ಬಿಡುಗಡೆಗೂ ಮುನ್ನ Redmi K20 ಡೀಟೆಲ್ಸ್ ಲೀಕ್! ಇಲ್ಲಿದೆ ಫೋನ್ ವಿವರ

By Web Desk  |  First Published May 21, 2019, 2:43 PM IST

ಕಡಿಮೆ ಸಮಯದಲ್ಲಿ ಭಾರತೀಯ ಮೊಬೈಲ್ ಬಳಕೆದಾರರ ಮನಗೆದ್ದಿರುವ Xiaomiಯು ಹೊಸ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡಲು ಸಿದ್ಧತೆ ನಡೆಸಿದೆ. ಆದರೆ ಅದಕ್ಕೂ ಮುನ್ನ ಅದರ ಸ್ಪೆಸಿಫಿಕೇಶನ್ಸ್ ಮತ್ತು ಫೀಚರ್ಸ್ ವಿವರ ಸೋರಿಕೆಯಾಗಿದೆ. 


ಜೇಬಿಗೆ ‘ಭಾರವಲ್ಲದ’ ಕಾರಣ ಫ್ಲ್ಯಾಗ್‌ಶಿಪ್ ಕಿಲ್ಲರ್ ಎಂದೇ ಕರೆಯಲ್ಪಡುತ್ತಿರುವ Xiaomiಯ ಹೊಸ ಫೋನ್ Redmi K20ಯ ಸ್ಪೆಸಿಫಿಕೇಶನ್ಸ್ ಮತ್ತು ಫೀಚರ್ಸ್ ಸೋರಿಕೆಯಾಗಿವೆ ಎಂದು ವರದಿಯಾಗಿದೆ.

ಸೋರಿಕೆಯಾಗಿರುವ ಮಾಹಿತಿ ಪ್ರಕಾರ  Redmi K20ಯು 6.39 ಇಂಚಿನ HD ಪರದೆ, 19.5:9 ಆ್ಯಸ್ಪೆಕ್ಟ್ ರೇಶ್ಯೋ ಹೊಂದಿದೆ.

Tap to resize

Latest Videos

Qualcomm Snapdragon 855 ಚಿಪ್‌ಸೆಟ್ ಹೊಂದಿರುವ Redmi K20 ಸ್ಮಾರ್ಟ್‌ಫೋನ್ 20 ಮೆಗಾಪಿಕ್ಸೆಲ್ ಸಾಮರ್ಥ್ಯದ ಪಾಪ್ ಅಪ್ ಕ್ಯಾಮೆರಾ ಹೊಂದಿದೆ.  ಹಿಂಬದಿಯಲ್ಲಿ 48, 20, ಹಾಗೂ 8 ಮೆಗಾಪಿಕ್ಸೆಲ್‌ನ 3 ಕ್ಯಾಮೆರಾಗಳಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ |  ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

27W ರ‍್ಯಾಪಿಡ್ ಜಾರ್ಜಿಂಗ್ ವ್ಯವಸ್ಥೆ ಹೊಂದಿರುವ 4000mAh ಸಾಮರ್ಥ್ಯ ಇರುವ ಬ್ಯಾಟರಿ ಇದೆ. ಇನ್ನೊಂದು ವರದಿ ಪ್ರಕಾರ, Redmiಯು K20 ಮತ್ತು K20 Pro ಎಂಬ ಎರಡು ಆವೃತ್ತಿಗಳನ್ನು ಬಿಡುಗಡೆಮಾಡಲಿದೆ. 

64GB+6GB RAM, 128GB+6GB RAM, 128GB+8GB RAM, ಮತ್ತು 256GB+8GB RAM ವೇರಿಯಂಟ್ ನಲ್ಲಿ ಈ ಫೋನ್ ಗಳು ಲಭ್ಯವಿರಲಿವೆ.  

click me!