ಇವತ್ತು ವಾಟ್ಸ್ ಆ್ಯಪ್ ಬರ್ತ್'ಡೇ: 8 ವರ್ಷ ಪೂರೈಸಿದ ವಾಟ್ಸ್'ಆ್ಯಪ್'ನ 8 ಹೆಜ್ಜೆ ಗುರುತುಗಳಿವು

By Suvarna Web DeskFirst Published Feb 24, 2017, 12:02 PM IST
Highlights

ದೀಪಾವಳಿಯ ಸಂದರ್ಭದಲ್ಲಿ ಸುಮಾರು 8 ಬಿಲಿಯನ್ ಸಂದೇಶಗಳು ರವಾನೆಯಾಗಿದೆ ಎಂದು ವಾಟ್ಸ್'ಆ್ಯಪ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಾಟ್ಸ್ ಆ್ಯಪ್ ಜನ್ಮ ತಳೆದು ಇಂದಿಗೆ ಎಂಟು ವರ್ಷಗಳಾಯ್ತು. ಜಗತ್ತಿನಾದ್ಯಂತ ಕೋಟ್ಯಾಂತರ ಮಂದಿ ಬಳಕೆದಾರರನ್ನು ಹೊಂದಿರುವ ವಾಟ್ಸ್'ಆ್ಯಪ್ ತನ್ನ ಎಂಟನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ನೂತನ ಸ್ಟೇಟಸ್ ಅಪ್'ಡೇಟ್ ಮಾಡುವ ಅವಕಾಶ ಒದಗಿಸಿಕೊಟ್ಟಿದೆ. ಭಾರತ ಹಾಗೂ ಬ್ರೆಜಿಲ್'ನಲ್ಲಿ ಅತೀ ಹೆಚ್ಚು ಬಳಸಲ್ಪಡುವ ವಾಟ್ಸ್'ಆ್ಯಪ್'ನ ಎಂಟು ಹೆಜ್ಜೆಗುರುತುಗಳು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸಬಹುದು..

1. ಜಗತ್ತಿನಾದ್ಯಂತ 1.2 ಬಿಲಿಯನ್ ಮಂದಿ ವಾಟ್ಸ್ ಆ್ಯಪ್ ಬಳಸುತ್ತಿದ್ದಾರೆ:

ಪ್ರತಿ ತಿಂಗಳು ಸುಮಾರು 1.2 ಬಿಲಿಯನ್ ಮಂದಿ ಸಕ್ರಿಯವಾಗಿವಾಗಿ ವಾಟ್ಸ್'ಆ್ಯಪ್ ಬಳಸುತ್ತಿದ್ದಾರೆ ಎಂದು ವಾಟ್ಸ್'ಆ್ಯಪ್'ನ ವ್ಯವಸ್ಥಾಪಕ ನಿರ್ದೇಶಕ ರಾಂಡೆಲ್ ಸರಾಫ್ ತಿಳಿಸಿದ್ದಾರೆ. ಪ್ರಸಕ್ತ ವರ್ಷ ಶೇಕಡ 20 ರಷ್ಟು ಗ್ರಾಹಕರನನ್ನು ಹೆಚ್ಚಿಸಿಕೊಂಡಿದ್ದು ಒಂದು ಬಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ವಾಟ್ಸ್'ಆ್ಯಪ್ ಸಂಸ್ಥೆ ಘೋಷಿಸಿಕೊಂಡಿದೆ.

2. ಪ್ರತಿದಿನ 50 ಬಿಲಿಯನ್ ವಾಟ್ಸ್'ಆ್ಯಪ್ ಮೆಸೇಜ್ ಕಳಿಸಲಾಗುತ್ತಿದೆ

ಹೌದು ವಾಟ್ಸ್'ಆ್ಯಪ್'ನಲ್ಲಿ ಪ್ರತಿದಿನ ಸುಮಾರು 50 ಬಿಲಿಯನ್ ಮೆಸೇಜ್'ಗಳನ್ನು ಹರಿದಾಡುತ್ತಿವೆ ಎಂದು ಸಂಸ್ಥೆ ತಿಳಿಸಿದೆ. ಹೊಸವರ್ಷದಂದು ಭಾರತವೊಂದರಲ್ಲೇ 14 ಬಿಲಿಯನ್ ಮೆಸೇಜ್ ಕಳಿಸಲಾಗಿದೆಯಂತೆ. ಇದರಲ್ಲಿ 3.1 ಬಿಲಿಯನ್ ಚಿತ್ರಗಳು, 700 ಮಿಲಿಯನ್ ಜಿಪ್ಸ್ ಫೈಲ್ಸ್'ಗಳು, ಮತ್ತು 610 ಮಿಲಿಯನ್ ವಿಡಿಯೋಗಳು ಸೇರಿವೆ. ಇನ್ನು ದೀಪಾವಳಿಯ ಸಂದರ್ಭದಲ್ಲಿ ಸುಮಾರು 8 ಬಿಲಿಯನ್ ಸಂದೇಶಗಳು ರವಾನೆಯಾಗಿದೆ ಎಂದು ವಾಟ್ಸ್'ಆ್ಯಪ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

3. ಪ್ರತಿದಿನ ಜಿಪ್ಸ್ ಫೈಲ್ಸ್ ಕಳಿಸುವ ಸಂಖ್ಯೆ 80 ಮಿಲಿಯನ್..!

ವಾಟ್ಸ್'ಆ್ಯಪ್ ತನ್ನ ಬಳಕೆದಾರರಿಗೆ ಹೊಸ-ಹೊಸ ಫೀಚರ್'ಗಳನ್ನು ಪರಿಚಯಿಸುತ್ತಲೇ ಬಂದಿದೆ. ಅದರಂತೆ 2016ರ ನವೆಂಬರ್'ನಲ್ಲಿ ಜಿಪ್ಸ್ ಫೈಲ್ಸ್'ಗಳನ್ನು ವಾಟ್ಸ್'ಆ್ಯಪ್ ಮೂಲಕ ಕಳಿಸಲು ಅವಕಾಶ ಮಾಡಿಕೊಟ್ಟಿತು. ಅದೀಗ ಎಷ್ಟು ಜನಪ್ರಿಯವಾಗಿದೆ ಎಂದರೆ ಹೊಸ ಫೀಚರ್ ಪರಿಚಯಿಸಿದ ಮೂರು ತಿಂಗಳೊಳಗಾಗಿ ಪ್ರತಿದಿನ ಸರಾಸರಿ 80 ಮಿಲಿಯನ್ ಜಿಪ್ಸ್ ಫೈಲ್ಸ್'ಗಳು ಶೇರ್ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ. ದೀಪಾವಳಿ, ಹೊಸವರ್ಷ ಮುಂತಾದ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

4. ಪ್ರತಿದಿನ 3.3 ಬಿಲಿಯನ್ ಪೋಟೋಗಳು ಶೇರ್ ಆಗುತ್ತಿವೆ

ಜಗತ್ತಿನಾದ್ಯಂತ ಪ್ರತಿದಿನ ಸರಾಸರಿ 3.3 ಬಿಲಿಯನ್ ಫೋಟೋಗಳು ಶೇರ್ ಆಗುತ್ತಿವೆ ಎಂದು ಕಂಪನಿ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫೋಟೋ ಕಳಿಸುವವರ ಸಂಖ್ಯೆ ಡಬಲ್ ಆಗಿದೆಯಂತೆ.

5. ಬರೋಬ್ಬರಿ 760 ಮಿಲಿಯನ್ ವಿಡಿಯೋಗಳು ಪ್ರತಿದಿನ ಶೇರ್ ಆಗುತ್ತಿವೆ:

ವಾಟ್ಸ್'ಆ್ಯಪ್'ನಲ್ಲಿ ಪೋಟೋ ಕಳಿಸುವುದಕ್ಕಿಂತ ಮೂರು ಪಟ್ಟು ಹೆಚ್ಚು ವಿಡಿಯೋವನ್ನು ಶೇರಮಾಡಲಾಗುತ್ತಿದ್ದಾರಂತೆ. ಈಗ ಪ್ರತಿದಿನ ಸರಾಸರಿ ಸುಮಾರು 760 ಮಿಲಿಯನ್ ವಿಡಿಯೋಗಳು ಶೇರ್ ಆಗುತ್ತಿವೆಯಂತೆ.

6. ಭಾರತದಲ್ಲಿ 160 ಮಿಲಿಯನ್ ಮಂದಿ ವಾಟ್ಸ್'ಆ್ಯಪ್ ಬಳಸುತ್ತಿದ್ದಾರೆ:

ಕಳೆದ ವರ್ಷ ವಿಡಿಯೋ ಕಾಲಿಂಗ್ ಫೀಚರ್ಸ್ ಉದ್ಘಾಟಿಸಲು ಭಾರತಕ್ಕೆ ಬಂದಿದ್ದ ವಾಟ್ಸ್'ಆ್ಯಪ್ ಉಪಾಧ್ಯಕ್ಷ ನೀರಜ್ ಅರೋರ, ಭಾರತ ವಾಟ್ಸ್'ಆ್ಯಪ್'ನ ಅತಿದೊಡ್ಡ ಮಾರುಕಟ್ಟೆಯಾಗಿದೆ ಎಂದು ತಿಳಿಸಿದ್ದರು. ಅಲ್ಲದೇ ಭಾರತದಲ್ಲಿ ಸುಮಾರು 160 ಮಿಲಿಯನ್ ಮಂದಿ ವಾಟ್ಸ್'ಆ್ಯಪ್ ಬಳಸುತ್ತಿದ್ದಾರೆ ಎಂದು ತಿಳಿಸಿದ್ದರು.

7 ಪ್ರತಿದಿನ 100 ಮಿಲಿಯನ್'ಗೂ ಅಧಿಕ ವಾಯ್ಸ್ ಕರೆಗಳನ್ನು ಮಾಡಲಾಗುತ್ತಿದೆ:

ದಿನವೊಂದರಲ್ಲಿ ಸರಿಸುಮಾರು 100 ಮಿಲಿಯನ್ ವಾಯ್ಸ್ ಕರೆಗಳನ್ನು ವಾಟ್ಸ್'ಆ್ಯಪ್ ಮೂಲಕ ಮಾಡಲಾಗುತ್ತಿದೆ ಎಂದು ವಾಟ್ಸ್'ಆ್ಯಪ್ ಸಂಸ್ಥೆ ತಿಳಿಸಿದೆ.

8. ಸುಮಾರು 200 ಮಿಲಿಯನ್ ವಾಯ್ಸ್ ಮೆಸೇಜ್'ಗಳನ್ನು ಕಳಿಸಲಾಗುತ್ತಿದೆ:

ವಾಟ್ಸ್'ಆ್ಯಪ್ ಮೂಲಕ ಸುಮಾರು 200 ಮಿಲಿಯನ್ ಮೆಸೇಜ್'ಗಳು ಪ್ರತಿದಿನ ಹರಿದಾಡುತ್ತವೆ ಎಂದೂ ವಾಟ್ಸ್'ಆ್ಯಪ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

click me!