
ಸ್ಫೋಟಗಳಿಂದಲೇ ಸದ್ದು ಮಾಡಿ ಸುದ್ದಿಯಾಗಿದ್ದ ಸ್ಯಾಮ್ಸಂಗ್ ನೋಟ್ 7 ಉತ್ಪನ್ನವನ್ನು ನಿಷ್ಕ್ರಿಯಗೊಳಿಸಲೆಂದೇ ಸ್ಯಾಮ್ಸಂಗ್ ಹೊಸದೊದು ಸಾಫ್ಟ್‌ವೇರ್ ಅಪ್‌ಡೇಟ್ ಬಿಡುಗಡೆ ಮಾಡಿದೆಯಂತೆ. ಅಪ್‌ಡೇಟ್ ಮಾಡಿದ ತಕ್ಷಣ ನಿಮ್ಮ ಸೆಟ್ ಬಳಕೆಗೆ ಅಯೋಗ್ಯವಾಗುತ್ತದೆ. ಈ ಮೂಲಕ ಬ್ಯಾಟರಿ ಸ್ಫೋಟಿಸುವ ಭಯದಿಂದ ಇರುವ ಗ್ರಾಹಕರು ಆ ಆತಂಕವನ್ನು ಶಮನಗೊಳಿಸಲಿರುವ ಕೊನೆಯ ಉಪಾಯ ಎಂದಿದೆ ಸಂಸ್ಥೆ. ವೆಬ್‌ಸೈಟ್ ಮೂಲಕ ಪಡೆಯಬಹುದಾದ ಈ ಅಪ್‌ಡೇಟ್‌ನ್ನು ಅಳವಡಿಸಿಕೊಂಡ ಬಳಿಕ ಮೊಬೈಲನ್ನು ಬಳಸುವ ಹಾಗಿಲ್ಲ, ಬ್ಯಾಟರಿಯನ್ನು ಚಾರ್ಜ್ ಮಾಡುವ ಹಾಗಿಲ್ಲ. ಅಪ್ಡೇಟ್ ಮಾಡಿ ಹ್ಯಾಂಡ್‌ಸೆಟ್ ನಿಷ್ಕ್ರಿಯಗೊಳಿಸಿದ ನಂತರವೂ ಬಳಕೆದಾರರು ತಮ್ಮ ಸೆಟ್ ಬದಲಾಯಿಸಲು ಅವಕಾಶವಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.