
ಮುಂಬೈ(ಎ.10): ರಿಲಾಯನ್ಸ್ ಜಿಯೋನ ಸಮರ್ ರ್ಸರ್ಪ್ರೈಜ್ ಆಫರ್ ಮುಗಿದ ಬಳಿಕ ಅತಿ ಶೀಘ್ರದಲ್ಲಿ ತನ್ನ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸುವ ಸಾಧ್ಯತೆಗಳಿವೆ.
ಕಂಪೆನಿ ತನ್ನ ಅಫೀಷಿಯಲ್ ವೆಬ್'ಸೈಟ್ ಜಿಯೋ ಡಾಟ್ ಕಾಂನಲ್ಲಿ ತನ್ನ ಇತರ ಪ್ರಾಡಕ್ಸ್'ಗಳಾದ ವೈ-ಫೈ ಹಾಟ್'ಸ್ಪಾಟ್, ಜಿಯೋ ಲಿಂಕ್, ಜಿಯೋ ಆ್ಯಪ್'ನೊಂದಿಗೆ ಹೋಂ ಬ್ರಾಟ್'ಬ್ಯಾಂಡ್ ಕುರಿತಾಗಿಯೂ ಪ್ರಸ್ತಾಪಿಸಿದೆ. ಹೀಗಾಗಿ ಅತಿ ಶೀಘ್ರದಲ್ಲೇ ಕಂಪೆನಿ ಬ್ರಾಡ್ ಬ್ಯಾಂಡ್ ಕ್ಷೇತ್ರದಲ್ಲೂ ಸೇವೆಯನ್ನು ನೀಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕಂಪೆನಿ ಸದ್ಯ ೀ ಕುರಿತಾಗಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಮೇಲೆ ನೀಡಿದ ಚಿತ್ರಗಳಲ್ಲಿ ಇದು ಸ್ಪಷ್ಟವಾಗಿ ಕಂಡು ಬರುತ್ತದೆ. ಜಿಯೋ ಲಿಂಕ್ ಎಂದರೆ ಏನು ಎಂಬುವುದು ಈವರೆಗೂ ತಿಳಿದು ಬಂದಿಲ್ಲವಾದರೂ ಪ್ರಾಡಕ್ಸ್ ವಿಜೆಟ್ ನೋಡಿದರೆ ಇದು DTH ನಂತೆ ಕಂಡು ಬರುತ್ತದೆ. ಇನ್ನು ಈ ಜಿಯೋ ಲಿಂಕ್ ಯಾವಾಗದಿಂದ ಕಾರ್ಯ ನಿರ್ವಹಿಸುತ್ತದೆ ಹಾಗೂ ಇದು ಯಾವಾಗ ಲಾಂಚ್ ಆಗಲಿದೆ ಎಂಬ ವಿಚಾರವೂ ತಿಳಿದು ಬಂದಿಲ್ಲ.
ಕೆಲ ಸಮಯದ ಹಿಂದಷ್ಟೇ ಜಿಯೋ ಬ್ರಾಡ್ ಬ್ಯಾಂಡ್ ಕ್ಷೇತ್ರಕ್ಕೂ ಕಾಲಿಡಲಿದೆ ಎಂದು ಸುದ್ದಿಯಾಗಿತ್ತು. ಅಲ್ಲದೇ ಕಳೆದ ಸಪ್ಟೆಂಬರ್'ನಲ್ಲಿ ಖುದ್ದು ಮುಖೇಶ್ ಅಂಬಾನಿ ಈ ಕುರಿತಾಗಿ ಮಾತನಾಡಿ ಕಂಪೆನಿ ಮನೆಗಾಗಿಯೇ ಜಿಯೋ ಬ್ರಾಡ್ ಬ್ಯಾಂಡ್ ಫೈಬರ್ ಟು ದ ಹೋಂ(FTTH) ನ್ನು ಪರಿಚಯಿಸಲು ಟೆಸ್ಟಿಂಗ್ ಮಾಡುತ್ತಿದೆ ಎಂದಿದ್ದರು.
ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟು ಆಫರ್'ಗಳೀಂದ ಬಿರುಗಾಳಿ ಎಬ್ಬಿಸಿದ್ದ ಜಿಯೋ, ಬ್ರಾಟ್ ಬ್ಯಾಂಡ್ ಸೆಕ್ಟರ್'ನಲ್ಲೂ ಇಂತಹುದೇ ಬಿರುಗಾಳಿ ಎಬ್ಬಿಸುವುದರಲ್ಲಿ ಅನುಮಾ
ಕೃಪೆ: NDTv
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.