ಸಿ ಕಾಂಗ್ ಮತ್ತು ಪಿವಿಆರ್ ಜಾಯಿಂಟ್ ಮ್ಯಾನೇಜಿಂಗ್ ಡೈರೆಕ್ಟರ್ ಸಂಜೀವ್ ಬಿಜ್ಲಿ ದೇಶದ ಎಲ್ಲಾ ಕಡೆ ಓನಿಕ್ಸ್ ಎಲ್ ಇಡಿ ಸ್ಕ್ರೀನ್‌ನಲ್ಲಿ ಸಿನಿಮಾ ನೋಡುವ ಅವಕಾಶ ಲಭ್ಯವಾಗಲಿದೆ ಎಂಬ ಭರವಸೆ ನೀಡಿದ್ದಾರೆ.

click me!