ಹಾವುಗಳಿಗೂ ಕಾಲುಗಳಿತ್ತು: ಸಂಶೋಧನೆಯಲ್ಲಿ ಬಯಲು!

By Web DeskFirst Published Nov 22, 2019, 12:51 PM IST
Highlights

ಹಾವುಗಳಿಗೂ ಒಂದು ಕಾಲದಲ್ಲಿ ಕಾಲುಗಳು ಇದ್ದವು: ಸಂಶೋಧನೆ| ಕೆನ್ನೆಯಲ್ಲಿ ಎಲುಬೂ ಇತ್ತು: ಕೆನಡಾ ವಿಜ್ಞಾನಿಗಳ ವರದಿ

ಟೊರಂಟೋ[ನ.22]: ಹಾವುಗಳೇಕೆ ತೆವಳುತ್ತಾ ಹೋಗುತ್ತವೆ ಎಂದು ಕೇಳಿದರೆ, ಅವಕ್ಕೆ ಕಾಲುಗಳಿಲ್ಲವಲ್ಲ ಎಂಬ ಉತ್ತರ ಥಟ್ಟನೆ ಬರುತ್ತದೆ. ಹಾವುಗಳಿಗೆ ಈಗ ಕಾಲು ಇಲ್ಲದೇ ಇರಬಹುದು. ಆದರೆ 100 ದಶಲಕ್ಷ ವರ್ಷಗಳಷ್ಟುಹಿಂದೆ ಹಾವುಗಳಿಗೂ ಕಾಲುಗಳು ಇದ್ದವು. ಜತೆಗೆ ಕೆನ್ನೆಯಲ್ಲಿ ಎಲುಬು ಕೂಡ ಇತ್ತು ಎಂಬ ಕುತೂಹಲಕಾರಿ ಸಂಗತಿ ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಹಿಂಭಾಗದಲ್ಲಿ ಕಾಲು ಹೊಂದಿದ್ದ ನಜಾಶ್‌ ರಿಯೋನೆಗ್ರಿನಾ ಎಂಬ ಹಾವಿನ ಪಳೆಯುಳಿಕೆಗಳನ್ನು ಅಧ್ಯಯನ ನಡೆಸಿ ಕೆನಡಾದ ಆಲ್ಬರ್ಟಾ ವಿಶ್ವವಿದ್ಯಾಲಯದ ಸಂಶೋಧಕರು ಈ ಕುರಿತು ಅಧ್ಯಯನ ವರದಿಯೊಂದನ್ನು ಮಂಡಿಸಿದ್ದಾರೆ. ಇದು ‘ಸೈನ್ಸ್‌ ಅಡ್ವಾನ್ಸಸ್‌’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ; 10 ವರ್ಷದ ಬಾಲಕಿ ಸಾವು

ಹಾವುಗಳು ವಿಕಾಸವಾದ ಮೊದಲ 70 ದಶಲಕ್ಷ ವರ್ಷಗಳ ಕಾಲ ಅವುಗಳಿಗೆ ಹಿಂಬಾಗದಲ್ಲಿ ಕಾಲುಗಳು ಇದ್ದವು. ಜತೆಗೆ ಕೆನ್ನೆಯಲ್ಲಿ ಮೂಳೆ ಕೂಡ ಇತ್ತು. ಅವೆಲ್ಲಾ ಹಾವುಗಳ ಹಿಂದಿನ ಸಂತತಿ ಹಲ್ಲಿಗಳಿಂದ ಬಳುವಳಿಯಾಗಿ ಬಂದಿದ್ದವು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪುರಾತನ ಹಾವು ನಜಾಶ್‌ನ ಪಳೆಯುಳಿಕೆಗಳ ಮೂಳೆಗಳನ್ನು ಅತ್ಯುತ್ಕೃಷ್ಟಸ್ಕಾ್ಯನಿಂಗ್‌ ಹಾಗೂ ಲೈಟ್‌ ಮೈಕ್ರೋಸ್ಕೋಪಿಗೆ ಒಳಪಡಿಸಿ ಈ ಅಧ್ಯಯನವನ್ನು ನಡೆಸಲಾಗಿದೆ.

ರಸ್ತೆ ಮಧ್ಯದಲ್ಲೇ ಏಕಾ ಏಕಿ ಪ್ರತ್ಯಕ್ಷವಾದ ನಾಗರ ಹುತ್ತ

click me!