ಜಿಯೋಗೆ ಟಕ್ಕರ್ ಕೊಡಲು ಏರ್‌ಟೆಲ್‌ನಿಂದ ಹೊಸ 365 ದಿನದ ಪ್ಲಾನ್

Published : Oct 21, 2024, 01:18 PM IST
ಜಿಯೋಗೆ ಟಕ್ಕರ್ ಕೊಡಲು ಏರ್‌ಟೆಲ್‌ನಿಂದ ಹೊಸ 365 ದಿನದ ಪ್ಲಾನ್

ಸಾರಾಂಶ

ಏರ್‌ಟೆಲ್ 365 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ₹1,999ಕ್ಕೆ ಬಿಡುಗಡೆ ಮಾಡಿದೆ. ಈ ಪ್ಲಾನ್‌ನಲ್ಲಿ ಅನ್‌ಲಿಮಿಟೆಡ್ ಕರೆಗಳು, ದೈನಂದಿನ 100 SMS ಮತ್ತು 24GB ಡೇಟಾವನ್ನು ಒದಗಿಸಲಾಗುತ್ತದೆ.

ನವದೆಹಲಿ: ಏರ್‌ಟೆಲ್ ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದು, ಇದು ದೇಶದಲ್ಲಿ 380 ಮಿಲಿಯನ್ ಅಧಿಕ ಬಳಕೆದಾರರನ್ನು ಹೊಂದಿದೆ. ಬೆಲೆ ಏರಿಕೆ ನಂತರ ಏರ್‌ಟೆಲ್‌ ಸಹ ಲಕ್ಷಾಂತರ ಬಳಕೆದಾರರನ್ನು ಕಳೆದುಕೊಂಡಿದ್ದರಿಂದ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ. ಇತ್ತ ಮೊದಲ ಸ್ಥಾನದಲ್ಲಿರುವ ಜಿಯೋ ಸಹ ಕಡಿಮೆ ಬೆಲೆಯ, ಹೆಚ್ಚು ವ್ಯಾಲಿಡಿಟಿಯ ಪ್ಲಾನ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿರುವ ಕಾರಣ ಏರ್‌ಟೆಲ್ 365 ದಿನದ ಪ್ಲಾನ್ ಬಿಡುಗಡೆ ಮಾಡಿದೆ. ಈ ಮೂಲಕ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಗೆ ದೊಡ್ಡ ಟಕ್ಕರ್ ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಏರ್‌ಟೆಲ್ 365 ದಿನಗಳ ಪ್ಲಾನ್‌ ನಲ್ಲಿ ನಿಮಗೆ ಉಚಿತವಾಗಿ ಅನ್‌ಲಿಮಿಟೆಡ್ ಕಾಲ್ ವ್ಯವಸ್ಥೆ ಸಿಗಲಿದೆ. ಒಮ್ಮೆ 1,999 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ ಒಂದು ವರ್ಷ ಹಣ ಹಾಕಿಸೋ ಅವಶ್ಯಕತೆ ಇರಲ್ಲ. ಇದೇ ಪ್ಲಾನ್‌ನಲ್ಲಿ ಗ್ರಾಹಕರಿಗೆ ಪ್ರತಿದಿನ 100 ಎಸ್‌ಎಂಎಸ್‌ ಉಚಿತವಾಗಿ ಕಳುಹಿಸಬಹುದು. ಅತಿ ಕಡಿಮೆ ಡೇಟಾ ಬಳಕೆ ಮಾಡೋರಿಗೆ ಈ ಯೋಜನೆ ಒಳ್ಳೆಯದಾಗಿದೆ. ಈ ಯೋಜನೆಯಡಿ ರೀಚಾರ್ಜ್ ಮಾಡಿಕೊಂಡರೆ ಗ್ರಾಹಕರಿಗೆ ಇಡೀ ಒಂದು ವರ್ಷಕ್ಕೆ 24 GB ಡೇಟಾ ಸಿಗುತ್ತದೆ. ಅಂದ್ರೆ ಪ್ರತಿ ತಿಂಗಳಿಗೆ ಕೇವಲ 2 GB ಡೇಟಾ ಲಭ್ಯವಾಗುತ್ತದೆ. 

365 ವ್ಯಾಲಿಡಿಟಿಯ ಈ ಪ್ಲಾನ್‌ನಲ್ಲಿ Airtel Stream ಫ್ರೀ ಆಕ್ಸೆಸ್ ಲಭ್ಯವಾಗುತ್ತದೆ. ಇಷ್ಟು ಮಾತ್ರವಲ್ಲದೇ ಈ ಯೋಜನೆ ಬಳಕೆದಾರರಿಗೆ ಉಚಿತವಾಗಿ Hello Tunes ಸಹ ಸಿಗಲಿದೆ. Apollo 24/7 Circle ಲಾಭವೂ ಗ್ರಾಹಕರಿಗೆ ಸಿಗಲಿದೆ.

ಜಿಯೋ-ಏರ್‌ಟೆಲ್‌ಗಿಂತ ಒಂದು ಹೆಜ್ಜೆ ಮುಂದಿಟ್ಟ BSNL; ಕಡಿಮೆ ಬೆಲೆಗೆ 3300 GB ಡೇಟಾ

Reliance Jio Affordable 336 Days Plan
ರಿಲಯುನ್ಸ್ ಜಿಯೋ ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಒಂದು ವರ್ಷದ ಪ್ಲಾನ್ ಹೊಂದಿದೆ. 1,899 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ 336 ದಿನದ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಂಎಸ್, ಅನ್‌ಲಿಮಿಟೆಡ್ ಕಾಲ್ ಹಾಗೂ 24 ಜಿಬಿ ಡೇಟಾ ಸಿಗುತ್ತದೆ.

Jio Rs.3,599 and 365 Days Plan
ರಿಲಯನ್ಸ್ ಜಿಯೋದಲ್ಲಿ ಮತ್ತೊಂದು 365 ದಿನ ವ್ಯಾಲಿಡಿಟಿಯ ಪ್ಲಾನ್‌ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಬಳಕೆದಾರರಿಗೆ ಪ್ರತಿದಿನ 100  ಎಸ್‌ಎಂಎಸ್, ಅನ್‌ಲಿಮಿಟೆಡ್ ಕಾಲ್ ಮತ್ತು ಪ್ರತಿದಿನ 2 ಜಿಬಿ ಡೇಟಾ ಲಭ್ಯವಾಗುತ್ತದೆ. ಇದೆಲ್ಲದರ ಜೊತೆಯಲ್ಲಿ ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋ ಕ್ಲೌಡ್ ಆಕ್ಸೆಸ್ ಲಭ್ಯವಾಗುತ್ತದೆ. 

BSNLನಿಂದ ಅತೀ ಕಡಿಮೆ ಪ್ಲಾನ್ ಘೋಷಣೆ: 108 ರೂಗೆ ಅನ್‌ಲಿಮಿಟೆಡ್ ಕಾಲ್, 1ಜಿಬಿ ಡೇಟಾ, 28 ದಿನ!

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಭಾರತದ ಶಾಶ್ವತ ಬಾಹ್ಯಾಕಾಶ ನಿವಾಸ ಬಿಎಎಸ್-01ಕ್ಕೆ ನೀಲಿ ನಕ್ಷೆ ಅಂತಿಮಗೊಳಿಸಿದ ಇಸ್ರೋ
ಆಧಾರ್​ ಕಾರ್ಡ್​ ಕಳೆದು ನಂಬರ್​ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್​ ಫಾಲೋ ಮಾಡಿ ವಾಪಸ್​ ಪಡೆಯಿರಿ