ಟ್ವಿಟರ್‌ನಲ್ಲಿ ಹೊಸ ಫೀಚರ್; ನಿಟ್ಟುಸಿರು ಬಿಟ್ರು ಕೋಟ್ಯಂತರ ಯೂಸರ್ಸ್

By Web DeskFirst Published Nov 23, 2019, 1:10 PM IST
Highlights

ಬದಲಾವಣೆ ಜಗದ ನಿಯಮ. ಅದು ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಿಗೂ ಅನ್ವಯಿಸುತ್ತದೆ. ಹೊಸತು ಕೊಡಿ, ಇಲ್ಲವೇ ನಾವೇ ಹೊಸತು ನೋಡ್ಕೊತೀವಿ ಎಂಬೋದು ಬಳಕೆದಾರನ ಅಲಿಖಿತ ನಿಯಮ. ಕೋಟ್ಯಂತರ ಬಳಕೆದಾರರು ಬಯಸಿದ್ದ ಫೀಚರ್ ಒಂದನ್ನು ಟ್ವಿಟರ್ ಈಗ ಪರಿಚಯಿಸಿದೆ.

ಬೆಂಗಳೂರು (ನ.23): ಟ್ವಿಟರ್ ಬಳಕೆದಾರರಿಗೆ ಅನಗತ್ಯ ಕಮೆಂಟ್‌ಗಳು ಒಂದು ದೊಡ್ಡ ತಲೆನೋವು. ಏಕಂದ್ರೆ ಫೇಸ್ಬುಕ್ ತರಹ ಇಲ್ಲಿ ಕಮೆಂಟ್‌ಗಳನ್ನು ಡಿಲೀಟ್ ಮಾಡೋದಕ್ಕೆ ಅಥವಾ ಮರೆ ಮಾಡೋದಿಕ್ಕೆ ಆಗಲ್ಲ. ಅದೆಷ್ಟೋ ಮಂದಿ ಅದಕ್ಕಾಗಿ ಪರಿತಪಿಸೋದು ಇದೆ.

ಟ್ವಿಟರ್ ಈಗ ತನ್ನ ಬಳಕೆದಾರರಿಗೆ ಸಂತೋಷದ ಸುದ್ದಿಯನ್ನು ನೀಡಿದೆ. ನಿಮಗಿಷ್ಟವಿಲ್ಲದ, ಅನಗತ್ಯ, ಕಿರಿಕಿರಿಯನ್ನುಂಟುಮಾಡುವ ಅಥವಾ ನಿಂದಿಸುವ ಕಮೆಂಟ್‌ಗಳನ್ನು ನಿಮ್ಮ ಟ್ವೀಟ್ನಿಂದ ಮರೆ ಮಾಡಬಹುದು. ಮರೆ ಮಾಡಲು ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ ಮಾಡಿ-

ಈ ಹೊಸ ಫೀಚರನ್ನು ಪರಿಚಯಿಸುವ ಮೂಲಕ  ಟ್ವಿಟರ್ ತನ್ನ ಪ್ಲಾಟ್‌ಫಾರ್ಮನ್ನು ಬಳಕೆದಾರ-ಸ್ನೇಹಿಯಾಗಿ ಮಾಡಿದೆ. ನಿಮ್ಮ ಟ್ವೀಟ್ ಮೇಲೆ ನೀವು ಹೆಚ್ಚು ನಿಯಂತ್ರಣವನ್ನು ಹೊಂದಬಹುದಾಗಿದೆ.

ಇದನ್ನೂ ಓದಿ | ಸೋಶಿಯಲ್ ಮೀಡಿಯಾ ಲೋಕಕ್ಕೆ ಕಾಲಿಟ್ಟ ಹೊಸ ಡಾನ್! ಮಾಸ್ಟೊಡಾನ್...

ಆದರೆ ಬೇಡವಾದ ಕಮೆಂಟನ್ನು ಡಿಲೀಟ್ ಮಾಡಲು ಆಸ್ಪದವಿಲ್ಲ. ಮರೆ ಮಾಡಬಹುದಷ್ಟೇ. ಮರೆ ಮಾಡಿದರೂ ಅದೂ ಪ್ರತ್ಯೇಕವಾಗಿ ಒಂದು ಪೇಜ್‌ನಲ್ಲಿ ಹೋಗಿ ಸೇರುತ್ತೆ. ಅದನ್ನು ಟ್ವೀಟ್ ಮಾಡಿದವ್ರೂ ನೋಡ್ಬಹುದು, ಇತರರು ಕೂಡಾ ನೋಡ್ಬಹುದು. ಆದಕ್ಕೆ ಕೆಳಗೆ ಕೊಟ್ಟಿರುವ ಚಿತ್ರದಲ್ಲಿ ತೋರಿಸಿರುವ ಆಪ್ಶನ್ ಕ್ಲಿಕ್ ಮಾಡಿದರೆ, ಮರೆ ಮಾಡಿರುವ ಕಮೆಂಟ್‌ಗಳನ್ನು ನೋಡಬಹುದಾಗಿದೆ. 

ಆಗ ಈ ಪೇಜ್ ತೆರೆದುಕೊಳ್ಳುತ್ತೆ.  ಇಲ್ಲಿ ಮರೆ ಮಾಡಿರುವ ಎಲ್ಲಾ ಕಮೆಂಟ್‌ಗಳನ್ನು ನೋಡಬಹುದಾಗಿದೆ.

ಮರೆ ಮಾಡಿದ ಕಮೆಂಟ್‌ಗಳನ್ನು ಮತ್ತೆ ಕಾಣುವಂತೆ ಮಾಡುವ ಆಯ್ಕೆ ಕೂಡಾ ಬಳಕೆದಾರರಿಗೆ ಕೊಡಲಾಗಿದೆ.  ಮರೆಯಾಗಿರುವ ಕಮೆಂಟ್‌ಗೆ ಹೋಗಿ ಅಲ್ಲಿ ಡ್ರಾಪ್ ಡೌನ್ ಮೆನುವಿನಲ್ಲಿ ‘Unhide Reply’ ಎಂಬ ಆಯ್ಕೆಯನ್ನು ಒತ್ತಿದರೆ ಸಾಕು. ಅದು ಮತ್ತೆ ತನ್ನ ಮೂಲಸ್ಥಾನದಲ್ಲಿ ಕಾಣಿಸಿಕೊಳ್ಳುತ್ತೆ. 

ಈ ಫೀಚರನ್ನು ಪ್ರಾಯೋಗಿಕವಾಗಿ ಕೆಲವು ದೇಶಗಳಲ್ಲಿ ಶುರುಮಾಡಲಾಗಿತ್ತು. ಅದರ ಜನಪ್ರಿಯತೆ ಮತ್ತು ಅವಶ್ಯಕತೆಯನ್ನು ಮನಗಂಡು ಈಗ ಜಾಗತಿಕವಾಗಿ ಪರಿಚಯಿಸಲಾಗಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಅನಗತ್ಯ ಡೈರೆಕ್ಟ್ ಮೆಸೇಜ್‌ಗಳನ್ನು ಮರೆಮಾಡುವ ಫೀಚರನ್ನು ಟ್ವಿಟರ್ ಪರಿಚಯಿಸಿತ್ತು. ಇತ್ತೀಚೆಗೆ ಟ್ವಿಟರ್ ತನ್ನ ವಿನ್ಯಾಸವನ್ನು ಬದಲಾಯಿಸಿಕೊಂಡಿರುವುದನ್ನು ಸ್ಮರಿಸಬಹುದು. 

click me!