ಬಳಕೆದಾರರಿಗೆ ಸಿಹಿ ಸುದ್ದಿ: ವಾಟ್ಸಾಪ್'ನಲ್ಲಿ ಇನ್ಮುಂದೆ ವಿಡಿಯೋ ಸ್ಟೇಟಸ್ ಹಾಕುವ ಅವಕಾಶ!

By Suvarna Web DeskFirst Published Feb 20, 2017, 10:07 AM IST
Highlights

ಇನ್ಸಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್'ನಲ್ಲಿ ಶೀಘ್ರದಲ್ಲೇ ಹೊಸದೊಂದು ಬದಲಾವಣೆ ಕಂಡು ಬರಲಿದೆ. ಇನ್ನು ಮುಂದೆ ನಿಮ್ಮ ಸ್ಟೇಟಸ್'ನಲ್ಲಿ ಕೇವಲ ಟೆಕ್ಸ್ ಮಾತ್ರವಲ್ಲದೇ ವಿಡಿಯೋವನ್ನೂ ಹಾಕುವ ಅವಕಾಶ ಸಿಗಲಿದೆ. ಆದರೆ ಈ ಬದಲಾವಣೆ ಕೇವಲ 24 ಗಂಟೆಗಳಿಗೆ ಸೀಮಿತವಾಗಿದೆ.

ಇನ್ಸಂಟ್ ಮೆಸೇಜಿಂಗ್ ಆ್ಯಪ್ ವಾಟ್ಸಾಪ್'ನಲ್ಲಿ ಶೀಘ್ರದಲ್ಲೇ ಹೊಸದೊಂದು ಬದಲಾವಣೆ ಕಂಡು ಬರಲಿದೆ. ಇನ್ನು ಮುಂದೆ ನಿಮ್ಮ ಸ್ಟೇಟಸ್'ನಲ್ಲಿ ಕೇವಲ ಟೆಕ್ಸ್ ಮಾತ್ರವಲ್ಲದೇ ವಿಡಿಯೋವನ್ನೂ ಹಾಕುವ ಅವಕಾಶ ಸಿಗಲಿದೆ. ಆದರೆ ಈ ಬದಲಾವಣೆ ಕೇವಲ 24 ಗಂಟೆಗಳಿಗೆ ಸೀಮಿತವಾಗಿದೆ.

ಮಾಧ್ಯಮಗಳು ಈ ಕುರಿತಾಗಿ ವರದಿ ಮಾಡಿದ್ದು, ಕಂಪೆನಿ ವಾಟ್ಸಾಪ್'ನಲ್ಲಿ ಕೆಲವೊಂದು ಬದಲಾವಣೆಯನ್ನು ಪರಿಚಯಿಸಲಿದೆ. ಈ ಮೂಲಕ ಬಳಕೆದಾರರು ಇನ್ಮುಂದೆ ವಿಡಿಯೋವನ್ನೂ ತಮ್ಮ ಸ್ಟೇಟಸ್ ಮಾಡಿಕೊಳ್ಳಬಹುದು. ಆದರೆ ಇದು 24 ಗಂಟೆಗೆ ಸೀಮಿತವಾಗಿರಲಿದೆ ಎಂದು ತಿಳಿಸಿದೆ.

ಆ್ಯಂಡ್ರಾಯ್ಡ್ 2.17.36 ನ ಬೀಟಾ ವರ್ಶನ್'ನಲ್ಲಿ ವಿಡಿಯೋ ಸ್ಟೇಟಸ್'ನ ಇಂಡಿಕೇಟರ್ ಕಂಡು ಬರುತ್ತಿದೆ ಎಂದು ತಿಳಿದು ಬಂದಿದೆ. ಅಂದರೆ ಆ್ಯಪ್'ನಲ್ಲಿ ಬದಲಾವಣೆಗಳನ್ನು ಪರಿಚಯಿಸುತ್ತಿರುವುದು ಖಚಿತವಾಗಿದೆ. ಈ ಮೊದಲು ಕಾಲ್ಸ್, ಚಾಟ್ ಹಾಗೂ ಕಾಂಟ್ಯಾಕ್ಟ್ ಕಂಡು ಬರುತ್ತಿದ್ದ ಸ್ಥಳದಲ್ಲಿ ಮತ್ತೊಂದು ವಿಡಿಯೋ ಸ್ಟೇಟಸ್ ಆಯ್ಕೆಯನ್ನೂ ಸೇರ್ಪಡಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇಷ್ಟೇ ಅಲ್ಲದೆ ನಿಮ್ಮ ವಿಟಿಯೋ ಸ್ಟೇಟಸ್'ನ್ನು ಯಾರೆಲ್ಲಾ ನೋಡಬಹುದು, ಯಾರು ನೋಡಬಾರದು ಎಂಬುವುದು ಕೂಡಾ ನೀವು ನಿರ್ಧರಿಸಬಹುದಾಗಿದ್ದು, ಸೆಟ್ಟಿಂಗ್ಸ್'ನಲ್ಲಿ ನೀವಿದನ್ನು ಬದಲಾಯಿಸಬಹುದಾಗಿದೆ. ಇನ್ನು ನಿಮ್ಮ ವಿಡಿಯೋ ಸ್ಟೇಟಸ್ ಇನ್ಸ್ಟಾಗ್ರಾಂನಂತೆ ಕೇವಲ 24 ಗಂಟೆಯಷ್ಟೇ ಫೀಡ್'ನಲ್ಲಿ ಕಾಣಿಸಿಕೊಳ್ಳಲಿದ್ದು, ಬಳಿಕ ಅಲ್ಲಿ ಕಜಾಣ ಸಿಗುವುದಿಲ್ಲ. ಸದ್ಯ ಈ ಹೊಸ ಫೀಚರ್ ಬೀಟಾ ವರ್ಶನ್'ನಲ್ಲಿ ಮಾತ್ರ ಸಿಗುತ್ತಿದ್ದು, ಶೀಘ್ರದಲ್ಲೇ ಅಪ್'ಡೇಟ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.   

click me!