
ಕೊಲಂಬೋ[ಜೂ.20]: ಬಾಹ್ಯಾಕಾಶ ಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶ್ರೀಲಂಕಾದ ಉಪಗ್ರಹವೊಂದು ಉಡಾವಣೆಯಾಗಿದೆ. ಈ ಉಪಗ1’ ಎಂಬ ಹೆಸರಿಡಲಾಗಿದೆ
ಅಂದಹಾಗೆ ಈ ಉಪಗ್ರಹ ಅಭಿವೃದ್ಧಿಪಡಿಸಿ, ಉಡಾವಣೆ ಮಾಡಿರುವುದು ಶ್ರೀಲಂಕಾ ಸರ್ಕಾರದ ಅಧಿಕೃತ ಸಂಸ್ಥೆಯಲ್ಲ. ಜಪಾನ್‌ನ ಕ್ಯೂಶು ತಾಂತ್ರಿಕ ಸಂಸ್ಥೆಯಲ್ಲಿ ಬಾಹ್ಯಾಕಾಶ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಲಂಕಾ ಮೂಲದ ಎಂಜಿನಿಯರ್‌ಗಳಾದ ಥರಿಂದು ದಯಾರತ್ನೆ ಹಾಗೂ ದುಲಾನಿ ಚಮಿಕಾ.
1.05 ಕೆ.ಜಿ. ತೂಕದ ‘ರಾವಣ-1’ ಉಪಗ್ರಹವನ್ನು ಈ ವಿದ್ಯಾರ್ಥಿಗಳು ಜಪಾನ್ ನ ಬಾಹ್ಯಾಕಾಶ ಸಂಸ್ಥೆಗೆ ಫೆ.18ರಂದು ಹಸ್ತಾಂತರಿಸಿದ್ದರು. ಏ.17ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ರವಾನಿಸಲಾಗಿತ್ತು. ಸೋಮವಾರ ಈ ಉಪಗ್ರಹವನ್ನು ಬಾಹ್ಯಾಕಾಶ ನಿಲ್ದಾಣದಿಂದಲೇ ಉಡಾವಣೆ ಮಾಡಲಾಗಿದೆ. ಈ ಉಪಗ್ರಹ ಕಕ್ಷೆಗೆ ಸೇರಿದೆ ಎಂದು ಲಂಕಾ ಪತ್ರಿಕೆ ವರದಿ ಮಾಡಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.