Kumar Mangalam Birla ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮೊಬೈಲ್ ಉದ್ಯಮ!

By Suvarna News  |  First Published Dec 9, 2021, 8:09 PM IST

*ಭಾರತಕ್ಕೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ
*ಪ್ರಮುಕ ಪಾತ್ರ ವಹಿಸಲಿರುವ ಮೊಬೈಲ್‌ ಉದ್ಯಮ
*ಆದಿತ್ಯ ಬಿರ್ಲಾ ಗ್ರೂಪ್: ಕುಮಾರ್ ಮಂಗಳಂ ಅಭಿಪ್ರಾಯ


ನವದೆಹಲಿ(ಡಿ. 09): 2025 ರ ವೇಳೆಗೆ 5 ಟ್ರಿಲಿಯನ್ ಡಾಲರ್ ($5 trillion economy) ಆರ್ಥಿಕತೆ ಸಾಧಿಸಲು ಭಾರತದ ದೃಷ್ಟಿಯಲ್ಲಿ ಮೊಬೈಲ್ ಉದ್ಯಮವು (Mobile Business) "ಪ್ರಮುಖ" ಪಾತ್ರವನ್ನು ವಹಿಸಲಿದೆ. ಅದರಲ್ಲಿ 1 ಟ್ರಿಲಿಯನ್ ಯುಎಸ್ಡಿ ಡಿಜಿಟಲ್ ಆರ್ಥಿಕತೆಯ ಕೊಡುಗೆಯಾಗಿರಲಿದೆ  (Digital Economy) ಎಂದು ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ (Kumar Mangalam Birla) ಬುಧವಾರ ಹೇಳಿದ್ದಾರೆ.ಇಂಡಿಯಾ ಮೊಬೈಲ್ ಕಾಂಗ್ರೆಸ್ ( India Mobile Congress) ಕಾರ್ಯಕ್ರಮದಲ್ಲಿ ಮಾತನಾಡಿದ ಬಿರ್ಲಾ, ಡಿಜಿಟಲ್ ಇಂಡಿಯಾ ಗುರಿ (Digital India Vision) ಸಾಧಿಸಲು ಮತ್ತು ಈ ನಿಟ್ಟಿನಲ್ಲಿ ಹೂಡಿಕೆ ಮಾಡಲು  ದೃಢವಾದ ಉದ್ಯಮ ಅಗತ್ಯ ಎಂದು ಹೇಳಿದ್ದಾರೆ.

ಕಳೆದ ಕೆಲವು ತಿಂಗಳುಗಳಲ್ಲಿ ಸರ್ಕಾರವು ನಿರ್ಣಾಯಕ ನೀತಿಗಳನ್ನು ಜಾರಿಗೆ ತಂದಿದೆ. ಜತೆಗೆ ವ್ಯವಹಾರವನ್ನು ಸುಲಭಗೊಳಿಸುವ ಕೈಗೊಂಡಿರುವ ಕ್ರಮಗಳು ಮತ್ತು ಬ್ಯಾಂಕಿಂಗ್ ವಲಯದ (Banking Sector) ಬೆಂಬಲವು ಗಮನಾರ್ಹವಾಗಿ ತಂತ್ರಜ್ಞಾನ ವಲಯದ (Technology Industry) ಬಲವನ್ನು ಹೆಚ್ಚಿಸುತ್ತದೆ. ಅಲ್ಲದೇ  ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಅಗ್ರಸ್ಥಾನವನ್ನು ಖಚಿತಪಡಿಸುತ್ತದೆ ಅವರು ಹೇಳಿದ್ದಾರೆ. "ಮುಂಬರುವ ವರ್ಷಗಳಲ್ಲಿ, 2025 ರ ವೇಳೆಗೆ USD 5 ಟ್ರಿಲಿಯನ್ ಆರ್ಥಿಕತೆಯ ಭಾರತದ ದೃಷ್ಟಿಯನ್ನು ಸಾಧಿಸುವಲ್ಲಿ ಮೊಬೈಲ್ ಉದ್ಯಮವು ಪ್ರಮುಖ ಪಾತ್ರ ವಹಿಸಲಿದೆ ಎಂದು ನಾನು ನಂಬುತ್ತೇನೆ, ಅದರಲ್ಲಿ 1 ಟ್ರಿಲಿಯನ್ ಯುಎಸ್ಡಿ ಡಿಜಿಟಲ್ ಆರ್ಥಿಕತೆಯ ಕೊಡುಗೆಯಾಗಿರಲಿದೆ" ಎಂದು ಬಿರ್ಲಾ ಹೇಳಿದ್ದಾರೆ.

Tap to resize

Latest Videos

undefined

ಕಳೆದ ಮೂರು ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆ : ಕೇಂದ್ರ ಸರ್ಕಾರ

ಡಿಜಿಟಲ್ ಇಂಡಿಯಾ ಕಾರ್ಯಕ್ರಮ (Digital India programme) ದೇಶದ ಸಾಮಾನ್ಯ ನಾಗರಿಕರ( common citizens) ಬದುಕಿನ ಮೇಲೆ ಗಮನಾರ್ಹ ಹಾಗೂ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ವಿತ್ತ ಸಚಿವಾಲಯದ ರಾಜ್ಯ ಸಚಿವ ಡಾ.ಭಾಗ್ವತ್ ಕಿಸಾನ್ ರಾವ್ ಕರಡ್ ಲೋಕಸಭೆಗೆ ನೀಡಿರೋ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಡಿಜಿಟಲ್ ಪಾವತಿಯಲ್ಲಿ ಏರಿಕೆಯಾಗಿದೆ ಎಂದು ಅವರು ತಿಳಿಸಿದರು. ಭಾರತೀಯ ರಿಸರ್ವ್ ಬ್ಯಾಂಕ್ (RBI)ನೀಡಿರೋ ಮಾಹಿತಿ ಪ್ರಕಾರ ಕೆಲವು ವಾಣಿಜ್ಯ ಬ್ಯಾಂಕ್ ಗಳಿಗೆ ಆನ್ಲೈನ್ ಸೇವೆಗಳ ಮೇಲೆ ಶುಲ್ಕಗಳನ್ನು ವಿಧಿಸೋ ಅಧಿಕಾರವನ್ನು ನೀಡಲಾಗಿದೆ. ಆದ್ರೆ ಸೇವಾ ಶುಲ್ಕಗಳನ್ನು ವಿಧಿಸೋವಾಗ ಅವು ಸಮಂಜಸ ಹಾಗೂ ನ್ಯಾಯಸಮ್ಮತವಾಗಿರೋ ಜೊತೆ ಸರಾಸರಿ ಅಂದಾಜು ವೆಚ್ಚಕ್ಕಿಂತ ಹೆಚ್ಚಿರಬಾರದು ಎಂಬ ಸಲಹೆಯನ್ನು ಬ್ಯಾಂಕ್ ಗಳಿಗೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

Bill Gates: 2021 ನನ್ನ ಜೀವನದ ಅತ್ಯಂತ ಕಷ್ಟಕರ ವರ್ಷ ಎಂದ ಮೈಕ್ರೋಸಾಫ್ಟ್‌ ಸಂಸ್ಥಾಪಕ!

ಮೂಲ ಸೇವೆಗಳನ್ನು ಗುರುತಿಸಿ ಅವುಗಳಿಗೆ ಸಮಂಜಸ ಶುಲ್ಕ(fee) ನಿಗದಿಪಡಿಸೋ ಬಗ್ಗೆ ನಿರ್ದಿಷ್ಟ ನಿಯಮಗಳನ್ನು ರೂಪಿಸಿಕೊಳ್ಳುವಂತೆ ಕೂಡ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಸೇವಾಶುಲ್ಕಗಳ (Service charges) ಬಗ್ಗೆ ಗ್ರಾಹಕರಿಗೆ ಮಾಹಿತಿಯನ್ನು ಒದಗಿಸೋದು ಬ್ಯಾಂಕ್ ಕರ್ತವ್ಯವಾಗಿದೆ. ಸೇವಾ ಶುಲ್ಕದಲ್ಲಿನ ಬದಲಾವಣೆಗಳ ಬಗ್ಗೆಯೂ ಗ್ರಾಹಕರಿಗೆ ಮುಂಚಿತವಾಗಿ ನೋಟಿಸ್ ನೀಡಬೇಕು ಎಂದು ಕೂಡ ಬ್ಯಾಂಕ್ ಗಳಿಗೆ ಸೂಚಿಸಲಾಗಿದೆ ಎಂಬ ಮಾಹಿತಿಯನ್ನು ಸಚಿವರು ನೀಡಿದರು. ಇದಕ್ಕೆ ಸಂಬಂಧಿಸಿದಂತೆ ವಿವಿಧ ವರ್ಷಗಳಲ್ಲಿ ಹೊರಡಿಸಲಾಗಿರೋ ಅಧಿಸೂಚನೆಗಳ ಮಾಹಿತಿ ಆರ್ ಬಿಐ  ವೆಬ್ ಸೈಟ್ ನಲ್ಲಿ ಲಭ್ಯವಿದೆ ಎಂದು ಸಚಿವರು ತಿಳಿಸಿದರು.

click me!