ನಿಸಾನ್'ನಿಂದ ಬ್ರೈನ್-ಟು ವೆಹಿಕಲ್ ತಂತ್ರಜ್ಞಾನ ಆವಿಷ್ಕಾರ

By Suvarna Web DeskFirst Published Feb 3, 2018, 8:28 PM IST
Highlights

ವಾಹನಗಳು ಚಾಲಕ ಮಾಡುವ ಯೋಚನೆಗಳು ಅಥವಾ ಸಿಗ್ನಲ್‌ಗಳಿಗೆ ತಕ್ಕಂತೆ ಸಂಚಾರ ಮಾಡಬಲ್ಲುವೇ? ಅಥವಾ ಆ ಯೋಚನೆಗಳಿಗೆ ತಕ್ಕಂತೆ ವರ್ತಿಸಬಲ್ಲುವೇ? ಹೌದು ಎನ್ನುತ್ತದೆ ನಿಸಾನ್ ನಡೆಸಿರುವ ಸಂಶೋಧನೆ.

ಬೆಂಗಳೂರು (ಫೆ.03): ವಾಹನಗಳು ಚಾಲಕ ಮಾಡುವ ಯೋಚನೆಗಳು ಅಥವಾ ಸಿಗ್ನಲ್‌ಗಳಿಗೆ ತಕ್ಕಂತೆ ಸಂಚಾರ ಮಾಡಬಲ್ಲುವೇ? ಅಥವಾ ಆ ಯೋಚನೆಗಳಿಗೆ ತಕ್ಕಂತೆ ವರ್ತಿಸಬಲ್ಲುವೇ? ಹೌದು ಎನ್ನುತ್ತದೆ ನಿಸಾನ್ ನಡೆಸಿರುವ ಸಂಶೋಧನೆ.

ಅಚ್ಚರಿ ಮೂಡಿಸುವ ಸಂಶೋಧನಾ ವರದಿಯನ್ನು ವಾಹನಗಳ ತಯಾರಿಕಾ ಕಂಪನಿಯಾಗಿರುವ ನಿಸಾನ್ ಬಿಡುಗಡೆ ಮಾಡಿದೆ. ಈ ತಂತ್ರಜ್ಞಾನಕ್ಕೆ ಬ್ರೈನ್-ಟು-ವೆಹಿಕಲ್ ಅಥವಾ ಬಿ2ವಿ ಎಂದು ನಾಮಕರಣ ಮಾಡಿದೆ. ಚಾಲಕನ ಆಲೋಚನೆ ಅಥವಾ ಸೂಚನೆಗಳನ್ನು ಕ್ಷಿಪ್ರವಾಗಿ ಗ್ರಹಿಸಲಿರುವ ಈ ತಂತ್ರಜ್ಞಾನ ವಾಹನದ ಸ್ಟಿಯರಿಂಗ್ ತಿರುಗಿಸುವುದು ಅಥವಾ ಎಕ್ಸಲೇಟರ್ ಪೆಡಲ್ ಅನ್ನು ತುಳಿಯುವುದು ಸೇರಿದಂತೆ ಮತ್ತಿತರೆ ಕಾರ್ಯಗಳನ್ನು ಕ್ಷಿಪ್ರವಾಗಿ ಮಾಡುವ ಮೂಲಕ ಚಾಲಕನ ಕೆಲಸವನ್ನು ಸುಲಭಗೊಳಿಸಿ ಸಂಚಾರವನ್ನು ಉತ್ತಮಗೊಳಿಸಲಿದೆ. ಇದಲ್ಲದೇ, ಈ ತಂತ್ರಜ್ಞಾನ ಚಾಲನೆಯ ಮಟ್ಟವನ್ನು ಸುಧಾರಣೆ ಮಾಡಲು ನೆರವಾಗಲಿದೆ. ಜೊತೆಗೆ ಚಾಲಕನ ಅಸ್ವಸ್ಥತೆ ಅಥವಾ ಆಲಸ್ಯವನ್ನು ಗ್ರಹಿಸುವ ಸಾಮರ್ಥ್ಯವೂ ಇದಕ್ಕಿದೆ. ಆಗ ಡ್ರೈವಿಂಗ್ ಕಾನ್‌ಫಿಗರೇಶನ್ ಅನ್ನು ಬದಲಾಯಿಸಿ ಸುರಕ್ಷಿತ ಚಾಲನೆಗೆ ನೆರವಾಗಲಿದೆ. ಚಾಲಕನಿಗಿಂತ ವೇಗವಾಗಿ ಇದು ಕೆಲಸ ಮಾಡಲಿದೆ.

ಅಂದರೆ, ಕೇವಲ ೦.2 ರಿಂದ ೦.5 ಸೆಕೆಂಡ್‌ಗಳಲ್ಲಿ ಸ್ಟಿಯರಿಂಗ್ ತಿರುಗಿಸುವುದು ಅಥವಾ ಕಾರನ್ನು ನಿಧಾನ ಮಾಡಬಲ್ಲದು. ಆದರೆ, ಚಾಲಕನಿಗೆ ಇದೇ ಕ್ರಿಯೆಗಳನ್ನು ಮಾಡಲು ಹೆಚ್ಚು ಸಮಯ ಬೇಕಾಗುತ್ತದೆ.

 

click me!