ಜಿಯೋದಿಂದ Port ಆಗ್ತಿರೋ ಗ್ರಾಹಕರನ್ನು ತಡೆಯಲು ಮುಕೇಶ್ ಅಂಬಾನಿ ಮಾಸ್ಟರ್ ಪ್ಲಾನ್

By Mahmad RafikFirst Published Oct 7, 2024, 10:46 AM IST
Highlights

ರಿಲಯನ್ಸ್ ಜಿಯೋ ತನ್ನ ಬಳಕೆದಾರರನ್ನು ಉಳಿಸಿಕೊಳ್ಳಲು ಹೊಸ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತದೆ ಮತ್ತು ಹಲವಾರು ಪ್ರಯೋಜನಗಳನ್ನು ಒಳಗೊಂಡಿದೆ.

ಮುಂಬೈ: ಬೆಲೆ ಏರಿಕೆ ಬೆನ್ನಲ್ಲೇ ರಿಲಯನ್ಸ್ ಜಿಯೋ ಮೂರು ತಿಂಗಳಲ್ಲಿ 10 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಕಳೆದುಕೊಂಡಿದೆ. ಎಂಎನ್‌ಪಿ ಪೋರ್ಟ್ ಮೂಲಕ ಬಳಕೆದಾರರು ಬೇರೊಂದು ನೆಟ್‌ವರ್ಕ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಳಕೆದಾರರ ವಲಸೆಯನ್ನು ತಡೆದು ತನ್ನಲ್ಲಿಯೇ ಉಳಿಸಿಕೊಳ್ಳಲು ರಿಲಯನ್ಸ್ ಜಿಯೋ ಮುಖ್ಯಸ್ಥ ಮುಕೇಶ್ ಅಂಬಾನಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಇದೀಗ ಗ್ರಾಹಕರನ್ನು ಉಳಿಸಿಕೊಳ್ಳಲು ಹೊಸ ಪ್ಲಾನ್ ಬಿಡುಗಡೆ ಮಾಡಿದೆ. ವಿಶೇಷವಾಗಿ ಪ್ರಿಪೇಯ್ಡ್ ಬಳಕೆದಾರರಿಗೆ ಹೊಸ ಪ್ಲಾನ್ ಅನ್ವಯವಾಗುತ್ತದೆ. 

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ 1,029 ರೂಪಾಯಿಯ ಪ್ಲಾನ್ ಅನೌನ್ಸ್ ಮಾಡಿದೆ. ಇದು ಜಿಯೋ ನೀಡುತ್ತಿರುವ ಕೈಗೆಟಕುವ ಪ್ಲಾನ್ ಎಂದು ಹೇಳಲಾಗುತ್ತಿದೆ. ಹೊಸ ಪ್ಲಾನ್ ಹುಡುಕಾಟದಲ್ಲಿದ್ರೆ, 1,029 ರೂಪಾಯಿಯ ರೀಚಾರ್ಜ್ ಮಾಡಿಕೊಳ್ಳಬಹುದು. ಅನ್‌ಲಿಮಿಟೆಡ್ ಕಾಲ್ ಮತ್ತು ಉಚಿತ ಎಸ್ಎಂಎಸ್ ಜೊತೆ ಹಲವು ಸೌಲಭ್ಯಗಳು ಗ್ರಾಹಕರಿಗೆ ಸಿಗಲಿವೆ. 

Latest Videos

ಜಿಯೋ-ಏರ್‌ಟೆಲ್‌ಗಿಂತ ಒಂದು ಹೆಜ್ಜೆ ಮುಂದಿಟ್ಟ BSNL; ಕಡಿಮೆ ಬೆಲೆಗೆ 3300 GB ಡೇಟಾ

ರಿಲಯನ್ಸ್ ಜಿಯೋ 1,029 ರೂಪಾಯಿ ಪ್ಲಾನ್‌ನಲ್ಲಿ ಕೆಲವು ಬದಲಾವಣೆಗಳನ್ನು ತಂದಿದ್ದು, ಇದನ್ನು ಗ್ರಾಹಕ ಸ್ನೇಹಿ ಎಂದು ಹೇಳಿಕೊಂಡಿದೆ. ಇದರಿಂದ ಪ್ರಿಪೇಯ್ಡ್ ಬಳಕೆದಾರರಿಗೆ ಹೆಚ್ಚ ಲಾಭ ಸಿಗಲಿದೆ ಎಂದು ರಿಲಯನ್ಸ್ ಜಿಯೋ ಮಾಹಿತಿ ನೀಡಿದೆ. ಹಾಗಾದ್ರೆ ಜಿಯೋದ 1,029 ರೂಪಾಯಿ ಪ್ಲಾನ್‌ನಲ್ಲಿ ಯಾವೆಲ್ಲಾ ಲಾಭಗಳು ಗ್ರಾಹಕರಿಗೆ ಸಿಗುತ್ತೆ ಎಂಬುದರ ಮಾಹಿತಿ ಇಲ್ಲಿದೆ. 

1,029 ರೂಪಾಯಿ ರೀಚಾರ್ಜ್ ಪ್ಲಾನ್ 
ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಅನ್‌ಲಿಮಿಟೆಡ್ ಕಾಲ್ ಹಾಗೂ ಪ್ರತಿದಿನ 100 ಎಸ್‌ಎಂಎಸ್ ಕಳುಹಿಸುವ ಸೌಲಭ್ಯ ಸಿಗುತ್ತದೆ. 1,029 ರೂ. ಪ್ಲಾನ್‌ನಲ್ಲಿ ಒಟ್ಟು 168GB ಹೈಸ್ಪೀಡ್ ಡೇಟಾ ಅಂದ್ರೆ ಪ್ರತಿದಿನ 2 GB ಲಭ್ಯವಾಗುತ್ತದೆ. ಈ ಪ್ಲಾನ್ ಮತ್ತೊಂದು ವಿಶೇಷತೆ ಏನಂದ್ರೆ ಇದರಲ್ಲಿ 5G ಇಂಟರ್‌ನೆಟ್ ಸೇವೆ ಸಹ ಒಳಗೊಂಡಿದೆ. ರಿಲಯನ್ಸ್ ಜಿಯೋ ಗ್ರಾಹಕರು 5G ಇಂಟರ್‌ನೆಟ್ ಸೇವೆಯನ್ನು ಆನಂದಿಸಬಹುದಾಗಿದೆ. ದಿನದ ಲಿಮಿಟ್ ಅಂತ್ಯವಾದ ಕೂಡಲೇ ಇಂಟರ್‌ನೆಟ್ ಸ್ಪೀಡ್ 64Kbpsಗೆ ಇಳಿಮುಖವಾಗುತ್ತದೆ.

ನೀವು ಒಟಿಟಿ ಪ್ಲಾಟ್‌ಫಾರಂಗಳಲ್ಲಿ ಸಿನಿಮಾ ಮತ್ತು ವೆಬ್‌ ಸಿರೀಸ್ ನೋಡುತ್ತಿದ್ರೆ ಇದೇ ಪ್ಲಾನ್‌ನಲ್ಲಿ ಗ್ರಾಹಕರಿಗೆ ಅಮೆಜಾನ್ ಲೈಟ್ ಸಬ್‌ಸ್ಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ.  ಈ ಮೊದಲು ಇದೇ ಪ್ಲಾನ್‌ನಲ್ಲಿ ಅಮೆಜಾನ್ ಪ್ರೈಮ್ ಆಫರ್ ಕೊಡಲಾಗುತ್ತಿತ್ತು. ಅಮೆಜಾನ್ ಪ್ರೈಮ್ ಲೈಟ್‌ ಜೊತೆ ಎರಡು ಡಿವೈಸ್ (ಟಿವಿ ಅಥವಾ ಮೊಬೈಲ್) ನಲ್ಲಿ ಹೆಚ್‌ಡಿ ಕ್ವಾಲಿಟಿ ವಿಡಿಯೋ ನೋಡಬಹುದಾಗಿದೆ. ನೀವು ನೇರವಾಗಿ Amazon ನಲ್ಲಿ Prime Lite ಅನ್ನು ಬಳಸಬಹುದು. ಆದರೆ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ಕೇವಲ ಒಂದು ಡಿವೈಸ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. 

ಬಿಎಸ್‌ಎನ್ಎಲ್ ಬಳಕೆದಾರರಿಗೆ ಬಿಗ್ ಆಫರ್; 4G ಸ್ಪೀಡ್ ಜೊತೆ 24GB ಡೇಟಾ ಫ್ರೀ

click me!