
ಮುಂಬೈ(ಜು.03): ಜಿಯೋ ಸೌಲಭ್ಯವನ್ನು ಇಲ್ಲಿಯವರೆಗೆ ಉಚಿತವಾಗಿ ಪಡೆಯುತ್ತಿರುವರಿಗೆ ಒಂದು ಮಹತ್ವವಾದ ಸೂಚನೆ ಬಂದಿದೆ. ಜಿಯೋ 'ಸಮ್ಮರ್ ಸರ್'ಪ್ರೈಸ್' ಆಫರ್ ಈ ತಿಂಗಳು ಕೊನೆಗೊಳ್ಳಲಿದೆ. ಗ್ರಾಹಕರು ಈ ಯೋಜನೆಯನ್ನು ಉಳಿಸಿಕೊಳ್ಳಲು ರೀಚಾರ್ಜ್ ಮಾಡಿಸಲೇಬೇಕಾಗಿದೆ.
ಜಿಯೋ 6 ತಿಂಗಳು ಉಚಿತ ಆಫರ್ ನೀಡಿದ ನಂತರ ಏಪ್ರಿಲ್'ನಲ್ಲಿ ಮತ್ತೊಂದು ಕೊಡುಗೆ ಸಮ್ಮರ್ ಸರ್'ಪ್ರೈಸ್ ಸೌಲಭ್ಯವನ್ನು ಉದ್ಘಾಟಿಸಿತ್ತು. ಅಲ್ಲದೆ ಜಿಯೋ ಪ್ರೈಮ್ ಸದಸ್ಯತ್ವದಡಿಯಲ್ಲಿ ಈ ಕೊಡುಗೆಯನ್ನು 3 ತಿಂಗಳು ವಿಸ್ತರಿಸಲಾಗಿತ್ತು. ಟ್ರಾಯ್ ಈ ಯೋಜನೆಯ ಬಗ್ಗೆ ತಕರಾರು ಎತ್ತಿದಾಗ' ಧನ್ ಧನಾ ಧನ್' ಅಂತಾ ಆಫರ್ ಹೆಸರನ್ನು ಬದಲಾಯಿಸಿತ್ತು.
ಸಮ್ಮರ್ ಸರ್ ಪ್ರೈಸ್ ಆಫರ್ ಜುಲೈ'ನಲ್ಲಿ ಮುಕ್ತಾಯಗೊಳ್ಳಲಿದ್ದು, ನೀವು ಪ್ರೈಮ್ ಸದಸ್ಯತ್ವಕ್ಕಾಗಿ 303 ರೂ.ರೀಚಾರ್ಜ್ ಯಾವಾಗ ಮಾಡಿದ್ದೀರಾ ಎಂಬುದರ ಮೇಲೆ ಯೋಜನೆ ಕಡಿತಗೊಳ್ಳುವ ದಿನಾಂಕ ನಿರ್ಧಾರವಾಗಲಿದೆ. ಏಪ್ರಿಲ್ ನಲ್ಲಿ ರೀಚಾರ್ಜ್ ಮಾಡಿಸಿದ್ರೆ ಜುಲೈ 20ಕ್ಕೆ ಕೊನೆಗೊಳ್ಳಲಿದೆ. ಕೊನೆಗೊಂಡ ನಂತರವೂ ಸಿಮ್ ಬಳಸಬೇಕೆಂದರೆ ಗ್ರಾಹಕರು ರೀಚಾರ್ಜ್ ಮಾಡಿಸಬೇಕು. 309 ರೂ. ರೀಚಾರ್ಜ್ ಮಾಡಿದ್ರೆ ಪ್ರತಿದಿನ 1 ಜಿಬಿ ಡೇಟಾ ಹಾಗೂ 28 ದಿನಗಳ ವ್ಯಾಲಿಡಿಟಿ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ಮೈ ಜಿಯೋ ಆ್ಯಪ್ ಮೂಲಕ ಮಾಹಿತಿ ಪಡೆಯಿರಿ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.