
ನವದೆಹಲಿ(ಜ.19): ತಂತ್ರಜ್ಞಾನ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ವೈರಸ್`ಗಳ ಹಾವಳಿ ಕೂಡ ಹೆಚ್ಚಾಗುತ್ತಿದೆ. ಇನ್ನೂ ಮೊಬೈಲ್`ಗಳನ್ನ ಹಾಳುಗೆಡವಲು ಹುಟ್ಟುಕೊಂಡಿವೆ ಎಮೋಜಿ ಮೆಸೇಜ್`ಗಳು. ಈ ಮೆಸೇಜ್ ಮೆಸೇಜ್ ನಿಮ್ಮ ಐಫೋನಿಗೆ ಎಂಟ್ರಿಯಾದರೆ ಮುಗೀತು. ನೀವು ಮೆಸೇಜ್ ಓಪನ್ ಮಾಡದಿದ್ದರೂ ಐಫೋನನ್ನ ಫ್ರೀಜ್ ಮಾಡಿಬಿಡುತ್ತದೆ.
ಮೊದಲಿಗೆ ಆಪಲ್ ಪ್ರೋ ಯೂಟ್ಯೂಬ್ ಚಾನಲ್`ನಲ್ಲಿ ಈ ಬಗ್ಗೆ ವರದಿಯಾಗಿದ್ದು, ಈ ಎಮೋಜಿ ಮೆಸೇಜ್`ಗಳಲ್ಲಿ 3 ವಿಧಗಳಿವೆ. ವೈಟ್ ಫ್ಲ್ಯಾಗ್ ಎಮೋಜಿ, ಜೀರೋ ಮತ್ತು ರೇನ್ ಬೋ ಎಂಬ 3 ವಿಧಗಳಿವೆ. ಈ ಎಮೋಜಿ ಮೆಸೇಜ್ ಮೊಬೈಲ್ ಬಂದೊಡನೆ ನಿಮ್ಮ ಮೊಬೈಲ್ ಕೆಲಸ ಸ್ಥಗಿತಗೊಳಿಸಿಬಿಡುತ್ತದೆ. ಟಚ್ ಸ್ಕ್ರೀನ್ ಮತ್ತು ಫಿಸಿಕಲ್ ಬಟನ್`ಗಳು ವರ್ಕ್ ಆಗುವುದಿಲ್ಲ.
ಫ್ರೆಂಚ್`ನ ಐಒಎಸ್ ಡೆವಲೋಪರ್ ವಿನ್ಸೆಂಟ್ ಡೆಸ್ಮರ್ಸ್ ಈ ದೋಷವನ್ನ ಪತ್ತೆ ಹಚ್ಚಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.