ಲ್ಯಾಪ್ಟಾಪ್ಗಿಂತ 10 ಲಕ್ಷ ಪಟ್ಟು ವೇಗದ ಸೂಪರ್ ಕಂಪ್ಯೂಟರ್

By Suvarna Web DeskFirst Published Feb 25, 2017, 6:20 PM IST
Highlights

ಮುಂಗಾರು ಹಂಗಾಮಿನ ಮುನ್ಸೂಚನೆ ನೀಡುವ ಬಹುಮುಖ್ಯ ಉದ್ದೇಶದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಈ ಸೂಪರ್ ಕಂಪ್ಯೂಟರ್, ವಿಶ್ವದ ಟಾಪ್ 10 ಸೂಪರ್ ಕಂಪ್ಯೂಟರ್‌ಗಳ ಪಟ್ಟಿಗೆ ಭಾರತವನ್ನು 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸೇರ್ಪಡೆಗೊಳಿಸಲಿದೆ.

ನವದೆಹಲಿ(ಫೆ.25): ಶ್ರೀಸಾಮಾನ್ಯರು ಬಳಸುವ ಲ್ಯಾಪ್‌ಟಾಪ್‌ಗಿಂತ ಹತ್ತು ಲಕ್ಷ ಪಟ್ಟು ಹೆಚ್ಚು ವೇಗ ಹೊಂದಿರುವ ಸೂಪರ್ ಕಂಪ್ಯೂಟರ್‌ವೊಂದು ಬರುವ ಜೂನ್‌ನಲ್ಲಿ ದೇಶದಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದೆ.

ಮುಂಗಾರು ಹಂಗಾಮಿನ ಮುನ್ಸೂಚನೆ ನೀಡುವ ಬಹುಮುಖ್ಯ ಉದ್ದೇಶದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿರುವ ಈ ಸೂಪರ್ ಕಂಪ್ಯೂಟರ್, ವಿಶ್ವದ ಟಾಪ್ 10 ಸೂಪರ್ ಕಂಪ್ಯೂಟರ್‌ಗಳ ಪಟ್ಟಿಗೆ ಭಾರತವನ್ನು 10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸೇರ್ಪಡೆಗೊಳಿಸಲಿದೆ.

10 ಪೆಟ್ಲಾಟಾಪ್ಸ್‌ನಷ್ಟು ವೇಗ ಹೊಂದಿರುವ ಈ ಕಂಪ್ಯೂಟರ್ ಅನ್ನು ಪುಣೆಯ ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ ಹಾಗೂ ಉತ್ತರಪ್ರದೇಶದ ನೋಯ್ಡಾದಲ್ಲಿನ ರಾಷ್ಟ್ರೀಯ ಮಧ್ಯ ಪ್ರಮಾಣದ ಹವಾಮಾನ ಮುನ್ಸೂಚನೆ ಕೇಂದ್ರಗಳು ಜಂಟಿಯಾಗಿ ಹೊಂದಲಿವೆ. ಇದಕ್ಕಾಗಿ ಸರ್ಕಾರ ಈ ವರ್ಷ 400 ಕೋಟಿ ರು. ಬಿಡುಗಡೆ ಮಾಡಿದೆ.

1990ರ ದಶಕದಿಂದಲೂ ಭಾರತ ಸೂಪರ್ ಕಂಪ್ಯೂಟರ್‌ಗಳನ್ನು ನಿರ್ಮಾಣ ಮಾಡುತ್ತಾ ಬಂದಿದೆಯಾದರೂ, ವಿಶ್ವದ ಟಾಪ್ 10 ಪಟ್ಟಿಗೆ ಭಾರತದ ಸೂಪರ್ ಕಂಪ್ಯೂಟರ್ ಸೇರಿದ್ದು ಒಮ್ಮೆ ಮಾತ್ರ. ಟಾಟಾ ಸಮೂಹದ ಕಂಪನಿಯೊಂದು ನಿರ್ಮಿಸಿದ್ದ ಇಕೆಎ ಕಂಪ್ಯೂಟರ್ 2007ರಲ್ಲಿ ಟಾಪ್ 10 ಪಟ್ಟಿ ಸೇರಿತ್ತು. ಸದ್ಯ ದೇಶದಲ್ಲಿ ಹಲವು ಸೂಪರ್ ಕಂಪ್ಯೂಟರ್‌ಗಳು ಇವೆಯಾದರೂ ಅವು ವಿಶ್ವದ ಟಾಪ್ 100 ಅಥವಾ ಟಾಪ್ 200ರ ಪಟ್ಟಿಯಲ್ಲಿವೆ.

click me!