
ನವದೆಹಲಿ(ಜ.19): ಚೀನಾದ ಜನಪ್ರಿಯ ಸ್ಮಾರ್ಟ್ ಫೋನ್ ಕಂಪನಿ ರೆಡ್ ಮೀ ಈ ವರ್ಷದ ಮೊದಲ ಮತ್ತು ಬಹುದೊಡ್ಡ ಉತ್ಪನ್ನವನ್ನ ಮಾರುಕಟ್ಟೆಗೆ ಬಿಟ್ಟಿದೆ. ರೆಡ್ಮೀ ನೋಟ್-4 ಸ್ಮಾರ್ಟ್ ಫೋನನ್ನ ಮಾರುಕಟ್ಟೆಗೆ ಬಿಟ್ಟಿದೆ. ನವದೆಹಲಿಯ ಕಾರ್ಯಕ್ರಮದಲ್ಲಿ 3 ವಿಧಧ ರೆಡ್ ಮೀ ನೋಟ್-4 ಸ್ಮಾರ್ಟ್ ಫೋನ್`ಗಳನ್ನ ಪರಿಚಯಿಸಿದೆ.
2ಜಿಬಿ RAM ಮತ್ತು 32 ಜಿಬಿ ಇಂಟರ್ನಲ್ ಸ್ಟೋರೆಜ್(9999 ರೂ.), 3 ಜಿಬಿ RAM ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್(10,9999 ರೂ.), 4ಜಿಬಿ RAM ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್(12,999 ರೂ.)`ನ ಮೂರು ಮಾದರಿಯ ಸ್ಮಾರ್ಟ್ ಫೋನ್`ಗಳನ್ನ ರಿಲೀಸ್ ಮಾಡಿದೆ.
2016ರಲ್ಲಿ ಚೀನಾದಲ್ಲಿ ಬಿಡುಗಡೆಯಾದ ಅದೇ ಮಾದರಿಯ ರೆಡ್ ಮೀ-4 ಇದಾಗಿದ್ದು, ಪ್ರೋಸೆಸರ್ ಮಾತ್ರ ಬೇರೆಯಾಗಿದೆ ಎಂದು ಕ್ಸಿಯಾಮಿ ಸಂಸ್ಥೆ ತಿಳಿಸಿದೆ.
ರೆಡ್ ಮೀ ನೋಟ್-4 ವಿಶೇಷತೆ:
- 5.5 ಇಂಚಿನ ಎಚ್`ಡಿ ಡಿಸ್ ಪ್ಲೇ
- 2.2 GH ಪ್ರೋಸೆಸರ್
- SD ಬಳಸಿ 128 ಜಿಬವರೆಗೆ ಸ್ಟೋರೇಜ್
- ಮೈಕ್ರೋ ಯುಎಸ್`ಬಿ
- ಡುಯಲ್ ಸಿಮ್ 4ಜಿ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.