
ಬೆಂಗಳೂರು: ಭಾರತದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಂದಾದ ಶಿಯೋಮಿ (Xiaomi), ತನ್ನ ಬಹುನಿರೀಕ್ಷಿತ 'ರೆಡ್‌ಮಿ ನೋಟ್ 17' (Redmi Note 17) ಸ್ಮಾರ್ಟ್‌ಫೋನ್ ಅನ್ನು ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ. ದೀರ್ಘಾವಧಿಯ ಬ್ಯಾಟರಿ ಬಾಳಿಕೆ ಮತ್ತು ಅದ್ಭುತ ಡಿಸ್ಪ್ಲೇ ಅನುಭವವನ್ನು ಬಯಸುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಈ ಹೊಸ ಫೋನ್ ವಿನ್ಯಾಸಗೊಳಿಸಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ರೆಡ್‌ಮಿ ನೋಟ್ 17 ಎರಡು ಶೇಖರಣಾ ಮಾದರಿಗಳಲ್ಲಿ ಲಭ್ಯವಿರಲಿದೆ. 6GB RAM + 128GB Storage ಮಾದರಿಗೆ ₹27,999 ಹಾಗೂ 8GB RAM + 128GB Storage ಮಾದರಿಗೆ ₹30,999 ಬೆಲೆ ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಆಗಸ್ಟ್ 13 ರಿಂದ ಇ-ಕಾಮರ್ಸ್ ದೈತ್ಯ ಅಮೆಜಾನ್ (Amazon) ಹಾಗೂ ಶಿಯೋಮಿ ಅಧಿಕೃತ ವೆಬ್‌ಸೈಟ್ ಮತ್ತು ಶೋರೂಮ್‌ಗಳ ಮೂಲಕ ಮಾರಾಟಕ್ಕೆ ಲಭ್ಯವಾಗಲಿದೆ.
ರೆಡ್‌ಮಿ ನೋಟ್ 17 ಫೋನ್‌ನ ಅತಿ ದೊಡ್ಡ ಆಕರ್ಷಣೆಯೆಂದರೆ ಇದರಲ್ಲಿ ನೀಡಲಾಗಿರುವ 8,000mAh ಬೃಹತ್ ಬ್ಯಾಟರಿ. ಕಂಪನಿಯ ಮಾಹಿತಿಯ ಪ್ರಕಾರ, ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸಾಮಾನ್ಯ ಬಳಕೆಯಲ್ಲಿ ಈ ಫೋನ್ ಸುಲಭವಾಗಿ ಸತತ 2 ದಿನಗಳ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಜೊತೆಗೆ, ಫೋನ್‌ನೊಂದಿಗೆ 45W ಸಾಮರ್ಥ್ಯದ ಫಾಸ್ಟ್ ಚಾರ್ಜರ್ ಬಾಕ್ಸ್‌ನಲ್ಲೇ ಸಿಗಲಿದೆ.
ಈ ಫೋನ್ 6.99-ಇಂಚಿನ ವಿಶಾಲವಾದ AMOLED ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ನೀಡುತ್ತದೆ. 1800 ನಿಟ್ಸ್ (Nits) ಗರಿಷ್ಠ ಬ್ರೈಟ್‌ನೆಸ್ ಹೊಂದಿದ್ದು, ಕಡು ಬಿಸಿಲಿನಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. ವೇಗದ ಕಾರ್ಯಕ್ಷಮತೆಗಾಗಿ ಇದರಲ್ಲಿ ಸ್ನಾಪ್‌ಡ್ರಾಗನ್ 4 ಜನ್ 4 (Snapdragon 4 Gen 4) ಚಿಪ್‌ಸೆಟ್ ಬಳಸಲಾಗಿದೆ.
ಈ ಫೋನ್ ಆಂಡ್ರಾಯ್ಡ್ 16 ಆಧಾರಿತ HyperOS 3 ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ. ವಿಶೇಷವೆಂದರೆ, ಶಿಯೋಮಿ ಈ ಫೋನ್‌ಗೆ 4 ಪ್ರಮುಖ OS ಅಪ್‌ಗ್ರೇಡ್‌ಗಳು ಹಾಗೂ 6 ವರ್ಷಗಳ ಭದ್ರತಾ ನವೀಕರಣಗಳನ್ನು (Security Updates) ನೀಡುವುದಾಗಿ ಘೋಷಿಸಿದೆ.
ಕ್ಯಾಮೆರಾ ಹಾಗೂ ಇತರ ಫೀಚರ್ಸ್!
ಹಿಂಭಾಗದಲ್ಲಿ 50MP ಪ್ರಮುಖ ಕ್ಯಾಮೆರಾ ಹಾಗೂ ದ್ವಿತೀಯ ಸಂವೇದಕ (Secondary Sensor) ಇದ್ದು, ಸೆಲ್ಫಿಗಾಗಿ 8MP ಮುಂಭಾಗದ ಕ್ಯಾಮೆರಾ ನೀಡಲಾಗಿದೆ. ನೀರಿನ ಹನಿ ಮತ್ತು ಧೂಳಿನಿಂದ ರಕ್ಷಣೆ ಪಡೆಯಲು IP65 ರೇಟಿಂಗ್ ನೀಡಲಾಗಿದೆ. ಜೊತೆಗೆ, ಕೈ ಅಥವಾ ಸ್ಕ್ರೀನ್ ಒದ್ದೆಯಾಗಿದ್ದರೂ ಕೆಲಸ ಮಾಡುವ 'ವೆಟ್ ಟಚ್' ತಂತ್ರಜ್ಞಾನವೂ ಇದರಲ್ಲಿದೆ. ದೊಡ್ಡ ಬ್ಯಾಟರಿ, ಶಕ್ತಿಶಾಲಿ ಡಿಸ್ಪ್ಲೇ ಹಾಗೂ ದೀರ್ಘಾವಧಿಯ ಸಾಫ್ಟ್‌ವೇರ್ ಅಪ್‌ಡೇಟ್ ಬಯಸುವ ಭಾರತೀಯ ಗ್ರಾಹಕರಿಗೆ ರೆಡ್‌ಮಿ ನೋಟ್ 17 ಸೂಕ್ತ ಆಯ್ಕೆಯಾಗಲಿದೆ
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.