
ನ್ಯೂಯಾರ್ಕ್(ಜ. 30): ಫೇಸ್ಬುಕ್'ನಲ್ಲಿರುವಂತೆ ವಾಟ್ಸಾಪ್'ನಲ್ಲಿಯೂ ಫ್ರೆಂಡ್'ಗಳ ಲೊಕೇಶನ್ ಟ್ರ್ಯಾಕ್ ಮಾಡುವ ಅವಕಾಶ ಸಿಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಈ ಹೊಸ ಫೀಚರನ್ನು ವಾಟ್ಸಾಪ್ ಪರೀಕ್ಷಿಸುತ್ತಿದೆ. ಮುಂದಿನ ವಾಟ್ಸಾಪ್ ವರ್ಷನ್'ನಲ್ಲಿ ಈ ಫೀಚರ್ ಅಳವಡಿಸುವ ಸಾಧ್ಯತೆ ಇದೆ ಎಂದು "@WABetaInfo" ಎಂಬ ಟ್ವಿಟ್ಟರ್ ಅಕೌಂಟ್'ನಲ್ಲಿ ತಿಳಿಸಲಾಗಿದೆ.
ವಾಟ್ಸಾಪ್'ನಲ್ಲಿ ಲೈವ್ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಆನ್ ಮಾಡಿದರೆ ಯಾರು ಬೇಕಾದರೂ ಸ್ಥಳವನ್ನು ನಿಮ್ಮ ಟ್ರ್ಯಾಕ್ ಮಾಡಬಹುದು. ನೀವು ಬೇರೆಯವರ ಲೊಕೇಶನನ್ನು ಪತ್ತೆ ಮಾಡಬಹುದು. ನಿಮಗೆ ಬೇಡವೆಂದಾಗ ಇದನ್ನು ಡಿಸೇಬಲ್ ಮಾಡಬಹುದು.
ಫೇಸ್ಬುಕ್'ನಲ್ಲೂ ಇಂಥದ್ದೊಂದು ಆಪ್ಷನ್ ಇದೆ. "Find Friends Near Me" ಎಂಬುದನ್ನು ಆನ್ ಮಾಡಿದರೆ ನಮ್ಮ ಫೇಸ್ಬುಕ್ ಫ್ರೆಂಡ್ಸ್ ನಮ್ಮಿಂದ ಎಷ್ಟು ದೂರದಲ್ಲಿದ್ದಾರೆ ಎಂಬುದನ್ನು ಸ್ಥೂಲವಾಗಿ ತಿಳಿಸುತ್ತದೆ.
ಇತ್ತೀಚೆಗಷ್ಟೇ ವಾಟ್ಸಾಪ್ ಹೊಸದೊಂದು ಫೀಚರನ್ನು ತನ್ನ ಬೀಟಾ ವರ್ಷನ್'ನಲ್ಲಿ ಅಳವಡಿಸಿತ್ತು. ನಾವು ಕಳುಹಿಸಿದ ಸಂದೇಶವನ್ನು ಡಿಲೀಟ್ ಮಾಡುವ ಅಥವಾ ಎಡಿಟ್ ಮಾಡುವ ಅವಕಾಶವನ್ನು ವಾಟ್ಸಾಪ್ ನಮಗೆ ಒದಗಿಸಿದೆ. ನಾವು ತಪ್ಪಿ ಸಂದೇಶ ಕಳುಹಿಸಿ ಪರಿತಪಿಸುವ ಮುಜುಗರವನ್ನು ಇದರಿಂದ ತಪ್ಪಿಸಿಕೊಳ್ಳಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.