
ಬೆಂಗಳೂರು (ಫೆ.01): ಗೂಗಲ್ ಪ್ಲೇ ಸ್ಟೋರ್ ತೆರೆದರೆ ಅದರಲ್ಲಿ ನಿಮಗೆ ಲಕ್ಷಾಂತರ ಆ್ಯಪ್‌ಗಳು ಸಿಗುತ್ತವೆ. ಅವುಗಳಲ್ಲಿ ವಿಶ್ವಾಸಾರ್ಹ ಆ್ಯಪ್‌ಗಳು ಕೆಲವಷ್ಟೇ ಇರುತ್ತವೆ. ಬಹಳಷ್ಟು ಕೆಟ್ಟ ಆ್ಯಪ್‌ಗಳೇ ಇರುತ್ತವೆ. ಆ ಕೆಟ್ಟ ಆ್ಯಪ್‌ಗಳನ್ನು ನಿರ್ಮೂಲನೆಗೊಳಿಸುವ ಕೆಲಸಕ್ಕೆ ಗೂಗಲ್ ಮುಂದಾಗಿದೆ.
ಈಗಾಗಲೇ ಸುಮಾರು 7 ಲಕ್ಷ ಆ್ಯಪ್‌ಗಳನ್ನು ಕಿತ್ತೆಸೆದಿದೆ. ಜೊತೆಗೆ ಒಂದು ಲಕ್ಷ ಡೆವಲಪರ್'ಗಳನ್ನೂ ಗೂಗಲ್ ಲಿಸ್ಟ್‌ನಿಂದ ತೆಗೆದು ಹಾಕಲಾಗಿದೆ.
ಮಾಲ್'ವೇರ್‌ಗಳಿಂದ ತೊಂದರೆ ಕೊಡುತ್ತಿದ್ದ, ಒಳ್ಳೆಯ ಉದ್ದೇಶ ಹೊಂದಿಲ್ಲದ, ಬಳಕೆದಾರರಿಗೆ ತೊಂದರೆ ನೀಡುವಂತಿದ್ದ ಕಳಪೆ ಆ್ಯಪ್‌ಗಳನ್ನು ತೆಗೆದು ಹಾಕಿರುವುದಾಗಿ ಗೂಗಲ್ ಹೇಳಿಕೊಂಡಿದೆ. ಅನೇಕರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.