ವಾಟ್ಸಾಪ್ ಬಳಕೆದಾರರಿಗೆ ಕಹಿಸುದ್ದಿ: ಜೂನ್ 30 ರಿಂದ ಈ ಫೋನ್'ಗಳಲ್ಲಿ ವಾಟ್ಸಾಪ್ ಬಳಕೆ ಸ್ಥಗಿತ!

By Suvarna Web DeskFirst Published Jun 16, 2017, 12:02 PM IST
Highlights

ವಾಟ್ಸಾಪ್ ಬಳಕೆದಾರರಿಗೊಂದು ಕಹಿಸುದ್ದಿ ಬಂದೊದಗಿದೆ. ಬ್ಲ್ಯಾಕ್ ಬೆರಿ OS, ಬ್ಲ್ಯಾಕ್ ಬೆರಿ 10, ನೋಕಿಯಾ S40 ಹಾಗೂ ನೋಕಿಯಾ S60 ಫೋನ್'ಗಳಲ್ಲಿ ಜೂನ್ 30 ರಿಂದ ವಾಟ್ಸಾಪ್ ಬಳಸಲು ಸಾಧ್ಯವಿಲ್ಲ.  ನವೆಂಬರ್'ನಲ್ಲಿ ಫೇಸ್'ಬುಕ್ ಬ್ರಾಂಡ್ ಬ್ಲ್ಯಾಕ್'ಬೆರಿ ಹಾಗೂ ನೋಕಿಯಾ ಸಾಫ್ಟ್'ವೇರ್'ಗಳಲ್ಲಿ ಜೂನ್'ನಿಂದ 2017 ರಿಂದ ಕಾರ್ಯ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತ್ತು. ಇದೇ ಹಿನ್ನೆಲೆಯಲ್ಲಿ ವಾಟ್ಸಾಪ್ ಕೂಡಾ ಇಂತಹುದೇ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ. ಇನ್ನು ಆ್ಯಂಡ್ರಾಯ್ಡ್ 2.2 ಫ್ರಾಯೋ, iOS 6 ಹಾಗೂ ವಿಂಡೋಸ್ ಫೋನ್ 7 ಗಳಲ್ಲಿ ಡಿಸೆಂಬರ್'ನಲ್ಲೇ ತನ್ನ ಕಾರ್ಯ ಸ್ಥಗಿತಗೊಳಿಸಿತ್ತು.

ವ್ಯಾಪಕವಾಗಿ ಬಳಸಲಾಗುವ ಇನ್ಸ್ಟಂಟ್ ಮೆಸೇಜಿಂಗ್ ಆ್ಯಪ್ ಆಗಿರುವ ವಾಟ್ಸಾಪ್ ಕಳೆದ ವರ್ಷವೇ ಕೆಲ ಫೋನ್'ಗಳಲ್ಲಿ ಕಾರ್ಯ ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಆದರೆ ಬ್ಲ್ಯಾಕ್'ಬೆರಿ ಈ ನಿರ್ಧಾರದ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ವಾಟ್ಸಾಪ್ ಕಂಪೆನಿ ಈ ಅವಧಿಯನ್ನು ಜೂನ್ 2017ರವರೆಗೆ ವಿಸ್ತರಿಸಿತ್ತು. ಆದರೀಗ ತನ್ನ ಈ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕಂಪೆನಿ ಮುಂದಿನ ದಿನಗಳಲ್ಲಿ ವಾಟ್ಸಾಪ್'ನಲ್ಲಿ ಪರಿಚಯಿಸಲಿರುವ ಫೀಚರ್'ಗಳನ್ನು ಸಮರ್ಪಕವಾಗಿ ಬಳಸುವ ಸಾಮರ್ಥ್ಯ ಈ ಫೋನ್'ಗಳಲ್ಲಿ ಇಲ್ಲ ಎಂಬ ಕಾರಣ ನೀಡಿದೆ.

ತನ್ನ ಸಪೋರ್ಟ್ ಪೇಜ್'ನಲ್ಲಿ ಈ ಕುರಿತಾಗಿ ಸ್ಪಷ್ಟನೆ ನೀಡಿರುವ ವಾಟ್ಸಾಪ್ 'ಈ ಕೆಡಳಕಂಡ ಪ್ಲ್ಯಾಟ್'ಪಾರ್ಮ್'ಗಳು ನಾವು ಮುಂದಿನ ದಿನಗಳಲ್ಲಿ ಆ್ಯಪ್'ನಲ್ಲಿ ಪರಿಚಯಿಸಲಿರುವ ಫೀಚರ್'ಗಳನ್ನು ಸಮರ್ಪಕವಾಗಿ ಬಳಸುವ ಸಾಮರ್ಥ್ಯ ಹೊಂದಿಲ್ಲ. ಒಂದು ವೇಳೆ ನೀವೂ ಈ ಫೋನ್'ಗಳನ್ನು ಬಳಸುತ್ತಿದ್ದರೆ ಶೀಘ್ರದಲ್ಲೇ ನಿಮ್ಮ ಡಿವೈಸ್'ಗಳನ್ನು ನೂತನ OS ವರ್ಶನ್'ಗೆ ಅಪ್'ಗ್ರೇಡ್ ಮಾಡಿಕೊಳ್ಳಲು ಸೂಚಿಸುತ್ತಿದ್ದೇವೆ. ಇಲ್ಲವಾದಲ್ಲಿ ಆ್ಯಂಟ್ರಾಯ್ಡ್'ನ OS 2.3.3+, iPhone running iOS 7+, or Windows Phone 8+ ಗೂ ನೀವು ಅಪ್'ಗ್ರೇಟ್ ಮಾಡಿಕೊಂಡು ವಾಟ್ಸಾಪ್ ಬಳಕೆಯನ್ನು ಮುಂದುವರೆಸಬಹುದು' ಎಂದು ತಿಳಿಸಿದೆ.

click me!