
ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡುತ್ತಿದ್ದಂತೆಯೇ ಬಿರುಗಾಳಿ ಎಬ್ಬಿಸಿದ್ದ ಜಿಯೋ, ತನ್ನ ವೆಲ್ ಕಂ ಆಫರ್'ನಿಂದ ಇತರ ಕಂಪೆನಿಗಳ ನಿದ್ದೆಗೆಡಿಸಿತ್ತು. ಇನ್ನು ಜಿಯೋ ನೀಡಿದ ಈ ಆಫರ್ ಕಂಡ ಗ್ರಾಹಕರಂತೂ ಜಿಯೋ ಮೊರೆ ಹೋಗಿದ್ದರು. ಮೊದಲಿಗೆ ಕೇವಲ ಡಿಸೆಂಬರ್ವರೆಗೆ ವೆಲ್ ಕಂ ಆಫರ್'ನ್ನು ಸೀಮಿತಗೊಳಿಸಿದ್ದ ಜಿಯೋ ಬಳಿಕ ಈ ಆಫರ್'ನ್ನು ಮಾರ್ಚ್'ವರೆಗೂ ವಿಸ್ತರಿಸಿತ್ತು. ಬಳಿಕ ಗ್ರಾಹಕರು ಈ ಸೇವೆ ಪಡೆಯಬೇಕಾದರೆ ರಿಲಾಯನ್ಸ್ ಜಿಯೋ ಪ್ರೈಮ್ ಮೆಂಬರ್ಶಿಪ್ ಪಡೆದುಕೊಳ್ಳುವುದಲ್ಲದೇ ಮೂರು ತಿಂಗಳಿಗೆ 303ರೂ ರೀಚಾರ್ಜ್ ಮಾಡಿಸಬೇಕು ಎಂಬ ಪ್ರಕಟಣೆ ಹೊರಡಿಸಿದ್ದರು. ಆದರೀಗ ಜಿಯೋ ಹೊರಡಿಸಿದ ಈ ಪ್ರಕಟಣೆಯಂತೆ ರೀಚಾರ್ಜ್ ಮಾಡಿಸಿಕೊಂಡ ಗ್ರಾಹಕರು ಮಾತ್ರ ಮೂರ್ಖರಂತಾಗಿದ್ದಾರೆ. ಅದ್ಯಾಕೆ ಂತೀರಾ? ಇಲ್ಲಿದೆ ವಿವರ
ಜಿಯೋ ನೀಡಿದ್ದ ವೆಲ್ ಕಂ ಆಫರ್'ನಿಂದ ಖುಷಿಪಟ್ಟ ಗ್ರಾಹಕರು ಪ್ರೈಮ್ ಮೆಂಬರ್ಷಿಪ್ ಕುರಿತಾದ ಪ್ರಕಟಣೆ ಕೇಳುತ್ತಿದ್ದಂತೆಯೇ ಸದಸ್ಯತ್ವ ಪಡೆದುಕೊಂಡಿದ್ದಲ್ಲದೇ, ಸೇವೆಯ ಲಾಭ ಪಡೆಯಲು ಆ ಕೂಡಲೇ 303 ರೂಪಾಯಿಯ ರೀಚಾರ್ಜ್ ಮಾಡಿಸಿಕೊಂಡಿದ್ದರು. ಇನ್ನು ಪ್ರೈಮ್ ಮೆಂಬರ್ಶಿಪ್ ಪಡೆಯಲು ಎಪ್ರಿಲ್ 15 ಕೊನೆಯ ದಿನಾಂಕವಾಗಿತ್ತು.
ಸದ್ಯ ಪ್ರೈಮ್ ಮೆಂಬರ್ಶಿಪ್ ಪಡೆಯದೆ, 303 ರೂ ರೀಚಾರ್ಜ್ ಮಾಡಿಸದ ಗ್ರಾಹಕರೂ ಅನಿಯಮಿತ ಕರೆ ಹಾಗೂ ಡೇಟಾ ಸೇವೆಯನ್ನು ಈಗಲೂ ಪಡೆಯುತ್ತಿದ್ದಾರೆ ಎಂಬುವುದೇ ಕುತೂಹಲದ ವಿಚಾರ. ಒಂದೆಡೆ ಜಿಯೋ ಪ್ರಕಟನೆ ಕೇಳಿ ಆಫರ್ ಮುಗಿಯುತ್ತದೆ ಎಂದು, ಎಪ್ರಿಲ್ 15ರ ವೊಳಗೆ ರೀಚಾರ್ಜ್ ಮಾಡಿಸಿಕೊಂಡಿದ್ದರೆ. ಇತ್ತ ರೀಚಾರ್ಜ್ ಮಾಡಿಸಿಕೊಳ್ಳದ ಗ್ರಾಹಕರು ಮಾತ್ರ ಇನ್ನೂ ಮಾತ್ರ ಉಚಿತ ಡೇಟಾ ಸೇವೆ ಪಡೆಯುತ್ತಿದ್ದಾರೆ.
ಹೀಗಿರುವಾಗ ಜಿಯೋ ಕೇವಲ ತೋರಿಕೆಗಷ್ಟೇ ಈ ಪ್ರಕಟನೆ ಹೊರಡಿಸಿತೇಎಂಬ ಅನುಮಾನ ಕಾಡುತ್ತಿದೆ. ಇನ್ನು ೀವರೆಗೆ ರೀಚಾರ್ಜ್ ಮಾಡಿಸದೆ ಅನಿಯಮಿತ ಡೇಟಾ ಸೇವೆ ಪಡೆಯುತ್ತಿರುವ ಗ್ರಾಹಕರಿಗೆ ಜಿಯೋ ವತಿಯಿಂದ ಶೀಘ್ರದಲ್ಲೇ ಸಮ್ಮರ್ ಆಫರ್ ಹಾಖಿಸಿಕೊಳ್ಳಿ ಎಂಬ ಸಂದೇಶಗಳು ಬರುತ್ತಿವೆ ಎಂಬುವುದೂ ಸತ್ಯ. ಆದರೆ ಈ ಸಂದೇಶಗಳಲ್ಲಿ ಯಾವುದೇ ದಿನಾಂಕವನ್ನು ನಮೂದಿಸಲಿಲ್ಲ ಎಂಬುವುದು ಗಮನಾರ್ಹ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.