40 ಬಗೆಯ ಹಣ್ಣು ಕೊಡುತ್ತೆ ಈ ಮರ: ಅದ್ಭುತ ಗಿಡದ ಬೆಲೆ ಎಷ್ಟಿರಬಹುದು?

By Web Desk  |  First Published Nov 22, 2019, 4:32 PM IST

ಒಂದೇ ಮರದಲ್ಲಿ 40 ಬಗೆಯ ಹಣ್ಣು| ಈ ಅದ್ಭುತ ಮರವನ್ನು ನಿರ್ಮಿಸಿದರವರು ಕೃಷಿ ಕುಟುಂಬದ ವಿಜ್ಞಾನಿ| ನೋಡಲೂ ಆಕರ್ಷಕವಾಗಿರುವ ಈ ಹಣ್ಣಿನ ಮರದ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ


ನ್ಯೂಯಾರ್ಕ್[ನ.22]: ವಿಜ್ಞಾನವೆಂಬ ಲೋಕ ಅತ್ಯಂತ ಕುತೂಹಲಕಾರಿ. ತಂತ್ರಜ್ಞಾನ ಕ್ಷೇತ್ರದಲ್ಲಾಗುತ್ತಿರುವ ಅಭಿವೃದ್ಧಿಯಿಂದಾಗಿ, ಒಂದು ಕಾಲದಲ್ಲಿ ಅಸಾಧ್ಯವೆಂದು ಬಿಂಬಿತವಾಗಿದ್ದ ಸಂಗತಿಗಳು ಇಂದು ಸಾಧ್ಯವಾಗುತ್ತಿವೆ. ಇಂತಹ ಆವಿಷ್ಕಾರಕ್ಕೆ ಸಾಕ್ಷಿ ಎಂಬಂತಿದೆ 40 ಬಗೆಯ ಹಣ್ಣುಗಳನ್ನು ನೀಡುವ 'ಟ್ರೀ ಆಫ್ 40'. 

ಇಂತಹ ಮರ ಕೂಡಾ ಇರುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಆದರೂ ಇದು ನಂಬಲೇಬೇಕಾದ ವಿಚಾರ. ಬಾಲ್ಯದಿಂದಲೂ ನಾವು ಒಂದು ಮರದಲ್ಲಿ ಒಂದೇ ಬಗೆಯ ಹಣ್ಣು ಬಿಡುವುದನ್ನು ನೋಡಿದ್ದೇವೆ. ಆದರೀಗ ಪ್ರೊಫೆಸರ್ ಸ್ಯಾಮ್ ಎಕೆನ್ ಗ್ರಾಫ್ಟಿಂಗ್ ತಂತ್ರಜ್ಞಾನದಿಂದ ಒಂದು ಮರದಲ್ಲಿ 40 ಬಗೆಯ ಹಣ್ಣುಗಳನ್ನು ಬಿಡುವ ಕಲ್ಪನೆ ನಿಜವಾವಾಗಿಸಿದ್ದಾರೆ.

Tap to resize

Latest Videos

undefined

'ಟ್ರೀ ಆಫ್ 40' ಎಂದು ನಾಮಕರಣ

ಈ ವಿಭಿನ್ನ ಹಾಗೂ ಅದ್ಭುತ ಮರಕ್ಕೆ 'ಟ್ರೀ ಆಫ್ 40' ಎಂದು ಹೆಸರಿಡಲಾಗಿದೆ. ಈ ಮರ ಪ್ಲಮ್, ಯಾಮ್, ಏಪ್ರಿಕಾಟ್, ಚೆರ್ರಿ ಮತ್ತು ನೆಕ್ಟರಿನ್ ನಂತಹ ಹಲವಾರು ಬಗೆಯ ಹಣ್ಣುಗಳನ್ನು ಬಿಡುತ್ತದೆ. ನ್ಯೂಯಾರ್ಕ್ ನ ಸೆರಾಕ್ಯೂಜ್ ವಿಶ್ವವಿದ್ಯಾನಿಲಯದಲ್ಲಿ ವಿಶುವಲ್ ಆರ್ಟ್ ಪ್ರೊಫೆಸರ್ ಆಗಿರುವ ಸ್ಯಾಮ್ ಎಕೆನ್ ಕೃಷಿ ಕುಟುಂಬದಿಂದ ಬಂದವರು. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ ಅವರಲ್ಲಿ ಬಾಲ್ಯದಿಂದಲೂ ಇದೆ. ಅವರು 2008ನೇ ಇಸವಿಯಿಂದಲೂ 'ಟ್ರೀ ಆಫ್ 40' ಮೇಲೆ ಕೆಲಸ ಮಾಡುತ್ತಿದ್ದಾರೆ. 

ಮುಚ್ಚುಇವ ಹಂತದಲ್ಲಿತ್ತು ಆ ತೋಟ

ನ್ಯೂಯಾರ್ಕ್ ನ ಎಗ್ರಿಕಲ್ಚರ್ ಎಕ್ಸ್ ಪರಿಮೆಂಟ್ ನಲ್ಲಿದ್ದ ಸ್ಯಾಮ್ ಎಕೆನ್ ದೃಷ್ಟಿ ಚೆರ್ರಿ ಹಾಗೂ ಇನ್ನಿತರ ಹಣ್ಣುಗಳ ಮರಗಳಿದ್ದ ತೋಟದ ಮೇಲೆ ಹರಿದಿತ್ತು. ಆದರೆ ಇದು ಆರ್ಥಿಕ ಅಡಚಣೆಯಿಂದಾಗಿ ಮುಚ್ಚುವ ಹಂತದಲ್ಲಿತ್ತು. ತೋಟ ನೋಡಿಕೊಳ್ಳುವ ಕೆಲಸಗಾರ ಕೂಡಾ ಇರಲಿಲ್ಲ. ಹೀಗಾಗಿ ಪ್ರೊಫೆಸರ್ ಆ ತೋಟವನ್ನು ಬಾಡಿಗೆಗೆ ಪಡೆದುಕೊಂಡು ತಮ್ಮ ಕನಸು ನನಸಾಗಿಸುವ ಕಾಯಕದಲ್ಲಿ ತೊಡಗಿಸಿಕೊಂಡರು.

ಗ್ರಾಫ್ಟಿಂಗ್ ತಂತ್ರಜ್ಞಾನದ ಆವಿಷ್ಕಾರ

ತೋಟದಲ್ಲಿದ್ದ ಹಲವಾರು ಮರಗಳು ಅತ್ಯಂತ ಹಳೆಯ ಪ್ರಜಾತಿಯದ್ದಾಗಿದ್ದವು. ತಮ್ಮ ಆವಿಷ್ಕಾರದ ಕುರಿತು ಪ್ರತಿಕ್ರಿಯಿಸಿರುವ ಪ್ರೊಫೆಸರ್ 'ನಾನು ಗ್ರಾಫ್ಟಿಂಗ್ ತಂತ್ರಜ್ಞಾನದ ಬಗ್ಗೆ ಕೇಳಿದ್ದೆ. ಇದರಿಂದ ಒಂದೇ ಮರದಲ್ಲಿ ಹಲವು ಬಗೆಯ ಹಣ್ಣುಗಳನ್ನು ಪಡೆಯಲು ಸಾಧ್ಯವಿತ್ತು. ಚಿಕ್ಕ ಮಟ್ಟದಲ್ಲಿ ಹಲವಾರು ಮಂದಿ ಇದನ್ನು ಪ್ರಯೋಗಿಸಿದ್ದರು. ಆದರೆ ನಾನು ಒಂದೇ ಮರದಲ್ಲಿ 40 ಬಗೆಯ ಹಣ್ಣುಗಳನ್ನು ಪಡೆಯುವ ಕನಸು ಕಂಡಿದ್ದೆ. ಹೀಗಾಗಿ ನನ್ನ ರಿಸರ್ಚ್ ಆರಂಭಿಸಿದೆ. ಈ ವೇಳೆ ಹಲವಾರು ಮಂದಿ ಕೃಷಿ ವಿಜ್ಞಾನಿ ಹಾಗೂ ಗ್ರಾಫ್ಟಿಂಗ್ ಬಗ್ಗೆ ತಿಳಿದಿರುವ ಗಣ್ಯರನ್ನು ಭೇಟಿಯಾದೆ' ಎಂದಿದ್ದಾರೆ.

ನವೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!