ವಾಟ್ಸ್'ಆ್ಯಪ್ ಸೇವೆ: ಆಂಡ್ರಾಯ್ಡ್, ಬ್ಲ್ಯಾಕ್ ಬೆರ್ರಿ,ನೋಕಿಯಾ'ದಲ್ಲಿ ಅವಧಿ ವಿಸ್ತರಣೆ

By Suvarna Web DeskFirst Published Jun 21, 2017, 5:38 PM IST
Highlights

ಪ್ರಖ್ಯಾತಸಾಮಾಜಿಕಮಾಧ್ಯಮವಾದವಾಟ್ಸ್'ಅಫ್ವಿಶ್ವದಾದ್ಯಂತ 120 ಕೋಟಿಗ್ರಾಹಕರನ್ನುಹೊಂದಿದೆ. ಭಾರತದಲ್ಲಿಯೇ 20 ಕೋಟಿಗೂಹೆಚ್ಚುಬಳಕೆದಾರರಿದ್ದಾರೆ.

ಬ್ಲ್ಯಾಕ್ ಬೆರ್ರಿ ಒಎಸ್,10 ಹಾಗೂ ನೋಕಿಯಾ ಎಸ್40, ನೋಕಿಯಾ ಸಿಂಬಿಯಾನ್ ಎಸ್60 ಮೊಬೈಲ್'ಗಳಲ್ಲಿ  ವಾಟ್ಸ್'ಆ್ಯಪ್ ಸೇವೆಯ ಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು 2016 ಫೆಬ್ರವರಿಯಲ್ಲಿ ಪ್ರಕಟಣೆ ಹೊರಡಿಸಿದಂತೆ ಮೇಲಿನ ವರ್ಶನ್ ಮೊಬೈಲ್'ಗಳಲ್ಲಿ ಜೂನ್ 30ಕ್ಕೆ ವಾಟ್ಸ್'ಆ್ಯಪ್ ಸೇವೆಯನ್ನು ಕೊನೆಗೊಳಿಸುವುದಾಗಿ ಸಂಸ್ಥೆ ತಿಳಿಸಿತ್ತು.

ಆದರೆ ಸೇವೆಯನ್ನು ಇನ್ನಷ್ಟು ತಿಂಗಳುಗಳ ಕಾಲ ವಿಸ್ತರಿಸಲು ಸಂಸ್ಥೆ ಮುಂದಾಗಿದೆ. ಬ್ಲ್ಯಾಕ್ ಬೆರ್ರಿ ಒಎಸ್, ಬ್ಲ್ಯಾಕ್ ಬೆರ್ರಿ 10, ವಿಂಡೋಸ್ ಫೋನ್ 8.0 ಇತರ ಹಳೆಯ ವರ್ಶನ್ ಫೋನ್'ಗಳಲ್ಲಿ  ಡಿಸೆಂಬರ್ 31, 2017ರವರೆಗೆ ವಾಟ್ಸ್'ಆ್ಯಪ್ ಸೇವೆಯಿರುತ್ತದೆ. ನೋಕಿಯಾ ಎಸ್40 ಮೊಬೈಲ್'ಗಳಲ್ಲಿ  ಡಿಸೆಂಬರ್ 31, 2018ರವರೆಗೆ ಮುಂದುವರಿಸಲಾಗಿದೆ.

ಆಂಡ್ರಾಯ್ಡ್ 2,2,7 ವರ್ಷನ್' ಹೊಂದಿರುವ ಗ್ರಾಹಕರು ಫೆಬ್ರವರಿ 1, 2020ವರೆಗೆ ವಾಟ್ಸ್'ಅಫ್ ಸೇವೆಯನ್ನು ಬಳಸಬಹುದು. ಪ್ರಖ್ಯಾತ ಸಾಮಾಜಿಕ ಮಾಧ್ಯಮವಾದ ವಾಟ್ಸ್'ಅಫ್ ವಿಶ್ವದಾದ್ಯಂತ 120 ಕೋಟಿ ಗ್ರಾಹಕರನ್ನು ಹೊಂದಿದೆ. ಭಾರತದಲ್ಲಿಯೇ 20 ಕೋಟಿಗೂ ಹೆಚ್ಚು ಬಳಕೆದಾರರಿದ್ದಾರೆ. ಇದರಿಂದ ವಿಡಿಯೋ, ವಾಯ್ಸ್ ಕಾಲಿಂಗ್ ಹಾಗೂ ಸಂದೇಶ ಜಿಐಎಫ್ ಸೇರಿದಂತೆ ಹಲವು ಉಪಯುಕ್ತ ಸೇವೆಗಳನ್ನು ಪಡೆಯಬಹುದು.

click me!