ವಾಟ್ಸಾಪ್ ಅಡ್ಮಿನ್'ಗೆ ಕಂಟಕ! ಯಾರೇ ನಿಯಮ ಉಲ್ಲಂಘಿಸಿದರೂ ಅಡ್ಮಿನ್'ಗೆ ಶಿಕ್ಷೆ

By Suvarna Web DeskFirst Published Apr 29, 2017, 5:09 AM IST
Highlights

ಸಾಮಾಜಿಕ ಜಾಲತಾಣಗಳನ್ನೇ ಜೀವಾಳ ಮಾಡಿಕೊಂಡಿರುವ ಈಗಿನ ಟ್ರೆಂಡ್'ಗೆ, ಅತಿ ಹೆಚ್ಚು ಕ್ರೇಜ್ ಹುಟ್ಟಿಸಿರುವುದು ವಾಟ್ಸಾಪ್.  ಕೆಲವರಂತು ಗ್ರೂಪ್'ಗಳಲ್ಲಿ ನಮಗೆ ಅಡ್ಮಿನ್ ನೀಡಿಲ್ಲ ಅಂತಾ ಕೆಂಡಾಮಂಡಲವಾಗಿರುತ್ತಾರೆ. ಆದರೆ ಈಗ ಗ್ರೂಪ್ ಆಡ್ಮಿನ್ ಆದವರು ಜೈಲು ಸೇರುವ ಕಾಲ ಬಂದಿದೆ. ನೀವು ವಾಟ್ಸಾಪ್ ಗ್ರೂಪ್'ನ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇಬೇಕು.

ನವದೆಹಲಿ(ಎ.29): ಸಾಮಾಜಿಕ ಜಾಲತಾಣಗಳನ್ನೇ ಜೀವಾಳ ಮಾಡಿಕೊಂಡಿರುವ ಈಗಿನ ಟ್ರೆಂಡ್'ಗೆ, ಅತಿ ಹೆಚ್ಚು ಕ್ರೇಜ್ ಹುಟ್ಟಿಸಿರುವುದು ವಾಟ್ಸಾಪ್.  ಕೆಲವರಂತು ಗ್ರೂಪ್'ಗಳಲ್ಲಿ ನಮಗೆ ಅಡ್ಮಿನ್ ನೀಡಿಲ್ಲ ಅಂತಾ ಕೆಂಡಾಮಂಡಲವಾಗಿರುತ್ತಾರೆ. ಆದರೆ ಈಗ ಗ್ರೂಪ್ ಆಡ್ಮಿನ್ ಆದವರು ಜೈಲು ಸೇರುವ ಕಾಲ ಬಂದಿದೆ. ನೀವು ವಾಟ್ಸಾಪ್ ಗ್ರೂಪ್'ನ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇಬೇಕು.

ಮೂರು ರೂಪಾಯಿಗೊಂದು TEXT ಮೆಸೇಜ್. 5 ರೂಪಾಯಿಗೊಂದು MMS ಮಾಡಿಕೊಂಡಿದ್ದ ಜನರಿಗೆ. ವೀಡಿಯೋ ಕಾಲ್, UNLIMITED TEXT ಮೆಸೇಜ್ ನೀಡಿದ್ದು ವಾಟ್ಸಾಪ್ ಎಂಬ ಮೆಸೆಂಜರ್ ಅ್ಯಪ್. 2009ರ ಜನವರಿಯಲ್ಲಿ ವಾಟ್ಸಾಪ್ ಬಂದಿದ್ದೆ ತಡ, ಜನತೆಯ ನಡುವಿನ ಬಾಂದ್ಯವಕ್ಕೆ ಹೊಸತೊಂದು ಆಯಾಮ ಸಿಕ್ಕಿತು. ಕೆಲಸಕ್ಕೊಂದು, ಸ್ನೇಹಕ್ಕೊಂದು, ಫ್ಯಾಮಿಲಿಗೊಂದು ಅಂತಾ ನಾನಾ ಗ್ರೂಪ್'ಗಳನ್ನು ಕ್ರಿಯೇಟ್ ಮಾಡಿಕೊಂಡು ಕೂತಲ್ಲೇ ಎಲ್ಲರ ಜೊತೆ ಮಾತುಕತೆ ನಡೆಸಲು ಶುರುಮಾಡಿದ್ದರು. ಆದರೆ ವಾಟ್ಸಾಪ್ ಬಳಕೆದಾರರಿಗೆ ಹೊಸದೊಂದು ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ನೀವು ಗ್ರೂಪ್ ಆಡ್ಮಿನ್ ಆಗಿದ್ರೆ ಹುಷಾರಾಗಿರಿ..!  

ನೀವು ವಾಟ್ಸಾಪ್ ಗ್ರೂಪ್ ಅಡ್ಮಿನ್ ಆಗಿದ್ದರೆ ಹುಷಾರಾಗಿರಿ. ಯಾಕೆಂದರೆ ಇತ್ತೀಚೆಗೆ ವಾಟ್ಸಾಪ್'ನಲ್ಲಿ ಅಶ್ಲೀಲ ಮೆಸೇಜ್ ಗಳು, ಸುಳ್ಳು ಸುದ್ದಿಗಳು, ಮಾರ್ಫಿಂಗ್ ಫೋಟೊಗಳ ಹಾವಳಿ ಹೆಚ್ಚಾಗಿದೆ. ಈ ಹಾವಳಿಯಿಂದ ಹಲವರ ಪ್ರಾಣಕ್ಕೆ ಕುತ್ತುಂಟಾಗಿರುವ ಪ್ರಸಂಗಗಳು ನಡೆದಿವೆ. ಹೀಗಾಗಿ ಯಾವುದೇ ಗ್ರೂಪ್'ಗಳಲ್ಲಿ ಅಶ್ಲೀಲ ಮೆಸೇಜ್, ಸುಳ್ಳು ಸುದ್ದಿಗಳು ಬಂದ್ರೆ ಅದಕ್ಕೆ ಆ ಗ್ರೂಪ್ ನ ಅಡ್ಮಿನ್ನೇ ಹೊಣೆಯಾಗುತ್ತಾರೆ. ಅವರ ವಿರುದ್ಧ ಸೈಬರ್ ಕ್ರೈಂ ಪೊಲೀಸರು ಯಾವುದೇ ಕ್ರಮವನ್ನು ತೆಗೆದುಕೊಳ್ಳಬಹುದಾಗಿದೆ.

ಜಿಲ್ಲಾ ಮ್ಯಾಜಿಸ್ಟ್ರೇಟರ್ ಯೋಗೇಶ್ವರ್ ರಾಮ್ ಮಿಶ್ರ ಮತ್ತು ಸೀನಿಯರ್ ಪೊಲೀಸ್ ಸೂಪರಿಂಡೆಂಟ್ ನಿತಿನ್ ತಿವಾರಿ ಜಂಟಿ ಆದೇಶವನ್ನ ಹೊರಡಿಸಿದ್ದು, ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಅನ್ನು ಭಾರತದಲ್ಲಿ 200 ಮಿಲಿಯನ್ ಜನರು ಬಳಕೆ ಮಾಡ್ತಿದ್ದಾರೆ. ಹೀಗಾಗಿ ವಾಟ್ಸಾಪ್ ನಲ್ಲಿ ಯಾವುದೇ ತಪ್ಪು ಮಾಹಿತಿ, ಸುಳ್ಳು ಸುದ್ದಿ, ದಾರಿ ತಪ್ಪಿಸುವಂತಹ ಸಂದೇಶಗಳು ರವಾನೆಯಾದಲ್ಲಿ, ಆ ಗ್ರೂಪ್ ನ ಅಡ್ಮಿನ್ ವಿರುದ್ಧ FIR ದಾಖಲು ಮಾಡಬಹುದು ಎಂದು ಆದೇಶಿಸಿದ್ದಾರೆ.

ವಾಟ್ಸಾಪ್ ಗ್ರೂಪ್'ನಲ್ಲಿ ಅಡ್ಮಿನ್ ಸ್ಥಾನಕ್ಕಾಗಿ ಕಾದು ಕೂತಿದ್ದ ಜನರಿಗೆ ಇದು ನಿರಾಸೆ ಮೂಡಿಸಿದೆ. ನೀವು ಅಡ್ಮಿನ್ ಆಗಿರುವ ಗ್ರೂಪ್ ನಲ್ಲಿ ನಿಮ್ಮ ವೈರಿಗಳೇನಾದರೂ ಇದ್ದರೆ, ನೀವು ಜೈಲು ಪಾಲಾಗುವುದು ಕಟ್ಟಿಟ್ಟ ಬುತ್ತಿ. ಯಾಕಂದ್ರೆ ನಿಮ್ಮ ಮೇಲಿನ ದ್ವೇಷಕ್ಕೆ ಅವರು ಗ್ರೂಪ್ ನಲ್ಲಿ ಅಶ್ಲೀಲ ಸಂದೇಶ ರವಾನಿಸಿದರೆ, ಸೈಬರ್ ಕ್ರೈಂ ಪೊಲೀಸರು ನಿಮ್ಮ ವಿರುದ್ಧ ಕೇಸ್ ದಾಖಲು ಮಾಡ್ತಾರೆ. ಈಗಾಗಲೇ ಅಡ್ಮಿನ್ ಆಗಿರೋರು ಹುಷಾರಾಗಿರಿ. ಇನ್ನು ಮುಂದೆ ಗ್ರೂಪ್ ಕ್ರಿಯೇಟ್ ಮಾಡುವವರು ಆಲೋಚಿಸಿ, ಸೂಕ್ತ ವ್ಯಕ್ತಿ ಗಳನ್ನ ಮಾತ್ರ ಗ್ರೂಪ್'ಗೆ ಸೇರಿಸಿ.

click me!