ಮತ್ತೊಂದು ಬಂಪರ್ ಆಫರ್ ನೀಡಲು ಸಜ್ಜಾದ ಜಿಯೋ : ಇತರ ಕಂಪನಿಗಳಿಗೆ ನಡುಕ ಶುರು

By Suvarna Web deskFirst Published Apr 30, 2017, 11:41 AM IST
Highlights

ಹಾಗೂ ಅತ್ಯಂತ ಕಡಿಮೆ ಬೆಲೆಗೆ ಹಲವು ಸೌಲಭ್ಯಗಳನ್ನು ನೀಡಿ ದೇಶದಲ್ಲೇ ಪಾರಮ್ಯ ಮೆರದಿರುವ ರಿಲಾಯನ್ಸ್ ನೇತೃತ್ವದ ಜಿಯೋ ಸಂಸ್ಥೆ ಅದೇ ಕ್ಷೇತ್ರದಲ್ಲಿ ಮತ್ತೊಂದು ಬಂಪರ್ ಆಫರ್ ನೀಡಲು ತಯಾರಿ ನಡೆಸುತ್ತಿದೆ.

ಮುಂಬೈ(ಏ.30): ಈಗಾಗಲೇ ಮೊಬೈಲ್ ಇಂಟರ್'ನೆಂಟ್ ಟಾರಿಫ್ ವಾರ್'ನಲ್ಲಿ ಉಚಿತ ಹಾಗೂ ಅತ್ಯಂತ ಕಡಿಮೆ ಬೆಲೆಗೆ ಹಲವು ಸೌಲಭ್ಯಗಳನ್ನು ನೀಡಿ ದೇಶದಲ್ಲೇ ಪಾರಮ್ಯ ಮೆರದಿರುವ ರಿಲಾಯನ್ಸ್ ನೇತೃತ್ವದ ಜಿಯೋ ಸಂಸ್ಥೆ ಅದೇ ಕ್ಷೇತ್ರದಲ್ಲಿ ಮತ್ತೊಂದು ಬಂಪರ್ ಆಫರ್ ನೀಡಲು ತಯಾರಿ ನಡೆಸುತ್ತಿದೆ.

ಜಿಯೋ ಸಂಸ್ಥೆ ಈಗ ಮನೆಗಳಿಗೆ'ಸಂಸ್ಥೆಗಳಿಗೆ ವೇಗವಾಗಿ ಇಂಟರ್'ನೆಟ್ ನೀಡುವ ವಾಣಿಜ್ಯ ರೀತಿಯಲ್ಲಿನ ಬ್ರಾಡ್'ಬ್ಯಾಂಡ್ (ಎಫ್'ಟಿಟಿಹೆಚ್)ಸೇವೆ ನೀಡಲು ಮುಂದಾಗಿದೆ. ಜಿಯೋ ಫೈಬರ್ ಹೆಸರಿನಲ್ಗಲಿ ನೀಡುವ ಈ ಸೇವೆಯ ಕನಿಷ್ಠ ವೇಗ ಪ್ರತಿ ಸೆಕೆಂಡ್'ಗೆ 100 ಎಮ್'ಬಿ ಇರುತ್ತದೆ.

ಗರಿಷ್ಠ ಇಂಟರೆನೆಟ್ ವೇಗದ ಮಿತಿ ಊಹಿಸಲು ಸಾಧ್ಯವಿಲ್ಲದಷ್ಟಿರುತ್ತದೆ ಎಂದು ಕಂಪನಿಯ ಬಲ್ಲ ಮೂಲಗಳ ಪ್ರಕಟಣೆ ತಿಳಿಸಿದೆ. ಈ ಸೇವೆಯು ಕೂಡ  ಅತೀ ಕಡಿಮೆ ದರವಿದ್ದು, ಆರಂಭದಲ್ಲಿ ಮೊಬೈಲ್'ಗೆ ನೀಡಿದಂತೆ ಉಚಿತವಾಗಿ ಕೆಲವು ತಿಂಗಳುಗಳ ಕಾಲ ಇಂತಿಷ್ಟು ಇಂಟರೆನೆಟ್ ನೀಡುವ ಸಾಧ್ಯತೆಯಿದೆ.

ಶೀಘ್ರದಲ್ಲೇ ಈ ಸೇವೆಯನ್ನು ಜಾರಿಗೊಳಿಸುವ ಸಂಭವವಿದ್ದು, ಪ್ರಸ್ತುತ ಬ್ರಾಡ್'ಬ್ಯಾಂಡ್ ನೀಡುತ್ತಿರುವ ಏರ್'ಟೆಲ್'ಬಿ'ಎಸ್'ಎನ್'ಎಲ್ ಸೇರಿದಂತೆ ಇತರ ಕಂಪನಿಗಳಿಗೆ ಮತ್ತೊಂದು ನಡುಕ ಶುರುವಾಗಿದೆ. ಎಫ್'ಟಿಟಿಪಿ ಯೋಜನೆ ಜಾರಿಯಾದರೆ ದರ ಸಮರ ಎದುರಿಸಲು ತಯಾರಾಗಬೇಕು.

click me!