ಜಿಯೋದಿಂದ 100 ಜಿಬಿಪಿಎಸ್ ಇಂಟರ್ನೆಟ್; 25 ಸಾವಿರ ಕಿಮೀ ಸಬ್'ಮರೈನ್ ಕೇಬಲ್; ಇದು ವಿಶ್ವದಲ್ಲೇ ಅತೀದೊಡ್ಡದು

By Suvarna Web DeskFirst Published Jul 1, 2017, 2:20 PM IST
Highlights

ಪ್ಯಾರಿಸ್'ನ ಮಾರ್ಸೀಲೆ ನಗರದಿಂದ ಆರಂಭವಾಗುವ, ಏಷ್ಯಾ-ಆಫ್ರಿಕಾ-ಯೂರೋಪ್(ಎಎಇ-1) ಎಂದು ಕರೆಯಲಾಗುವ ಈ ಕೇಬಲ್ ಸಿಸ್ಟಂ ಸಮುದ್ರದೊಳಗೆ 25,000 ಕಿಮೀ ದೂರದಲ್ಲಿರುವ ಹಾಂಕಾಂಗ್'ವರೆಗೂ ಕನೆಕ್ಟ್ ಆಗುತ್ತದೆ. ಹಾಂಕಾಂಗ್ ಮತ್ತು ಸಿಂಗಾಪುರ್'ನಲ್ಲಿ ಪಾಯಿಂಟ್ಸ್ ಆಫ್ ಪ್ರೆಸೆನ್ಸ್, ಅಥವಾ ಇಂಟರ್ಫೇಸ್ ಪಾಯಿಂಟ್ಸ್ ಇರಲಿದೆ. ಯೂರೋಪ್ ಮತ್ತು ಏಷ್ಯಾದ ವಿವಿಧ ದೇಶಗಳಲ್ಲಿ 21 ಸ್ಥಳಗಳಲ್ಲಿ ಲ್ಯಾಂಡಿಂಗ್ ಪಾಯಿಂಟ್'ಗಳಿರುತ್ತವೆ. ಭಾರತದಲ್ಲಿ ಎಎಇ-1ನ ಲ್ಯಾಂಡಿಂಗ್ ಪಾಯಿಂಟ್ ಮುಂಬೈನಲ್ಲಿರಲಿದೆ.

ಮುಂಬೈ(ಜುಲೈ 01): ಭಾರತದಲ್ಲಿ ಡೇಟಾ ಸುಗ್ಗಿಗೆ ಕಾರಣವಾಗಿರುವ ರಿಲಾಯನ್ಸ್ ಜಿಯೋ ಈಗ ಮತ್ತೊಂದು ಮಹತ್ತರ ಸಾಧನೆಗೆ ಮುಂದಾಗಿದೆ. ಸಮುದ್ರದೊಳಗೆ 25 ಸಾವಿರ ಕಿಮೀ ಯಷ್ಟು ಉದ್ದದ ಕೇಬಲ್ ಸಿಸ್ಟಂ ಸ್ಥಾಪಿಸಿದೆ. ಈ ಮೂಲಕ ಟಾಟಾ ಕಮ್ಯೂನಿಕೇಶನ್ ನಂತರ ಸಬ್'ಮರೈನ್ ಕೇಬಲ್ ಸಿಸ್ಟಂ ಹೊಂದಿದ ಎರಡನೇ ಭಾರತೀಯ ಟೆಲಿಕಾಂ ಸಂಸ್ಥೆ ಎನಿಸಿದೆ. ಆದರೆ, ರಿಲಾಯನ್ಸ್ ಜಿಯೋ ಎಳೆಯುತ್ತಿರುವ ಕೇಬಲ್ ಜಗತ್ತಿನ ಅತೀ ಉದ್ದದ ಸಬ್'ಮರೈನ್ ಕೇಬಲ್ ನೆಟ್ವರ್ಕ್ ಎನಿಸಲಿದೆ. ಅದಕ್ಕಿಂತ ಹೆಚ್ಚಾಗಿ, ಇದು ಭಾರತದಲ್ಲಿ ಇಂಟರ್ನೆಟ್'ನ ವ್ಯಾಪ್ತಿಯನ್ನು ಹೆಚ್ಚಿಸಲು ಹಾಗೂ ಹೆಚ್ಚು ಸ್ಪೀಡ್'ನ ಇಂಟರ್ನೆಟನ್ನು ಒದಗಿಸಲು ನೆರವಾಗುತ್ತದೆ.

ಪ್ಯಾರಿಸ್'ನ ಮಾರ್ಸೀಲೆ ನಗರದಿಂದ ಆರಂಭವಾಗುವ, ಏಷ್ಯಾ-ಆಫ್ರಿಕಾ-ಯೂರೋಪ್(ಎಎಇ-1) ಎಂದು ಕರೆಯಲಾಗುವ ಈ ಕೇಬಲ್ ಸಿಸ್ಟಂ ಸಮುದ್ರದೊಳಗೆ 25,000 ಕಿಮೀ ದೂರದಲ್ಲಿರುವ ಹಾಂಕಾಂಗ್'ವರೆಗೂ ಕನೆಕ್ಟ್ ಆಗುತ್ತದೆ. ಹಾಂಕಾಂಗ್ ಮತ್ತು ಸಿಂಗಾಪುರ್'ನಲ್ಲಿ ಪಾಯಿಂಟ್ಸ್ ಆಫ್ ಪ್ರೆಸೆನ್ಸ್, ಅಥವಾ ಇಂಟರ್ಫೇಸ್ ಪಾಯಿಂಟ್ಸ್ ಇರಲಿದೆ. ಯೂರೋಪ್ ಮತ್ತು ಏಷ್ಯಾದ ವಿವಿಧ ದೇಶಗಳಲ್ಲಿ 21 ಸ್ಥಳಗಳಲ್ಲಿ ಲ್ಯಾಂಡಿಂಗ್ ಪಾಯಿಂಟ್'ಗಳಿರುತ್ತವೆ. ಭಾರತದಲ್ಲಿ ಎಎಇ-1ನ ಲ್ಯಾಂಡಿಂಗ್ ಪಾಯಿಂಟ್ ಮುಂಬೈನಲ್ಲಿರಲಿದೆ. ಜೊತೆಗೆ, ಅಗತ್ಯವಿದ್ದರೆ ಸಮುದ್ರದೊಳಗೆ ಇರುವ ಬೇರೆ ಕೇಬಲ್ ಸಿಸ್ಟಂಗಳೊಂದಿಗೆ ಇದು ಕೆಲಸ ಮಾಡಬಲ್ಲುದು. ಅಂದರೆ, ಬೇರೆ ಕೇಬಲ್ ಸಿಸ್ಟಂಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾದರೆ ಎಎಇ-1 ಕೇಬಲ್ ಸಿಸ್ಟಂ ಅನ್ನು ಉಪಯೋಗಿಸಬಹುದಾಗಿದೆ.

Latest Videos

ರಿಲಾಯನ್ಸ್ ಜಿಯೋದ ಎಎಇ-1 ಕೇಬಲ್ ವ್ಯವಸ್ಥೆಯಿಂದ ಭಾರತದಲ್ಲಿ 40 ಟೆರಾಬಿಟ್ ಇಂಟರ್ನೆಟ್ ಸಿಗಲಿದೆ. 100 ಜಿಬಿಪಿಎಸ್ ಡೈರೆಕ್ಟ್ ಕನೆಕ್ಟಿವಿಟಿ ಸಿಗಲಿದೆ.

ಭರ್ಜರಿ ಆಫರ್'ಗಳನ್ನು ಕೊಟ್ಟು ಭರ್ಜರಿಯಾಗಿ ಲೋಕಾರ್ಪಣೆಗೊಂಡ ರಿಲಾಯನ್ಸ್ ಜಿಯೋ ಕೋಟ್ಯಂತರ ಗ್ರಾಹಕರನ್ನು ಸೆಳೆದುಕೊಂಡಿದೆ. ಜಿಯೋದ ಬಹುತೇಕ ಗ್ರಾಹಕರು ಮನಸೋಯಿಚ್ಛೆ ಇಂಟರ್ನೆಟ್ ಬಳಸುವುದನ್ನು ರೂಢಿಸಿಕೊಂಡಿದ್ದಾರೆ. ಇದರಿಂದಾಗಿ ಭಾರತದಲ್ಲಿ, ಅದರಲ್ಲೂ ಜಿಯೋ ಗ್ರಾಹಕರಲ್ಲಿ ವಿಡಿಯೋಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಈಗ ಅಷ್ಟೊಂದು ಪ್ರಮಾಣದ ಇಂಟರ್ನೆಟ್ ಒದಗಿಸಲು ಜಿಯೋದಲ್ಲಿ ಸರಿಯಾದ ನೆಟ್ವರ್ಕ್ ಇರಲಿಲ್ಲ. ಹೀಗಾಗಿ, ಅಂಡರ್-ಸೀ ಕೇಬಲ್ ಸಿಸ್ಟಂ ಸ್ಥಾಪನೆಗೆ ಜಿಯೋ ಮುಂದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

click me!