
ನವದೆಹಲಿ(ಜ.18): ದೂರವಾಣಿ ಸಂಸ್ಥೆಗಳ ನಡುವೆ ಈಗ ಅಕ್ಷರಶಃ ಬೆಲೆ ಸಮರ ಆರಂಭವಾಗಿದೆ. ಜಿಯೋ, ಏರ್`ಟೆಲ್`ಗಳ ಪ್ರಬಲ ಪೈಪೋಟಿ ಎದುರಿಸಲು ಸಜ್ಜಾಗಿರುವ ವೊಡಾಫೋನ್ ತನ್ನ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. 150 ರೂಪಾಯಿಗೆ 1 ಜಿಬಿ 4ಜಿ ಡೇಟಾ ಮತ್ತು 250 ರೂಪಾಯಿಗೆ 4ಜಿಬಿ ಮತ್ತು 1500 ರೂ.ಗೆ 35ಜಿಬಿ ಮಾಸಿಕ ಡೇಟಾ ಆಫರ್ ನೀಡಲು ಮುಂದಾಗಿದೆ.
ಆನ್`ಲೈನ್ ಮತ್ತು ರೀಟೇಲ್ ಶಾಪ್`ಗಳಲ್ಲೂ ಈ ಡೇಟಾ ಆಫರನ್ನ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ 1ಜಿಬಿ ಮತ್ತು 4 ಜಿಬಿ ಡೇಟಾ ಪ್ಯಾಕ್`ಗೆ ಕೊಡುತ್ತಿದ್ದ ಹಣದಲ್ಲಿ 4ಜಿಬಿ ಮತ್ತು 22ಜಿಬಿ ಡೇಟಾ ಖರೀದಿಸಬಹುದಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.