ಝೂಮ್ ಆ್ಯಪ್ ಆವಾಂತರ | ಆನ್‌ಲೈನ್ ಕ್ಲಾಸ್‌ನಲ್ಲಿಯೇ ಪೋರ್ನ್ ಪ್ರಸಾರ | ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಘಟನೆ | ಮುಜುಗರಕ್ಕೆ ಗುರಿಯಾದ ಮಹಿಳಾ ಪ್ರಾಧ್ಯಾಪಕರು
ಬೆಂಗಳೂರು(ಮೇ 22) ಝೂಮ್ ಅಪ್ಲಿಕೇಶನ್ ಸುರಕ್ಷಿತ ಅಲ್ಲ ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತಲೇ ಇವೆ. ಲಾಕ್‌ಡೌನ್ ಅನಿವಾರ್ಯಕ್ಕೆ ಸಿಕ್ಕ ಕಚೇರಿಗಳು, ಸರ್ಕಾರಿ ಇಲಾಖೆಗಳು ಝೂಮ್ ಮೂಲಕವೇ ಸಭೆ ನಡೆಸುತ್ತಿವೆ
ಆನ್‌ಲೈನ್ ಮೀಟಿಂಗ್‌ನಲ್ಲಿ ಬೆತ್ತಲೆಯಾಗಿ ಓಡಾಡಿದ, ಆನ್‌ಲೈನ್ ಮೀಟಿಂಗ್‌ನಲ್ಲೇ ಕ್ಯಾಮೆರಾ ಆಫ್ ಮಾಡದೇ ಸ್ನಾನ ಮಾಡಿದ ಎಂಬೆಲ್ಲ ಸುದ್ದಿಗಳನ್ನ ಕೇಳಿ ಅರಗಿಸಿಕೊಂಡಿದ್ದೇವೆ. ಝೂಮ್ ಆ್ಯಪ್ ಆನ್‌ಲೈನ್ ಮೀಟಿಂಗ್‌ನಲ್ಲೇ ಬ್ಲೂ ಫಿಲ್ಮ್ ಪ್ರಸಾರವಾದರೆ?!
undefined
ಎಲ್ಲಾ ಲಾಕ್ ಡೌನ್ ಮಹಿಮೆ, ಪೋಲಿ ಚಿತ್ರ ವೀಕ್ಷಣೆ ಸಿಕ್ಕಾಪಟ್ಟೆ ಏರಿಕೆ
ಹೌದು.. ಇದು ದೂರದ ಯಾವುದೇ ದೇಶದಲ್ಲಿ ನಡೆದ ಕತೆಯಲ್ಲ. ನಮ್ಮ ಬೆಂಗಳೂರಿನದ್ದೇ ಕತೆ. ಕೆಂಗೇರಿಯ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಥ ಘಟನೆ ನಡೆದುಹೋಗಿದೆ. ಕೆಮೆಸ್ಟ್ರಿ ಕ್ಲಾಸ್ ನಡೆಯುತ್ತಿದ್ದ ವೇಳೆ ಪೋರ್ನ್ ಚಿತ್ರ ಪ್ರಸಾರವಾಗಿದೆ. 45-50 ವಿದ್ಯಾರ್ಥಿಗಳು ಇದ್ದರು. ಮಹಿಳಾ ಪ್ರಾಧ್ಯಾಪಕರ ಪರಿಸ್ಥಿತಿಯಂತೂ ಯಾರಿಗೂ ಬೇಡ.
ಪೋರ್ನ್ ಪ್ರಸಾರವಾಗುತ್ತಿರುವುದು ಗೊತ್ತಾಗುತ್ತಿದ್ದಂತೆ ಕ್ಲಾಸ್ ಅರ್ಧಕ್ಕೆ ನಿಲ್ಲಿಸಲಾಗಿದ್ದು ಇನ್ನು ಮುಂದೆ ಝೂಮ್ ಆ್ಯಪ್ ಸಹವಾಸ ಬೇಡ ಎಂಬ ನಿರ್ಧಾರಕ್ಕೆ ಬರಲಾಗಿದೆ.
ಕಾಲೇಜಿನ ವಿದ್ಯಾರ್ಥಿಗಳೇ ಹ್ಯಾಕ್ ಮಾಡಿ ಇಂಥ ಕೆಲಸ ಮಾಡಿದ್ದಾರೆ ಎಂದು ಕಾಲೇಜು ಆಡಳಿತ ಮಂಡಳಿಯೇ ಹೇಳಿದೆ. ಈಗಾಗಲೇ ಸಿಂಗಪುರ ಝೂಮ್ ಅನ್ನು ಬ್ಯಾನ್ ಮಾಡಿದೆ.