3 ಹೊಸ ವಾಹನಗಳನ್ನು ದೇಶಾರ್ಪಣೆ ಮಾಡಿದ ಟಾಟಾ

By Web DeskFirst Published Aug 31, 2018, 7:10 PM IST
Highlights

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೆಚ್ಚು ಸುರಕ್ಷತಾ ಗುಣಗಳು | ಉತ್ಕೃಷ್ಟ ವಿನ್ಯಾಸ, ಅದ್ಭುತವಾದ ಇಂಧನ ದಕ್ಷತೆ, ಮತ್ತು ದೀರ್ಘ ಕಾಲದ ಸೇವಾ ಸೌಲಭ್ಯ 

ದೇಶದ ಸಾರ್ವಜನಿಕ ಸಂಪರ್ಕ ವ್ಯವಸ್ಥೆಯನ್ನು ತೆಗೆದುಕೊಂಡರೆ ಅದರಲ್ಲಿ ಶೇ. 36ಕ್ಕಿಂತಲೂ ಹೆಚ್ಚು ವಾಹನಗಳು ಟಾಟಾ ಮೋಟಾರ್ಸ್ ಕಂಪನಿಯದ್ದೇ ಆಗಿವೆ. ದೊಡ್ಡ ದೊಡ್ಡ ಬಸ್‌ಗಳಿಂದ ಹಿಡಿದು ಚಿಕ್ಕ ಚಿಕ್ಕ ಕ್ಯಾಬ್‌ಗಳ ವರೆಗೂ ಟಾಟಾ ಮೋಟಾರ್ಸ್ ಸಾರ್ವಜನಿಕರ ಅನುಕೂಲಕ್ಕೆ ತಕ್ಕಂತೆ ಸಾಕಷ್ಟು ಬಗೆಯ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಮುಂದೆ ಸಾಗುತ್ತಿದೆ.  ಈಗ ಈ ಸಾಲಿಗೆ ಮತ್ತಷ್ಟು ಶಕ್ತಿಶಾಲಿ ವಾಹನಗಳ ಸೇರ್ಪಡೆಯಾಗುತ್ತಿದೆ.

ಸ್ಟಾರ್‌ಬಸ್ ಅಲ್ಟ್ರಾ ಎಸಿ 22 ಸೀಟರ್ ಪುಶ್ ಬ್ಯಾಕ್, ಸ್ಟಾರ್ ಬಸ್ 12 ಸೀಟರ್ ಎಸಿ ಮ್ಯಾಕ್ಸಿ ಕ್ಯಾಬ್, ವಿಂಗರ್ 12 ಸೀಟರ್, ಟಾಟಾ 1515 ಎಂಸಿವಿ ಸ್ಟಾಫ್ ಬಸ್ ಮತ್ತು ಇ ಮ್ಯಾಗ್ನಾ ಇಂಟರ್ ಸಿಟಿ ಕೋಚ್ ಸೇರಿದಂತೆ ತನ್ನ ನೂತನ ಆವಿಷ್ಕಾರಗಳನ್ನು ಬಸ್ ವರ್ಲ್ಡ್ ಇಂಡಿಯಾ 2018ರಲ್ಲಿ ಈ ಎಲ್ಲಾ ಹೊಸ ಶ್ರೇಣಿಯ ಸಾರಿಗೆ ವಾಹನಗಳ ಪ್ರದರ್ಶನಕ್ಕೆ ಟಾಟಾ ಉದ್ದೇಶಿಸಿದೆ.

ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಹೆಚ್ಚು ಸುರಕ್ಷತಾ ಗುಣಗಳನ್ನು ಹೊಂದಿರುವ ಈ ಹೊಸ ವಾಹನಗಳು ಉತ್ಕೃಷ್ಟ ವಿನ್ಯಾಸ, ಅದ್ಭುತವಾದ ಇಂಧನ ದಕ್ಷತೆ, ಮತ್ತು ದೀರ್ಘ ಕಾಲದ ಸೇವಾ ಸೌಲಭ್ಯ ಹೊಂದಿರುವುದು ವಿಶೇಷ.

‘ಪ್ರತಿ ದಿನವೂ ಕೋಟ್ಯಾಂತರ ಭಾರತೀಯರು ತಮ್ಮ ಸಂಚಾರವನ್ನು ಸುರಕ್ಷಿತವಾಗಿ ನಡೆಸಬೇಕು ಎಂಬುದು ಟಾಟಾ ಸಂಸ್ಥೆಯ ಉದ್ದೇಶ. ನಾವು ನಮ್ಮ ಗ್ರಾಹಕರಿಗೆ ಸುಧಾರಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಲಕ್ಷಣಗಳನ್ನು ಹೊಂದಿರುವ ಹೊಸ ಶ್ರೇಣಿಯ ಉತ್ಪನ್ನಗಳನ್ನು ನೀಡಲು ಶ್ರಮ ವಹಿಸಿದ್ದೇವೆ’ ಎಂಬುದು ಟಾಟಾ ಉತ್ಪಾದನಾ ವಿಭಾಗದ ಮುಖ್ಯಸ್ಥ ರೋಹಿತ್ ಶ್ರೀವಾಸ್ತವ ಅವರ ಮಾತು.
 
ಭಿನ್ನ ಮಾದರಿಯ ನೂತನ ಬಸ್‌ಗಳು:

35ರಿಂದ 44 ಆಸನ ಸಾಮರ್ಥ್ಯ ಮತ್ತು ವಿಶಾಲವಾದ ಜಾಗವನ್ನು ಹೊಂದಿರುವ ಟಾಟಾ ಮಾಗ್ನ ಐಎಸ್‌ಬಿಇ 5.9 ಇಂಜಿನ್. ಟಾಟಾ ಜಿ 750 ಗೇರ್ ಬಾಕ್ಸ್ ಮತ್ತು ಮಾರ್ಕೊಪೋಲೊ ಬಸ್ ಬಾಡಿಯೊಂದಿಗೆ ಎಸಿ ಮತ್ತು ನಾನ್ ಎಸಿ ಎರಡೂ ಮಾದರಿಯಲ್ಲಿ ಲಭ್ಯ. ಹೆಚ್ಚು ಸಾಮರ್ಥ್ಯ ಮತ್ತು ಯಾತ್ರಿಕರಿಗೆ ಆರಾಮದಾಯಕ ಫೀಲ್ ನೀಡುವ ಬಸ್ ಇದು.

ಸ್ಟಾರ್ ಬಸ್ ಅಲ್ಟ್ರಾ ಎಸಿ. 12 ಸೀಟರ್‌ನಿಂದ 22 ಸೀಟರ್ ವರೆಗೆ ಭಿನ್ನ ಮಾದರಿಯಲ್ಲಿ ತಯಾರಾಗಿರುವ ಈ ಮಿನಿ ಬಸ್ ಗಳು ಸಂಪೂರ್ಣ ಪುಶ್ ಬ್ಯಾಕ್ ಸೀಟ್‌ಹೊಂದಿವೆ. ತಮ್ಮ ದರ್ಜೆಯಲ್ಲಿಯೇ ಮೊದಲ ಬಾರಿಗೆ ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್, ಎಲ್ಲಾ ಅಸನಗಳಲ್ಲಿಯೂ ಹ್ಯಾಂಡ್ ರೆಸ್ಟ್, ಐಷಾರಾಮಿ ಲೆದರ್ ಆಸನಗಳು, ಪವರ್ ಸ್ಟೀರಿಂಗ್, ಏರ್ ಬ್ರೇಕ್, ಮತ್ತು ಎಲ್‌ಇಡಿ ಲೈಟಿಂಗ್ ಸೌಲಭ್ಯ ಇವೆ.

click me!