C1 ಸೀರೀಸ್ ಫೋನ್ ಸಕ್ಸಸ್ ಬೆನ್ನಲ್ಲೇ C2 ಸೀರೀಸ್ ಸ್ಮಾರ್ಟ್‌ಫೋನನ್ನು ಮಾರುಕಟ್ಟೆಗೆ ಬಿಟ್ಟ Realme; ಹೇಗಿದೆ? ಏನಿದೆ? ಬೆಲೆ ಎಷ್ಟಿದೆ? ಇಲ್ಲಿದೆ ವಿವರ
ಅಗ್ಗದ ಬೆಲೆಯಲ್ಲಿ ಚೆಂದದ ಸ್ಮಾರ್ಟ್‌ಫೋನ್ ಹುಡುಕುವವರಿಗಾಗಿಯೇ Realme ಕಂಪನಿ C1 ಸೀರೀಸ್ ಫೋನ್ ಸಕ್ಸಸ್ ಬೆನ್ನಲ್ಲೇ C2 ಸೀರೀಸ್‌ನ ಹೊಸ ಮೊಬೈಲನ್ನು ಪರಿಚಯಿಸಿದೆ.
ಇದರ ಬೆಲೆ ಕೇವಲ ರು.5999 ರಿಂದ ಪ್ರಾರಂಭ. ಮೂರು ಮಾದರಿಯ Realme C2 ಫೋನ್‌ಗಳು ಲಭ್ಯ. 2 GB RAM 16 GB ಸ್ಟೋರೇಜ್, 3 GB RAMನಲ್ಲಿ 32GB ಸ್ಟೋರೇಜ್ ಇದರ ಜೊತೆ 3GB RAMನಲ್ಲಿ 16 GB ಸ್ಟೋರೇಜ್ ಸಹ ಇದರಲ್ಲಿ ಕಾಣಬಹುದು.
ಇದನ್ನೂ ಓದಿ | ಬೆರಗುಪಡಿಸುವ ರಿಯಲ್‌ಮಿಯ ಮೊಬೈಲ್‌ಗಳು ಅಚ್ಚರಿ ಬೆಲೆಯಲ್ಲಿ!
Realme C2 ವರ್ಷನ್‌ನಲ್ಲಿ ಆ್ಯಂಡ್ರಾಯ್ಡ್ 9.0 ಪೈ ವರ್ಷನ್ ಇದ್ದು, ಬಹು ಬಾಳಿಕೆ ಬರುವ 4000 mAh ಸಾಮರ್ಥ್ಯದ ಬ್ಯಾಟರಿಯಿದೆ.
ಒಳ್ಳೆಯ ಕ್ಯಾಮೆರಾ ಸಹ ಇದೆ. 13 MP, 2 MPಯ ಎರಡು ಕ್ಯಾಮೆರಾ ಹಿಂಬದಿಯಲ್ಲಿದ್ದರೆ, 5 MP ಫ್ರಂಟ್ ಕ್ಯಾಮೆರಾ ಇದೆ. 6.10
ಇಂಚಸ್‌ನ ಟಚ್‌ಸ್ಕ್ರೀನ್ ಡಿಸ್‌ಪ್ಲೇ, ಮೀಡಿಯಾ ಟೆಕ್ ಹೀಲಿಯೊ P22ನ ಪ್ರೊಸೆಸರ್ ಇದರಲ್ಲಿ ಕಾಣಬಹುದು.