
ವಾಟ್ಸಾಪ್ ಚಾಟ್'ನ ಸ್ಕ್ರೀನ್'ಶಾಟ್ ತೆಗೆದು ಇತರರಿಗೆ ಕಳುಹಿಸುತ್ತೀರಾ? ಹಾಗಾದ್ರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲವೆಂದಾದರೆ ನೀವು ಸಂಕಷ್ಟಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ. ಅದು ಹೇಗಂತೀರಾ? ಹಾಗಾದ್ರೆ ಈ ಸ್ಟೋರಿ ಓದಿ
ವಾಟ್ಸಾಪ್ ಫೆಬ್ರವರಿ 5ರಂದು ಹೊಸತೊಂದು ಫೀಚರ್ ಪರಿಚಯಿಸುತ್ತಿದೆ. ಈ ಹೊಸ ಫೀಚರ್'ನಿಂದ ಯಾರೇ ಆಗಲಿ ವಾಟ್ಸಾಪ್ ಚಾಟಿಂಗ್'ನ ಸ್ಕ್ರೀನ್'ಶಾಟ್ ತೆಗೆದುಕೊಂಡರೆ ನಿಮಗೆ ನೋಟಿಫಿಕೇಷನ್ ಬರಲಿದೆ. ಸದ್ಯ ಸಾಮಾಜಿಕ ಜಾಲಾತಾಣಗಳಲ್ಲಿ ಇಂತಹುದೊಂದು ಸುದ್ದಿ ಹರಿದಾಡುತ್ತಿದೆ.
ಇಂತಹುದೊಂದು ಸಂದೇಶದೊಂದಿಗೆ 8shit.net ಹೆಸರಿನ ವೆಬ್'ಸೈಟ್ ವಾಟ್ಸ್'ಆ್ಯಪ್'ನ ಸಿಇಒ ಜೇನ್ ಕಾಮ್ ನೀಡಿದ ಹೇಳಿಕೆಯನ್ನು ಬಿತ್ತರಿಸಿದ್ದಾರೆ. 'ಯಾವ ರೀತಿ ನಿಮ್ಮಿಂದ ಕಳುಹಿಸಲ್ಪಟ್ಟ ಸಂದೇಶ ಓದಿದ ಬಳಿಕ ನೀಲಿ ಬಣ್ಣದ ಎರಡು ಟಿಕ್ ಮಾರ್ಕ್ ಕಾಣಿಸಿಕೊಳ್ಳುತ್ತದೋ ಹಾಗೆಯೇ ಯಾರಾದರೂ ಸ್ಕ್ರೀನ್'ಶಾಟ್ ತೆಗೆದುಕೊಂಡರೂ ನಿಮಗೆ ನೋಟಿಫಿಕೇಷನ್ ಸಿಗಲಿದೆ. ಇದು ಅತಿ ಸುಲಭವಾಗಿದೆ' ಎಂದು ಅವರು ತಿಳಿಸಿದ್ದಾರೆ.
ವಾಟ್ಸ'ಆ್ಯಪ್ ಪ್ರತಿ ಬಾರಿ ವಿಭಿನ್ನ ಹಾಗೂ ಹೊಸ ಫೀಚರ್'ಗಳನ್ನು ಪರಿಚಯಿಸುತ್ತಿದ್ದು, ಇದರಿಂದ ಜನರ ಮನವನ್ನೂ ಗೆದ್ದಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.