ಮತ್ತೊಂದು ಬಿರುಗಾಳಿ ಎಬ್ಬಿಸಲು ಸಜ್ಜಾದ ಜಿಯೋ: 500 ರೂ. VoLET ಫೋನ್ ಬಿಡುಗಡೆಗೆ ಕೇವಲ 2 ವಾರ!

By Suvarna Web DeskFirst Published Jul 5, 2017, 11:55 AM IST
Highlights

ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಮತ್ತೊಂದು ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದ ಜಿಯೋ ಇದೀಗ ಬಹುನಿರೀಕ್ಷಿತ ಫೀಚರ್ ಫೋನ್(4G VoLET) ಇದೇ ತಿಂಗಳಲ್ಲಿ ಬಿಉಡುಗಡೆಗೊಳಿಸುವ ಸಾಧ್ಯತೆಗಳಿವೆ. ಇದರ ಬೆಲೆ ಫೋನ್ ನಿರ್ಮಾಣ ಕಂಪೆನಿಗಳ ಬೆವರಿಳಿಸುವಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಜಿಯೋ ತನ್ನ ಈ ನೂತನ ಮೊಬೈಲ್ ಬೆಲೆ 500 ರೂಪಾಯಿ ಒಳಗೆ ನಿಗದಿಪಡಿಸಲಿದೆ.

ನವದೆಹಲಿ(ಜು.05): ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ಮತ್ತೊಂದು ಬಿರುಗಾಳಿ ಎಬ್ಬಿಸಲು ಸಜ್ಜಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಪೈಪೋಟಿ ನೀಡಿದ ಜಿಯೋ ಇದೀಗ ಬಹುನಿರೀಕ್ಷಿತ ಫೀಚರ್ ಫೋನ್(4G VoLET) ಇದೇ ತಿಂಗಳಲ್ಲಿ ಬಿಉಡುಗಡೆಗೊಳಿಸುವ ಸಾಧ್ಯತೆಗಳಿವೆ. ಇದರ ಬೆಲೆ ಫೋನ್ ನಿರ್ಮಾಣ ಕಂಪೆನಿಗಳ ಬೆವರಿಳಿಸುವಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಜಿಯೋ ತನ್ನ ಈ ನೂತನ ಮೊಬೈಲ್ ಬೆಲೆ 500 ರೂಪಾಯಿ ಒಳಗೆ ನಿಗದಿಪಡಿಸಲಿದೆ.

ಮಾಧ್ಯಮವೊಂದರಲ್ಲಿ ಪ್ರಕಟವಾದ ವರದಿಯಲ್ಲಿ 'ರಿಲಾಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆಯಲ್ಲಿ ಇದರ ಘೋಷಣೆ ಮಾಡುವ ಸಾಧ್ಯತೆಗಳಿವೆ. ಈ ಸಭೆ ಜುಲೈ 21ಕ್ಕೆ ನಿಗದಿಯಾಗಿದೆ. ಈ ಸಭೆಯಲ್ಲಿ ರಿಲಾಯನ್ಸ್ ಜಿಯೋನ ನೂತನ ಟ್ಯಾರಿಫ್ ಪ್ಲಾನ್ ಕೂಡಾ ಘೋಷಿಸುವ ಸಂಭವವಿದೆ' ಎಂದು ತಿಳಿಸಿದೆ.

Latest Videos

ಜಿಯೋ ತನ್ನ ಈ ನೂತನ 4G ಫೋನ್ ಬೆಲೆ ಬಹಳ ಕಡಿಮೆ(500 ರೂಪಾಯಿ) ಇಡಲಿದೆ ಎನ್ನಲಾಗಿದೆ. 2G ಗ್ರಾಹಕರನ್ನು 4G ಗೆ ಶಿಫ್ಟ್'ಯತ್ತ ಸೆಳೆಯಲು ಹೀಗೆ ಮಾಡಲಾಗಿದೆಯಂತೆ. ಅಂದರೆ ರಿಲಾಯನ್ಸ್ ಜಿಯೋ ಪ್ರತಿ ಫೋನ್ ಮೇಲೆ 10 ರಿಂದ 15 ಡಾಲರ್'ನಷ್ಟು ಸಬ್ಸಿಡಿ ನೀಡುತ್ತದೆ ಎಂದು ಅರ್ಥವಾಗುತ್ತದೆ.

ಜಿಯೋ ತನ್ನ 4G ಭರ್ಜರಿ ಆಫರ್'ಗಳೊಂದಿಗೆ ಸಿಮ್ ಬಿಡುಗಡೆಗೊಳಿಸಿದ ಬಳಿಕವೂ ಗ್ರಾಹಕರು ಜಿಯೋ ಸಿಮ್ ಪಡೆದಿದ್ದರಾದರೂ ವೇಗ ತೀರಾ ಕಡಿಮೆಯಿತ್ತು. ಇದಕ್ಕೆ ಕಾರಣ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋನ್'ಗಳ ಬೆಲೆ ದುಬಾರಿ ಇದ್ದಿದ್ದು. ಇದೇ ಕಾರಣದಿಂದಾಗಿ ಜನರು 4G ಬಳಕೆ ಮಾಡಬೇಕೆಂದು ಜಿಯೋ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್'ಗಳನ್ನು ಬಿಡುಗಡೆ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

ಈ ಮೊದಲೇ ತನ್ನ ಜಿಯೋ ಸಿಮ್'ನಿಂದ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡಿದ್ದ ಕಂಪೆನಿ ಇದೀಗ ಮಗದೊಮ್ಮೆ ನೂತನ ಸ್ಮಾರ್ಟ್ ಫೋನ್'ನಿಂದ ಮೊಬೈಲ್ ಕಂಪೆನಿಗಳಲ್ಲಿ ನಡುಕ ಹುಟ್ಟಿಸುವುದಂತೂ ಸತ್ಯ.

click me!