
ಬೆಂಗಳೂರು (ಫೆ.03): ದೇಶದ ಅತ್ಯಂತ ಕಡಿಮೆ ಬೆಲೆಯ ಫೀಚರ್ ಫೋನ್ ಐಕಾಲ್ ಕೆ71 ಅನ್ನು ಶಾಪ್'ಕ್ಲೂಸ್ ಕಂಪೆನಿ ಬಿಡುಗಡೆ ಮಾಡಿದೆ.
ಈ ಫೋನ್ ಕೇವಲ 249 ರೂ,ಗೆ ಶಾಪ್'ಕ್ಲೂಸ್‌ನಲ್ಲಿ ಲಭ್ಯವಿರುತ್ತದೆ. ಬುಕ್ ಮಾಡಿದ 24 ಗಂಟೆಗಳಲ್ಲಿ ಮೊಬೈಲ್ ಗ್ರಾಹಕರ ಕೈ ಸೇರಲಿದ್ದು 1 ವರ್ಷದ ವಾರೆಂಟಿ ಇರುತ್ತೆ. ಐಕಾಲ್ ಕೆ 71 ಸಿಂಗಲ್ ಸಿಮ್ ಫೋನ್‌ಆಗಿದ್ದು 800 ಎಂಎಎಚ್ ಬ್ಯಾಟರಿ ಹೊಂದಿರುತ್ತದೆ. ಈ ಫೋನ್ 1.4 ಇಂಚುಗಳ ಮೊನೊಕ್ರೋಮ್ ಡಿಸ್'ಪ್ಲೇ ಜೊತೆಗೆ ಎಫ್‌ಎಂ ರೇಡಿಯೋ ಮತ್ತು ಟಾರ್ಚ್ ಸೌಲಭ್ಯ ಒಳಗೊಂಡಿದೆ. ಐಕಾಲ್ ಕೆ71 ಟ್ರೆಂಡಿ ನಿಯಾನ್ ಬಣ್ಣಗಳಾದ ಕೆಂಪು, ಹಳದಿ, ನೀಲಿ ಮತ್ತು ಗಾಢ ನೀಲಿ ಛಾಯೆಗಳಲ್ಲಿ ಬಿಐಎಸ್ ಮಾನ್ಯತೆಯೊಂದಿಗೆ ಲಭ್ಯವಿರುತ್ತವೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.