ವಿಶೇಷ ಕ್ಯಾಮೆರಾ ಇರುವ ಮೋಟೋರೋಲ ಹೊಸ ಫೋನ್‌; ಆ.30ಕ್ಕೆ ಸೇಲ್ ಶುರು!

By Web Desk  |  First Published Aug 29, 2019, 7:03 PM IST

ಮೊಬೈಲ್ ಪ್ರಿಯರಿಗೆ ಮೋಟೋರೋಲ ಕಂಪನಿಯ ಹೊಸ ಫೋನ್ | ಇದರ ವಿಶೇಷತೆಯೇ ಕ್ಯಾಮೆರಾ | ಆಗಸ್ಟ್‌ 30ರ ಮಧ್ಯಾಹ್ನ 12ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ರಿಯಾಯಿತಿಯೊಂದಿಗೆ ಲಭ್ಯ!


ಮೋಟೋರೋಲ ಹೊಸ ಫೋನ್‌ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದೆ.  ಮೋಟೋ ಒನ್‌ ಆ್ಯಕ್ಷನ್‌ ಎಂಬ 4GB ರಾರ‍ಯಮ್‌ 128 ಸ್ಟೋರೇಜ್‌ ಇರುವ ಈ ಮೊಬೈಲ್ ಆಗಸ್ಟ್‌ 30ರ ಮಧ್ಯಾಹ್ನ 12ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಾಗಲಿದೆ.

ಇದರ ವಿಶೇಷತೆಯೇ ಕ್ಯಾಮೆರಾ. 117 ಡಿಗ್ರಿಯ ಅಲ್ಟ್ರಾ ವೈಡ್‌ ಆ್ಯಂಗಲ್‌ ಲೆನ್ಸ್‌ ಇರುವ ಮೂರು ರೇರ್‌ ಕ್ಯಾಮೆರಾಗಳಿವೆ. ಅವು ಕ್ರಮವಾಗಿ 12 ಮೆಗಾಪಿಕ್ಸೆಲ್, 16 ಮೆಗಾಪಿಕ್ಸೆಲ್ ಹಾಗೂ 5 ಮೆಗಾಪಿಕ್ಸೆಲ್ ಸಾಮರ್ಥ್ಯ ಹೊಂದಿದೆ. ಇನ್ನು ಫ್ರಂಟ್‌ ಕ್ಯಾಮೆರಾ ಸಾಮರ್ಥ್ಯ 12 ಮೆಗಾ ಪಿಕ್ಸೆಲ್‌.

Tap to resize

Latest Videos

undefined

ಇದನ್ನೂ ಓದಿ | ಮೊಬೈಲ್ ಇಂಟರ್ನೆಟ್ ಸ್ಪೀಡ್: ಯಾರು ಮುಂದೆ? ಯಾರು ಹಿಂದೆ? ಇಲ್ಲಿದೆ ಲೇಟೆಸ್ಟ್ ವರದಿ

4GB ರಾರ‍ಯಮ್‌ 128 ಮೆಮೊರಿ ಹೊಂದಿರುವ ಮೊಟೊರೊಲಾ ಒನ್‌ ಆ್ಯಕ್ಷನ್‌ ಆಗಸ್ಟ್‌ 30ರ ಮಧ್ಯಾಹ್ನ 12ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷ ರಿಯಾಯಿತಿಯೊಂದಿಗೆ ರು. 13,999ಗೆ ಲಭ್ಯವಿದೆ. 

2.2 GHz ಆಕ್ಟಾಕೋರ್‌ ಸ್ಯಾಮ್‌ಸಂಗ್‌ ಎಕ್ಸಿನೊಸ್‌ 9609 ಪ್ರೊಸೆಸರ್‌ ಹೊಂದಿದೆ ಈ ಸ್ಮಾರ್ಟ್‌ಫೋನ್‌. 3500ಎಂಎಎಚ್‌ ಬ್ಯಾಟರಿ ಸಾಮರ್ಥ್ಯ ಇದರ ಪ್ಲಸ್‌ ಪಾಯಿಂಟ್‌.

click me!