5Gಗಿಂತಲೂ 10 ಪಟ್ಟು ಡೇಟಾ ಸ್ಪೀಡ್ ಇರುವ ಹೊಸ ತಂತ್ರಜ್ಞಾನ

By Suvarna Web DeskFirst Published Feb 6, 2017, 12:26 PM IST
Highlights

290-450 ಗೀಗಾಹರ್ಟ್ಜ್ ತರಂಗಾಂತರದಲ್ಲಿ ಟೆರಾಹರ್ಟ್ಸ್ ಟ್ರಾನ್ಸ್'ಮಿಟರ್ ಮೂಲಕ ಸಂಶೋಧಕರು ಸೆಕೆಂಡ್'ಗೆ 105 ಜಿಬಿ ಡೇಟಾ ಟ್ರಾನ್ಸ್'ಫರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ನವದೆಹಲಿ(ಫೆ. 06): 4G ತಂತ್ರಜ್ಞಾನದ ಭರಾಟೆಯಲ್ಲಿರುವ ನಮಗೆ ಈಗ ಬೆಕ್ಕಸ ಬೆರಗಾಗಿಸುವ ಸುದ್ದಿಯೊಂದು ಬಂದಿದೆ. ಪ್ರತೀ ಸೆಕೆಂಡ್'ಗೆ ಬರೋಬ್ಬರಿ 100 ಗೀಗಾಬಿಟ್ಸ್'ನಷ್ಟು ಡೇಟಾ ರವಾನೆ ಮಾಡುವ ತಂತ್ರಜ್ಞಾನವೊಂದನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ. ಇದು 4G ಬಿಡಿ, ಭವಿಷ್ಯದ 5G ತಂತ್ರಜ್ಞಾನದಕ್ಕಿಂತಲೂ 10 ಪಟ್ಟು ಹೆಚ್ಚು ವೇಗದ ಡೇಟಾ ಸ್ಪೀಡ್ ಆಗಿದೆ. ಈ ವೈರ್'ಲೆಸ್ ಟೆರಾಹರ್ಟ್ಸ್ ಟ್ರಾನ್ಸ್'ಮಿಟರ್'ನಿಂದ ಒಂದು ಡಿವಿಡಿಯಲ್ಲಿರುವ ಸಂಪೂರ್ಣ ಡೇಟಾವನ್ನು ಒಂದೇ ಸೆಕೆಂಡ್'ನಲ್ಲಿ ಟ್ರಾನ್ಸ್'ಫರ್ ಮಾಡಬಹುದು.

ಲ್ಯಾಬ್'ವೊಂದರಲ್ಲಿ ಇಂಥದ್ದೊಂದು ಪ್ರಯೋಗ ನಡೆದಿದೆ. 290-450 ಗೀಗಾಹರ್ಟ್ಜ್ ತರಂಗಾಂತರದಲ್ಲಿ ಟೆರಾಹರ್ಟ್ಸ್ ಟ್ರಾನ್ಸ್'ಮಿಟರ್ ಮೂಲಕ ಸಂಶೋಧಕರು ಸೆಕೆಂಡ್'ಗೆ 105 ಜಿಬಿ ಡೇಟಾ ಟ್ರಾನ್ಸ್'ಫರ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಫೆಬ್ರವರಿ 5-9ರಂದು ನಡೆಯಲಿರುವ ಇಂಟರ್ನ್ಯಾಷನಲ್ ಸಾಲಿಟ್-ಸ್ಟೇಟ್ ಸರ್ಕ್ಯೂಟ್ಸ್ ಕಾನ್ಫೆರೆನ್ಸ್ (ಐಎಸ್'ಎಸ್'ಸಿಸಿ) 2017 ಎಂಬ ಸಮ್ಮೇಳನದಲ್ಲಿ ಟೆರಾಹರ್ಟ್ಜ್ ಟ್ರಾನ್ಸ್'ಮಿಟರ್ ಕುರಿತ ಸಂಶೋಧನೆಯನ್ನು ಪ್ರಸ್ತುತಪಡಿಸುವ ಸಾಧ್ಯತೆ ಇದೆ.

click me!