
ಮುಂಬೈ(ಮೇ.10): ಭಾರತೀಯ ಟೆಲಿಕಾಂ ಇತಿಹಾಸದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋ ಈಗ ಮತ್ತೊಂದು ದಾಖಲೆ ಮಾಡಲು ಹೊರಟಿದೆ.
6 ತಿಂಗಳು ಡಾಟಾ,ಕರೆ ಹಾಗೂ ಎಸ್'ಎಂಎಸ್ ಸೇರಿದಂತೆ ಹಲವು ಆಫರ್ ನೀಡಿ ತದ ನಂತರ ಪುನಃ 3 ತಿಂಗಳ ಕಾಲ 303+99 ರೂ.ಗಳಿಗೆ ಅದೇ ಉಚಿತ ಸೇವೆಗಳನ್ನು ವಿಸ್ತರಿಸಿದೆ.
ಮೊಬೈಲ್ ಬಳಕೆದಾರರ ನಂತರ ಮನೆಗಳ ಕಂಪ್ಯೂಟರ್'ಗಳಿಗೆ(ಪಿಸಿ) ಒದಗಿಸುವ ಬ್ರಾಡ್'ಬ್ಯಾಂಡ್ ಸೇವೆ ಎಫ್'ಟಿಟಿ'ಹೆಚ್ (ಫೈಬರ್ ಟು ದ ಹೋಮ್) ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಿದೆ. ಸದ್ಯ ಎಫ್'ಟಿಟಿ'ಹೆಚ್ ಸೇವೆ ಮೊದಲನೆ ಹಂತದಲ್ಲಿ ದೆಹಲಿ,ಮುಂಬೈ,ಜಾಮ್ನ'ನಗರ್,ಪುಣೆ ಹಾಗೂ ಚೆನ್ನೈ ಮಾತ್ರ ಅನುಷ್ಟಾನಗೊಳಿಸಲಾಗಿದೆ. ದೇಶದಾದ್ಯಂತ ಅಧಿಕೃತವಾಗಿ ಜಾರಿಗೊಳಿಸದ ನಂತರ ಎಲ್ಲಡೆ ಈ ಸೇವೆ ಲಭ್ಯವಾಗಲಿದೆ.
ಪ್ರಾಯೋಗಿಕವಾಗಿ ಜಾರಿಗೊಳಿಸಿರುವ ಕಾರಣ ಬ್ರಾಡ್'ಬ್ಯಾಂಡ್ ಸೇವೆ ಎಫ್'ಟಿಟಿ'ಹೆಚ್ ಪಡೆಯುವ ಗ್ರಾಹಕರಿಗೆ ತಿಂಗಳಿಗೆ 100 ಎಂಬಿ'ಪಿಎಸ್ ವೇಗದಲ್ಲಿ 100 ಜಿಬಿ ಉಚಿತ ಡಾಟಾವನ್ನು 90 ದಿನಗಳ ಕಾಲ ನೀಡಲಾಗುತ್ತದೆ. ತಿಂಗಳಲ್ಲಿ 100 ಜಿಬಿ ಬಳಸಿದ ನಂತರ 1 ಎಂ'ಬಿಪಿ'ಎಸ್ ವೇಗದಲ್ಲಿ ಮತ್ತು 100 ಜಿಬಿ ಉಚಿತ ಡಾಟಾ ಸೇವೆಯನ್ನು ಬಳಸಿಕೊಳ್ಳಲು ಅವಕಾಶವಿದೆ. ಅಳವಡಿಕೆ ಶುಲ್ಕ 4500 ರೂ. ದರ ವಿಧಿಸಲಾಗಿದ್ದು, ಸೇವೆಯನ್ನು ಮುಂದುವರಿಸಲಾಗಿದಿದ್ದರೆ ಹಣವನ್ನು ವಾಪಸ್ ನೀಡಲಾಗುತ್ತದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.