ಫಾರ್‌ರನ್ನರ್ಸ್ ಸ್ಮಾರ್ಟ್‌ವಾಚ್! ಇದು ಬರೇ ಸ್ಮಾರ್ಟ್‌ವಾಚ್ ಅಲ್ಲ! ನಿಮ್ಮ ಸಂಗೀತದ ಸಂಗಾತಿ ಕೂಡಾ
ಫಿಟ್ನೆಸ್‌ಗೆ ಒಂದು ಗೋಲ್ ಇಟ್ಟುಕೊಂಡಿರಬೇಕು. ಇಲ್ಲಾಂದ್ರೆ ವರ್ಕೌಟ್ ಮಾಡಲು ಉತ್ಸಾಹ ಇರಲ್ಲ. ಈಗೀಗ ಸ್ಮಾರ್ಟ್‌ವಾಚ್‌ಗಳಲ್ಲೇ ನೀವೆಷ್ಟು ದೂರ ನಡೆದಿದ್ದೀರಿ, ಎಷ್ಟು ವರ್ಕೌಟ್ ಮಾಡಿದ್ದೀರಿ ಅಂತ ಕೌಂಟ್ ಸಿಗುತ್ತೆ.
ಫಿಟ್‌ನೆಸ್ ಕ್ರೇಜ್ ಹೆಚ್ಚಾಗಿರುವ ಕಾರಣ ಇಂಥ ಸ್ಮಾರ್ಟ್‌ವಾಚ್‌ಗಳಿಗೂ ಬೇಡಿಕೆ ಹೆಚ್ಚಿದೆ. ಇದೀಗ ಜರ್ಮಿನ್ ಇಂಡಿಯಾ ‘ಫಾರ್ ರನ್ನರ್ಸ್ 245 ಹಾಗೂ ಫಾರ್ ರನ್ನರ್ಸ್ 245 ಮ್ಯೂಸಿಕ್ ಸ್ಮಾರ್ಟ್ ವಾಚ್‌ಗಳನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ | ಫೇಸ್ಬುಕ್‌ಗೆ ಭಾರೀ ಆಘಾತ; ಹೊಸ ಸೇವೆಗೆ ಬ್ರೇಕ್!
ಇದರಲ್ಲಿ ಜಿಪಿಎಸ್ ಸೌಲಭ್ಯವೂ ಇದೆ. ಎಷ್ಟು ಓಡಿದ್ದೀವಿ ಅನ್ನೋ ವಿವರ ಸಿಗುತ್ತೆ. ಅದರ ಜೊತೆಗೆ ಇದರಲ್ಲಿ 500ಕ್ಕೂ ಹೆಚ್ಚು ಹಾಡು ಹಾಕ್ಕೊಳಬಹುದು.
ಹಾಡು ಕೇಳುತ್ತ ಓಡೋ ಖುಷಿ ಇದರಲ್ಲಿ ಸಿಗುತ್ತೆ. ಅಂದ ಹಾಗೆ ಇದರ ಬೆಲೆ 29990 ರು.ನಿಂದ ಆರಂಭವಾಗುತ್ತೆ!