ಎಲ್ಲರ ಬಳಿ ಇರುವ  ಈ ಮೊಬೈಲ್ ಆ್ಯಪ್ ಬಳಸಿದ್ರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ..!

By Web Desk  |  First Published Feb 18, 2019, 7:29 PM IST

ಆಧುನಿಕ ಯುಗದಲ್ಲಿ ಹ್ಯಾಕರ್‌ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಬಹಳ ಸುಲಭವಾಗಿ ಕದ್ದು ಬಿಡಬಹುದು. ಈ ಬಗ್ಗೆ ಆಗಾಗ ಜಾಗೃತಿ ಮತ್ತು ಎಚ್ಚರಿಕೆ ನೀಡುತ್ತಲೆ ಇರುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಲೆ ಇವೆ. ಆದರೆ ಈಗ ಸ್ವತಃ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಒಂದು ಮಹತ್ವದ ಎಚ್ಚರಿಕೆ ನೀಡಿದೆ.


ನವದೆಹಲಿ[ಫೆ.18]  ನೀವು 'ಎನಿಡೆಸ್ಕ್‌' ಮೊಬೈಲ್‌ ಆ್ಯಪ್‌ ಬಳಕೆ ಮಾಡುತ್ತಿದ್ದೀರಾ? ಹಾಗಾದರೆ ಈ ಕೂಡಲೆ ಅದನ್ನು ಅನ್ ಇಸ್ಟಾಲ್ ಮಾಡಿಬಿಡಿ.

 'ಎನಿಡೆಸ್ಕ್‌' ಮೊಬೈಲ್‌ ಆ್ಯಪ್‌ ಅನ್ನು ಹ್ಯಾಕರ್‌ಗಳು ವಂಚನೆಗೆ ಬಳಸುತ್ತಿದ್ದು, ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡದಂತೆ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಎಚ್ಚರಿಸಿದೆ.  ಪ್ಲೇಸ್ಟೋರ್‌ ಮತ್ತು ಆ್ಯಪ್‌ಸ್ಟೋರ್‌ನಲ್ಲಿರುವ ಎನಿಡೆಸ್ಕ್‌ ಅನ್ನು ಡೌನ್‌ಲೋಡ್‌ ಮಾಡುವುದು ನಾವೇ ಅಪಾಯಕ್ಕೆ ಆಹ್ವಾನ ನೀಡಿದಂತೆ.  ಹ್ಯಾಕರ್‌ಗಳು ಈ ಆ್ಯಪ್‌ ಅನ್ನು ತಮ್ಮ ನಿಯಂತ್ರಣಕ್ಕೆ ಪಡೆದು, ಗ್ರಾಹಕರ ಮೊಬೈಲ್‌ನ ಬ್ಯಾಂಕ್ ಖಾತೆ ಮಾಹಿತಿಗೆ ಕನ್ನ ಹಾಕುತ್ತಿದ್ದಾರೆ ಎಂಬ ಎಚ್ಚರಿಕೆ ನೀಡಲಾಗಿದೆ.

Tap to resize

Latest Videos

ಅತಿ ಹೆಚ್ಚು ರೇಡಿಯೇಷನ್ ಹೊಂದಿರುವ ಫೋನ್ ಲಿಸ್ಟ್ ಔಟ್: ನಿಮ್ಮದು ಯಾವುದು?

ಕಳ್ಳತನ ಹೇಗೆ?
ಈ ಆ್ಯಪ್‌ ಡೌನ್‌ಲೋಡ್‌ ಆದ ಮೇಲೆ, ಆ್ಯಪ್‌ ನೀಡುವ 9 ಅಂಕಿಗಳ ಕೋಡ್‌ ಅನ್ನು ಕಳುಹಿಸುವಂತೆ ಗ್ರಾಹಕರನ್ನು ಹ್ಯಾಕರ್‌ಗಳು ಕೇಳುತ್ತಾರೆ. ಗ್ರಾಹಕರ ಮೊಬೈಲ್‌ ಸಾಧನದ ಮೇಲೆ ನಿಯಂತ್ರಣ ಪಡೆಯುವ ಹ್ಯಾಕರ್‌ಗಳು ತಮಗೆ ಬೇಕಾದ ಎಲ್ಲ ವಿವರ ಪಡೆದುಕೊಳ್ಳುತ್ತಾರೆ.

ವ್ಯಾಲೆಟ್  ಮತ್ತು ಮೊಬೈಲ್ ಅಪ್ಲಿಕೇಶನ್ ಬಳಸುವ ಮನ್ನ ಎಚ್ಚರಿಕೆ ಅಗತ್ಯ. ಅದರಲ್ಲೂ ಓಟಿಪಿ ಮತ್ತು ಕೋಡ್ ಹಂಚಿಕೊಳ್ಳುವಾಗ ಯಾವ ಮೂಲ ಮತ್ತು ಯಾವ ಆಧಾರದ ಮೇಲೆ ಕೇಳುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕಾದದ್ದು ಅತ್ಯಗತ್ಯ.

click me!