ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಯ್ತೆಂದು ದೇಶಕ್ಕೇ ಜಿಯೋ ಕೊಟ್ಟ ಅಂಬಾನಿ!

By Suvarna News  |  First Published Feb 25, 2024, 8:57 AM IST

ಜಿಯೋವನ್ನು ರಿಲೈಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಲಾಂಚ್ ಮಾಡಲು ಕಾರಣ, ಅವರ ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿತ್ತೆಂಬುದು!


ಇಂದು ನೆಟ್‌ವರ್ಕ್ ಎಂದರೆ ಜಿಯೋ ಎಂಬ ಮಟ್ಟಿಗೆ ಭಾರತದಲ್ಲಿ ಜಿಯೋ ಕ್ರಾಂತಿ ಮಾಡಿದೆ.  ಮೊದಲು ಫೋನ್ ಮಾಡಬೇಕೆಂದರ ಹಳ್ಳಿ ಜನರು ಮರ ಹತ್ತಿರಬೇಕಿತ್ತು. ಮನೆಗಳಲ್ಲಿ ಅಟ್ಟದ ಮೇಲೆ ಮಾತ್ರ ನೆಟ್ವರ್ಕ್ ಸಿಗೋದೆಂದು ಮೇಲೆ ಫೋನಿಟ್ಟು ಕಾಲ್ ‌ಗಾಗಿ ಕಾಯುತ್ತಿದ್ದರು. ಆದರೆ, ಜಿಯೋ ಹಳ್ಳಿಗಳ ಮೂಲೆ ಮೂಲೆಯನ್ನೂ ತಲುಪಿದೆ. ಈಗ ಕುಗ್ರಾಮದ ಯುವಕನೂ ಯೂಟ್ಯೂಬ್‌ನಲ್ಲಿ ಚಾನೆಲ್ ತೆರೆದುಕೊಂಡು ದುಡಿಯುವ ಮಾರ್ಗ ಕಂಡುಕೊಂಡಿದ್ದಾನೆ. ಜಿಯೋ ನೆಟ್ವರ್ಕ್ ಇಲ್ಲದಿದ್ದರೆ ಕೋವಿಡ್ ಸಮಯದಲ್ಲಿ ಮನೆಯಿಂದಲೇ ಕೆಲಸ ಮಾಡುವ ಹಲವರಿಗೆ ಖಂಡಿತಾ ಸಮಸ್ಯೆಯಾಗುತ್ತಿತ್ತು. ಆದರೆ, ಜಿಯೋ ಸಾಕಷ್ಟು ಜನರ ಬದುಕು ಬದಲಾಯಿಸಿದೆ. ನಿಮಗೆ ಗೊತ್ತಾ, ಇಂಥಾ ಈ ಜಿಯೋವನ್ನು ರಿಲೈಯನ್ಸ್ ಕಂಪನಿಯ ಮಾಲೀಕ ಮುಖೇಶ್ ಅಂಬಾನಿ ಲಾಂಚ್ ಮಾಡಲು ಕಾರಣ, ಅವರ ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿತ್ತೆಂಬುದು!

ಶ್ರೀಮಂತರಿಗೆ, ಉದ್ಯಮಿಗಳಿಗೆ ಜನಸಾಮಾನ್ಯರ ಸಮಸ್ಯೆ ಅರ್ಥವಾಗಬೇಕೆಂದರೆ ಅವರಿಗೂ ಆ ಸಮಸ್ಯೆಯ ಬಿಸಿ ತಟ್ಟಬೇಕು. ಅಂಬಾನಿಗೆ ಆಗಿದ್ದೂ ಹಾಗೆಯೇ. ಹೌದು, ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಭಾರತದ ಮೊಬೈಲ್ ಬ್ರಾಡ್‌ಬ್ಯಾಂಡ್ ಡೇಟಾ ಬಳಕೆಯಲ್ಲಿ ಕ್ರಾಂತಿಯನ್ನುಂಟು ಮಾಡಿದ ಟೆಲಿಕಾಂ ದೈತ್ಯ ಜಿಯೋ ಹಿಂದಿನ ಮುಖವಾಗಿರುವ ಮುಖೇಶ್ ಅಂಬಾನಿ, 2018 ರಲ್ಲಿ ಲಂಡನ್‌ನಲ್ಲಿ ನಡೆದ ಫೈನಾನ್ಶಿಯಲ್ ಟೈಮ್ಸ್ ಆರ್ಸೆಲರ್ ಮಿತ್ತಲ್ ಬೋಲ್ಡ್‌ನೆಸ್ ಇನ್ ಬ್ಯುಸಿನೆಸ್ ಅವಾರ್ಡ್ಸ್‌ ಸಮಯದಲ್ಲಿ ತಮ್ಮ ಭಾಷಣದಲ್ಲಿ ಆಸಕ್ತಿದಾಯಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

Tap to resize

Latest Videos

ಹ್ಯಾಮ್ಲೀಸ್, ಕ್ಲೋವಿಯಾ.. ಅಂಬಾನಿಯ ರಿಲಯನ್ಸ್ ರಿಟೇಲ್‌ನ ಜನಪ್ರಿಯ ಬ್ರ್ಯಾಂಡ್‌ಗಳಿವು
 

2011ರಲ್ಲಿ ಜಿಯೋ ಪ್ರಾರಂಭಿಸಲು ತಮ್ಮ ಮಗಳು ಇಶಾ ಕಾರಣ. ಇದು ಆಕೆಯ ಕಲ್ಪನೆ ಎಂದಿದ್ದಾರೆ ಮುಖೇಶ್. ಮಗಳು ಆಗ ಯೇಲೆ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದಳು  ಮತ್ತು ರಜೆಗಾಗಿ ಮನೆಗೆ ಮರಳಿದ್ದಳು. ಆಗ ಮನೆಯಲ್ಲಿದ್ದ ಕಳಪೆ ನೆಟ್ವರ್ಕ್ ಆಕೆಯ ಹತಾಶೆಗೆ ಕಾರಣವಾಯ್ತು . ಮನೆಯಲ್ಲಿರುವ ಸಮಯದಲ್ಲಿ ಕೆಲ ಕೋರ್ಸ್‌ಗಳನ್ನು ಮುಗಿಸಿಕೊಳ್ಳಲು ಬಯಸಿದ್ದ ಇಶಾಗೆ ಇಂಟರ್ನೆಟ್ ಸಮಸ್ಯೆ ದೊಡ್ಡ ಸಮಸ್ಯೆಯಾಯಿತು. ಆಕೆ ಈ ವಿಷಯವನ್ನು ತಂದೆಗೆ ಹೇಳಿಕೊಂಡಳು. 

ಮಗಳ ಈ ಸಮಸ್ಯೆ ಕೇಳಿದ ಅಂಬಾನಿ, ಕೇವಲ ಮಗಳಿಗಲ್ಲ, ಕೋಟ್ಯಂತರ ಭಾರತೀಯರಿಗೆ ಕೈಗೆಟುಕುವ, ಹೆಚ್ಚಿನ ವೇಗದ ಇಂಟರ್ನೆಟ್ ಒದಗಿಸಲು ಜಿಯೋ ಲಾಂಚ್ ಮಾಡಿದರು. 

ಬಿಲ್ ಗೇಟ್ಸ್, ಜುಕರ್‌ಬರ್ಗ್.. ಅನಂತ್ ಅಂಬಾನಿಯ ವಿವಾಹ ಪೂರ್ವ ಸಮಾರಂಭಕ್ಕೆ ಬರ್ತಿದ್ದಾರೆ ವಿಶ್ವದಿಗ್ಗಜರು
 

ಈ ಭಾಷಣದಲ್ಲಿ ಮುಖೇಶ್ ಅವರ ಮಕ್ಕಳಾದ ಇಶಾ ಮತ್ತು ಆಕಾಶ್ ಅವರು ಅಸಾಧಾರಣವಾದ ಸೃಜನಶೀಲ, ಮಹತ್ವಾಕಾಂಕ್ಷೆಯ ಮತ್ತು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ಅಸಹನೆ ಹೊಂದಿರುವ ಪೀಳಿಗೆಯನ್ನು ಪ್ರತಿನಿಧಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ. 

click me!