ಸ್ಮಾರ್ಟ್'ಫೋನ್ ಬೇಸರ ತಂದಿದೆಯೇ? ನ.30ರಿಂದ ಬರಲಿದೆ ತದ್ವಿರೋಧಿ ಫೋನ್

Published : Nov 20, 2016, 11:18 AM ISTUpdated : Apr 11, 2018, 12:46 PM IST
ಸ್ಮಾರ್ಟ್'ಫೋನ್ ಬೇಸರ ತಂದಿದೆಯೇ? ನ.30ರಿಂದ ಬರಲಿದೆ ತದ್ವಿರೋಧಿ ಫೋನ್

ಸಾರಾಂಶ

ಈ ಲೈಟ್'ಫೋನು ಬಹುತೇಕ ಫೋನ್ ಕಾಲ್'ಗಷ್ಟೇ ಸೀಮಿತವಾಗಿರುತ್ತದೆ. ಇದರಲ್ಲಿ ಇಂಟರ್ನೆಟ್ ಇರುವುದಿಲ್ಲ. 2ಜಿ ನ್ಯಾನೋ ಸಿಮ್ ಕಾರ್ಡ್ ಹಾಕಬಹುದು. ಮೈಕ್ರೋಫೋನ್, ಮೈಕ್ರೋ ಯುಎಸ್'ಬಿ ಪೋರ್ಟ್ ಇದರಲ್ಲಿರುತ್ತದೆ.

ನವದೆಹಲಿ(ನ. 20): ಮಧ್ಯಮ ಹಾಗೂ ಮೇಲ್ಪಟ್ಟ ವರ್ಗದ ಬಹುತೇಕರ ವೈಯಕ್ತಿಕ ಬದುಕನ್ನು ಸ್ಮಾರ್ಟ್'ಫೋನ್ ಸಂಪೂರ್ಣವಾಗಿ ಆವರಿಸಿಕೊಂಡುಬಿಟ್ಟಿದೆ. ಸ್ಮಾರ್ಟ್'ಫೋನ್'ನ ಬ್ಯಾಟರಿಯಂತೆ ಮನಸ್ಸಿನ ಶಾಂತಿಯೂ ಬೇಗಬೇಗ ಖಾಲಿಯಾಗುತ್ತಿದೆ. ಸ್ಮಾರ್ಟ್'ಫೋನ್ ತ್ಯಜಿಸಲೂ ಸಾಧ್ಯವಿಲ್ಲ; ಇಟ್ಟುಕೊಳ್ಳಲೂ ಸಾಧ್ಯವಿಲ್ಲ ಎಂಬಂತಾಗಿದೆ. ಇಂಥ ಸ್ಥಿತಿಯಲ್ಲಿ ಇದೀಗ 'Anti-Smartphone' ಎಂಬ ಹೊಸ ಟ್ರೆಂಡ್ ಸೃಷ್ಟಿಗೆ ವೇದಿಕೆ ಸಜ್ಜಾಗುತ್ತಿದೆ. ಸ್ಮಾರ್ಟ್'ಫೋನ್'ನ ಜಂಜಾಟವನ್ನು ಕಡಿಮೆ ಮಾಡಲೆಂದೇ ಆಂಟಿ-ಸ್ಮಾರ್ಟ್'ಫೋನ್'ಗಳನ್ನು ನಿರ್ಮಿಸುವ ಐಡಿಯಾಗಳು ಚಾಲನೆಯಲ್ಲಿವೆ. ಲೈಟ್'ಫೋನ್ ಎಂಬ ಪುಟ್ಟ ಸಂಸ್ಥೆ ಇಂಥದ್ದೊಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿ ಬಹಳ ದಿನವಾದರೂ ಮಾರುಕಟ್ಟೆಗೆ ಕಾಲಿಡಲು ಈಗ ಸಿದ್ಧವಾಗಿ ನಿಂತಿದೆ. ನವೆಂಬರ್ 30ರಿಂದ ಅದರ ಆಂಟಿ-ಸ್ಮಾರ್ಟ್'ಫೋನ್'ಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದೆ ವಿಶೇಷ?
ಈ ಲೈಟ್'ಫೋನ್'ನ ಮಾರುಕಟ್ಟೆ ಬೆಲೆ 100 ಡಾಲರ್ (ಸುಮಾರು 7 ಸಾವಿರ ರೂ.). ನಿಮ್ಮಲ್ಲಿ ಈಗಾಗಲೇ ಇರುವ ಸ್ಮಾರ್ಟ್'ಫೋನ್'ಗೆ ಹೆಚ್ಚುವರಿಯಾಗಿ ಈ ಲೈಟ್ ಫೋನನ್ನು ಖರೀದಿಸಬೇಕಾಗುತ್ತದೆ. ನಿಮ್ಮ ಸ್ಮಾರ್ಟ್'ಫೋನ್'ಗೆ ಬರುವ ಕರೆಗಳು ಅಪ್ಲಿಕೇಶನ್'ವೊಂದರ ಸಹಾಯದಿಂದ ಈ ಲೈಟ್'ಫೋನ್'ಗೆ ವರ್ಗವಾಗುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ ಸುಮಾರು ಮೂರು ವಾರ ಕಾಲ ಬ್ಯಾಟರಿ ಬಾಳಿಕೆ ಬರುತ್ತದೆ. ಈ ಲೈಟ್'ಫೋನು ಬಹುತೇಕ ಫೋನ್ ಕಾಲ್'ಗಷ್ಟೇ ಸೀಮಿತವಾಗಿರುತ್ತದೆ. ಇದರಲ್ಲಿ ಇಂಟರ್ನೆಟ್ ಇರುವುದಿಲ್ಲ. 2ಜಿ ನ್ಯಾನೋ ಸಿಮ್ ಕಾರ್ಡ್ ಹಾಕಬಹುದು. ಮೈಕ್ರೋಫೋನ್, ಮೈಕ್ರೋ ಯುಎಸ್'ಬಿ ಪೋರ್ಟ್ ಇದರಲ್ಲಿರುತ್ತದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories

108MP ಮಾಸ್ಟರ್ ಪಿಕ್ಸೆಲ್: ಹೊಸ ವರ್ಷಕ್ಕೆ Redmi Note 15 5G ಬಿಡುಗಡೆ! ಬೆಲೆ ಎಷ್ಟು?
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?