ಜಿ- ಮೇಲ್ ಅಥವಾ ಇತರ ಆನ್ಲೈನ್ ಖಾತೆಗಳಿಗೆ ಲಕ್ಷಾಂತರ ಜನರು ಈಗಲೂ ಇದೇ ಪಾಸ್ ವರ್ಡ್ ಬಳಕೆ ಮಾಡುತ್ತಿದ್ದಾರೆ.
ಲಂಡನ್: ಜಿ- ಮೇಲ್ ಅಥವಾ ಇತರ ಆನ್ಲೈನ್ ಖಾತೆಗಳಿಗೆ ಲಕ್ಷಾಂತರ ಜನರು ಈಗಲೂ 123456 ಮತ್ತು ‘ಕ್ವೆಟ್ರಿ’ಯಂತಹ ಸುಲಭದ ಪಾಸ್ವರ್ಡ್ಗಳನ್ನು ಬಳಸುತ್ತಿದ್ದಾರೆ ಎಂಬ ಸಂಗತಿ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ.
ಬ್ರಿಟನ್ನ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ (ಎನ್ಸಿಎಸ್ಸಿ) ನಡೆಸಿದ ಅಧ್ಯಯನದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ. ಜನರು ಸುಲಭದ ಪಾಸ್‌ವರ್ಡ್ ನೀಡುವುದರಿಂದ ಬೇರೆಯವರು ಅದನ್ನು ಹ್ಯಾಕ್ ಮಾಡುವ ಸಾಧ್ಯತೆಗಳಿರುತ್ತವೆ. ನೆನಪಿಟ್ಟುಕೊಳ್ಳಬಹುದಾದ ಮತ್ತು ಬೇರೆ ಬೇರೆ ಶಬ್ದಗಳ ಸಂಯೋಜನೆಯಿಂದ ಬಲವಾದ ಪಾಸ್‌ವರ್ಡ್ ನೀಡಬಹುದು ಎಂದು ಎನ್ಸಿಎಸ್ಸಿ ತಿಳಿಸಿದೆ.
2.3 ಕೋಟಿ ಮಂದಿ ಈಗಲೂ 123456 ಸಂಖ್ಯೆಯನ್ನು ಆಗಿ ಬಳಸುತ್ತಿದ್ದಾರೆ. 123456789 ಸಂಖ್ಯೆ ಎರಡನೇ ಜನಪ್ರಿಯ ಪಾಸ್‌ವರ್ಡ್ ಆಗಿದೆ. ಇನ್ನುಳಿದಂತೆ ಕ್ವೆಟ್ರಿ, ಪಾಸ್‌ವರ್ಡ್ ಮತ್ತು 1111111 ಅಂಕಿಯನ್ನು ಕೂಡ ಜನರು ಪಾಸ್‌ವರ್ಡ್ ಆಗಿ ಬಳಸುತ್ತಿದ್ದಾರೆ. ಆಶ್ಲೆ, ಮಿಚೆಲ್, ಡೇನಿಯಯಲ್, ಜೆಸ್ಸಿಕಾ ಮತ್ತು ಚಾರ್ಲೆ ಇವು ಪಾಸ್ವರ್ಡ್ಗೆ ಬಳಸುವ ಅತ್ಯಂತ ಸಾಮಾನ್ಯ ಹೆಸರುಗಳಾಗಿವೆ ಎಂದು ಅಧ್ಯಯನ ತಿಳಿಸಿದೆ.