ಸೇಫ್ ಟ್ರ್ಯಾನ್ಸಾಕ್ಷನ್'ಗಾಗಿ ನಮ್ಮಲ್ಲಿ ಬಹುತೇಕ ಮಂದಿ ಕ್ಯಾಶ್ ಬದಲಾಗಿ ಬೆಕ್ ಪುಸ್ತಕ ಬಳಸುವುದೇ ಉತ್ತಮ ಅಂದುಕೊಳ್ಳುತ್ತಾರೆ. ಆದರೆ ಇದನ್ನು ಅತ್ಯಂತ ಸೇಫ್ ಮಾಡುವುದು ಚೆಕ್ ಪುಸ್ತಕದ ಕೆಳಗೆ ನಮೂದಿಸಿರುವ 23 ನಂಬರ್'ಗಳು!
ನವದೆಹಲಿ(ಮಾ.10): ಸೇಫ್ ಟ್ರ್ಯಾನ್ಸಾಕ್ಷನ್'ಗಾಗಿ ನಮ್ಮಲ್ಲಿ ಬಹುತೇಕ ಮಂದಿ ಕ್ಯಾಶ್ ಬದಲಾಗಿ ಬೆಕ್ ಪುಸ್ತಕ ಬಳಸುವುದೇ ಉತ್ತಮ ಅಂದುಕೊಳ್ಳುತ್ತಾರೆ. ಆದರೆ ಇದನ್ನು ಅತ್ಯಂತ ಸೇಫ್ ಮಾಡುವುದು ಚೆಕ್ ಪುಸ್ತಕದ ಕೆಳಗೆ ನಮೂದಿಸಿರುವ 23 ನಂಬರ್'ಗಳು!
ಚೆಕ್ ಬುಕ್'ನಲ್ಲಿ ಈ 23 ನಂಬರ್'ಗಳನ್ನು ನಾಲ್ಕು ಭಾಗಗಳಲ್ಲಿ ಬರೆದಿರುತ್ತಾರೆ. ಮೊದಲ ಭಾಗದಲ್ಲಿ 6 ನಂಬರ್'ಗಳಿದ್ದರೆ, ಎರಡನೇ ಭಾಗದಲ್ಲಿ 9 ನಂಬರ್'ಗಳಿರುತ್ತವೆ. ಇನ್ನು ಮೂರನೇ ಭಾಗದಲ್ಲಿ 6 ನಂಬರ್ ಹಾಗೂ ನಾಲ್ಕನೇ ಭಾಗದಲ್ಲಿ 2 ನಂಬರ್'ಗಳಿರುತ್ತವೆ.
undefined
ಈ ನಂಬರ್'ಗಳ ಮಹತ್ವವೇನು?
ಮೊದಲ ಭಾಗದಲ್ಲಿ ನಮೂದಿಸಿದ ಆರು ನಂಬರ್ಗಳು ನಿಮ್ಮ ಚೆಕ್ ನಂಬರ್'ನ್ನು ಒಳಗೊಂಡಿದ್ದು, ಇದು ರೆಕಾರ್ಡ್ ಮಾಡಲು ಅನುಕೂಲವಾಗುತ್ತದೆ. ಎರಡನೇ ಭಾಗದಲ್ಲಿ ನಮೂದಿಸಿದ 9 ನಂಬರ್ಗಳನ್ನು Magnetic Ink Character Recognition Code ಎನ್ನುತ್ತಾರೆ. ಇದು ನಿಮ್ಮ ಚೆಕ್ ಯಾವ ಬ್ಯಾಂಕ್'ನಿಂದ ನೀಡಲಾಗಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ಮೂರು ಭಾಗಗಳಲ್ಲಿ ವಿಂಗಡಿಸಲಾದ ಈ ನಂಬರ್ ಚೆಕ್ ರೀಡಿಂಗ್ ಮಶೀನ್ ಪರಿಶೀಲಿಸುತ್ತದೆ.
ಚೆಕ್'ಗಳಲ್ಲಿ ನಮೂದಿಸಿದ ಈ ನಂಬರ್'ಗಳನ್ನು ಐರನ್ ಆಕ್ಸೈಡ್ ಇಂಕ್ ಬಳಸಿ, ತನ್ನದೇ ಆದ ನಿಗದಿತ ಸ್ವರೂಪದಲ್ಲಿ ಬರೆಯಲಾಗುತ್ತದೆ. ವಾಸ್ವವಿಕವಾಗಿ ಇದನ್ನು ನಕಲು ಮಾಡುವುದು ಅಸಾಧ್ಯವಾಗಿರುವುದರಿಂದ ಚೆಕ್ ವ್ಯವಹಾರ ಅತ್ಯಂತ ಸೇಫ್ ಎನ್ನಬಹುದು.