ಜೇಬಿಗೆ ಕತ್ತರಿ, ಪುಕ್ಕಟೆ ಸೌಲಭ್ಯ ಕೊಟ್ಟಿದ್ದ ಜಿಯೋದಿಂದ ಈಗ ಮಾಸ್ಟರ್ ಸ್ಟ್ರೋಕ್!

By Web Desk  |  First Published Dec 1, 2019, 10:59 PM IST

ಏರ್ ಟೆಲ್, ವೋಡಾಪೋನ್ ಹಾದಿಯಲ್ಲಿ ಜಿಯೋ/ ಮತ್ತೆ ದರ ಏರಿಕೆ ಮಾತನ್ನಾಡಿದ ಅಂಬಾನಿ ಕಂಪನಿ/ ಮಾರುಕಟ್ಟೆಯಲ್ಲಿ ದರ ಸಮರ


ಮುಂಬೈ(ಡಿ. 01)  ಪುಕ್ಕಟೆ ಸೇವೆ ನೀಡಿ ಅಪಾರ ಗ್ರಾಹಕರನ್ನು ತನ್ನ ಕಡೆ ಸೆಳೆದುಕೊಂಡಿದ್ದ ಜಿಯೋ ಈಗ ನಿಧಾನವಾಗಿ ಗ್ರಾಹಕನ ಜೇಬಿಗೆ ಕತ್ತರಿ ಹಾಕಲು ಆರಂಭಿಸಿದೆ.

ಡಿಸೆಂಬರ್ 6ರಿಂಡ ಕರೆ ಹಾಗೂ ಡೇಟಾ ಬಳಕೆ ಶುಲ್ಕಗಳನ್ನು ಶೇಕಡಾ 40 ರಷ್ಟು ಹೆಚ್ಚಿಸುವ ಮಾತುಗಳನ್ನಾಡಿದೆ. ಹಿಂದೆ ಇತರ ಟೆಲಿಕಾಂ ಕಂಪನಿಗಳಿಗೂ ಅನ್ ಲಿಮಿಟೆಡ್ ಕರೆ  ಉಚಿತ ಇತ್ತು. ಆದರೆ ಇತ್ತೀಚೆಗಷ್ಟೆ ಒಂದು ನಿಮಿಷಕ್ಕೆ 0.6 ಪೈಸಾ ದರ ನಿಗದಿ ಮಾಡಿತ್ತು.

Tap to resize

Latest Videos

undefined

ದರ ಏರಿಕೆಯಾದ್ರೂ ದುಡ್ಡು ಉಳಿಸಬಹುದು!

ಡಿ.1ರಿಂದ ಅನ್ವಯವಾಗುವಂತೆ ಮೊಬೈಲ್ ಕರೆದರ ಶೇ.30ರಷ್ಟು ಹೆಚ್ಚಿಸುವುದಾಗಿ ಏರ್‌ಟೆಲ್, ವೊಡಾಪೋನ್- ಐಡಿಯಾ ಘೋಷಿಸಿದ್ದವು.  ಆದರೆ, ದರ ಏರಿಕೆಯ ಬಗ್ಗೆ ಟೆಲಿಕಾಂ ಕಂಪನಿಗಳ ಮಧ್ಯೆ ಸಹಮತ ಮೂಡದೇ ಇರುವ ಕಾರಣ ಏರ್‌ಟೆಲ್ ಹಾಗೂ ವೋಡಾಪೋನ್‌ನಿಂದ ಈ ಕುರಿತಾದ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.

ರಿಲಯನ್ಸ್‌ ಜಿಯೋ ಮಾರುಕಟ್ಟೆಪ್ರವೇಶದ ಬಳಿಕ ದರ ಸಮರದ ಹೊಡೆತಕ್ಕೆ ಸಿಕ್ಕು ಮೊಬೈಲ್‌ ಕರೆ ದರ ಸೇರಿದಂತೆ ವಿವಿಧ ರೀತಿಯ ಸೇವೆಗಳ ದರ ಇಳಿಸಿದ್ದ ವಿವಿಧ ಟೆಲಿಕಾಂ ಕಂಪನಿಗಳು ಮತ್ತೆ ದರ ಏರಿಕೆಯ ಘೋಷಣೆ ಮಾಡಿವೆ. ಡಿಸೆಂಬರ್‌ನಿಂದಲೇ ಎಲ್ಲಾ ರೀತಿಯ ಮೊಬೈಲ್‌ ಸೇವೆಗಳ ಶುಲ್ಕವನ್ನು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್‌- ಐಡಿಯಾ ಕಂಪನಿಗಳು ಸೋಮವಾರ ಪ್ರಕಟಿಸಿವೆ. ಟೆಲಿಕಾಂ ಕಂಪನಿಗಳು ಕರೆ ಮತ್ತು ಡಾಟಾ ಶುಲ್ಕ ಏರಿಸುತ್ತಿರುವುದು ಸುಮಾರು 3 ವರ್ಷಗಳ ಬಳಿಕ.  ಹೀಗಾಗಿ ಹಲವು ವರ್ಷಗಳ ಬಳಿಕ ಮತ್ತೆ ಗ್ರಾಹಕರಿಗೆ ಮೊಬೈಲ್‌ ದರ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಏರ್‌ಟೆಲ್‌, ವೊಡಾಫೋನ್‌ ಹೊರತುಪಡಿಸಿದರೆ ಉಳಿದಿರುವ ಪ್ರಮುಖ ಕಂಪನಿಗಳೆಂದರೆ ರಿಲಯನ್ಸ್‌ ಜಿಯೋ ಮತ್ತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌. ಈ ಪೈಕಿ ಜಿಯೋ ಕೆಲ ದಿನಗಳ ಹಿಂದಷ್ಟೇ ತನ್ನ ನೆಟ್‌ವರ್ಕ್ನಿಂದ ಬೇರೆ ನೆಟ್‌ವರ್ಕ್ಗಳಿಗೆ ಮಾಡುವ ಕರೆಗಳಿಗೆ ಪ್ರತಿ ನಿಮಿಷಕ್ಕೆ 6 ಪೈಸೆಯಂತೆ ದರ ವಿಧಿಸುವ ಯೋಜನೆ ಜಾರಿಗೆ ತಂದಿದೆ. ಹೀಗಾಗಿ ಅದು ಮತ್ತೊಂದು ಸುತ್ತಿನಲ್ಲಿ ತಕ್ಷಣಕ್ಕೆ ಶುಲ್ಕ ಹೆಚ್ಚಳ ಮಾಡುವ ಸಾಧ್ಯತೆ ಕಡಿಮೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದಿಂದ ಪುನರುಜ್ಜೀವನ ಪ್ಯಾಕೇಜ್‌ ಪಡೆದುಕೊಂಡಿರುವ ಬಿಎಸ್‌ಎನ್‌ಎಲ್‌ ಕೂಡಾ ದರ ಏರಿಕೆ ಹಾದಿ ತುಳಿದರೆ ಅಚ್ಚರಿ ಇಲ್ಲ ಎನ್ನಲಾಗಿದೆ.

ದರ ಏರಿಕೆ: ರಿಲಯನ್ಸ್‌ ಜಿಯೋದ ದರ ಸಮರಕ್ಕೆ ಸಿಕ್ಕಿಬಿದ್ದು ಭಾರೀ ನಷ್ಟಅನುಭವಿಸಿದ್ದ ವೊಡಾಫೋನ್‌- ಐಡಿಯಾ ಮತ್ತು ಏರ್‌ಟೆಲ್‌ ಕಂಪನಿಗಳು ಡಿಸೆಂಬರ್‌ ತಿಂಗಳಿನಿಂದ ಕರೆ ಮತ್ತು ಡಾಟಾ ದರ ಹೆಚ್ಚಿಸುವುದಾಗಿ ಪ್ರಕಟಿಸಿವೆ. ಈ ಬಗ್ಗೆ ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವೊಡಾಫೋನ್‌-ಐಡಿಯಾ ದೂರ ಸಂಪರ್ಕ ಸಂಸ್ಥೆ, ಗ್ರಾಹಕರಿಗೆ ವಿಶ್ವದರ್ಜೆಯ ಡಿಜಿಟಲ್‌ ಸೇವೆಯನ್ನು ನಿರಂತರವಾಗಿ ಮುಂದುವರಿಸುವ ನಿಟ್ಟಿನಲ್ಲಿ, ಡಿಸೆಂಬರ್‌ 1ರಿಂದ ಜಾರಿಗೆ ಬರುವಂತೆ ಸೇವೆಯ ದರಗಳನ್ನು ಏರಿಕೆ ಮಾಡಲಾಗುತ್ತದೆ ಎಂದು ಹೇಳಿದೆ. ಆದಾಗ್ಯೂ, ಯಾವ ಸೇವೆಗೆ ಎಷ್ಟುಪ್ರಮಾಣದ ದರ ಏರಿಕೆ ಮಾಡಲಾಗುತ್ತದೆ ಎಂಬುದರ ಬಗ್ಗೆ ವೊಡಾಫೋನ್‌ ಬಹಿರಂಗಪಡಿಸಿಲ್ಲ.

 

click me!