ಕೊನೆಗೂ ಪದವೀಧರನಾಗಲಿರುವ ಫೇಸ್'ಬುಕ್ ಜನಕ

By Suvarna Web DeskFirst Published Mar 8, 2017, 4:30 PM IST
Highlights

ಅರೆ ಇಷ್ಟು ದೊಡ್ಡ ಸಂಸ್ಥೆಯ ಜನಕ ಇನ್ನು ಪದವಿ ಪಡೆದಿರಲಿಲ್ಲವೆ ? ಹೌದು  ಜುಕರ್'ಬರ್ಗ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ  ಪದವಿ ಶಿಕ್ಷಣ ಪಡೆಯುವಾಗ ಡ್ರಾಪ್ ಔಟ್ ಆಗಿದ್ದರು. ಕನಸಿನ ಫೇಸ್'ಬುಕ್ ಹೆಚ್ಚು ಗಮನ ಕೇಂದ್ರಿಕರಿಸಬೇಕಾದ ಕಾರಣ 2004ರಲ್ಲಿ ಹಾರ್ವಡ್' ವಿವಿಯಲ್ಲಿ ತಮ್ಮ ಪದವಿಯ 2ನೇ ವರ್ಷ ಕಲಿಯುತ್ತಿರುವಾಗ ಕಾಲೇಜಿನಿಂದ ಹೊರ ನಡೆದಿದ್ದರು.

ಸ್ಯಾನ್'ಪ್ರಾನ್ಸಿಸ್ಕೋ(ಮಾ.08): ವಿಶ್ವದ ದೈತ್ಯ ಸಾಮಾಜಿಕ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಮಾರ್ಕ್ ಜುಕರ್'ಬರ್ಗ್ ಪದವೀಧರರಾಗಲಿದ್ದಾರೆ.

ಅರೆ ಇಷ್ಟು ದೊಡ್ಡ ಸಂಸ್ಥೆಯ ಜನಕ ಇನ್ನು ಪದವಿ ಪಡೆದಿರಲಿಲ್ಲವೆ ? ಹೌದು  ಜುಕರ್'ಬರ್ಗ್ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ  ಪದವಿ ಶಿಕ್ಷಣ ಪಡೆಯುವಾಗ ಡ್ರಾಪ್ ಔಟ್ ಆಗಿದ್ದರು. ಕನಸಿನ ಫೇಸ್'ಬುಕ್ ಹೆಚ್ಚು ಗಮನ ಕೇಂದ್ರಿಕರಿಸಬೇಕಾದ ಕಾರಣ 2004ರಲ್ಲಿ ಹಾರ್ವಡ್' ವಿವಿಯಲ್ಲಿ ತಮ್ಮ ಪದವಿಯ 2ನೇ ವರ್ಷ ಕಲಿಯುತ್ತಿರುವಾಗ ಕಾಲೇಜಿನಿಂದ ಹೊರ ನಡೆದಿದ್ದರು.

Latest Videos

ಪರಿಪೂರ್ಣವಾಗಿ ಫೇಸ್'ಬುಕ್'ನಲ್ಲಿ ಗಮನ ಹರಿಸಿ ವಿಶ್ವದ ನಂ.1 ಸಾಮಾಜಿಕ ಮಾಧ್ಯಮವನ್ನಾಗಿ ರೂಪಿಸುವಲ್ಲಿ ಯಶಸ್ವಿಯಾದರು. ವಿಶ್ವದಾದ್ಯಂತ 200 ಕೋಟಿ ಬಳಕೆದಾರರು ಜುಕರ್'ಬರ್ಗ'ನ ಫೇಸ್'ಬುಕ್ ಬಳಸುತ್ತಿದ್ದಾರೆ. ವಿಶ್ವದ ಪ್ರಬಲ ಮಾಧ್ಯಮವಾಗಿ ಅದು ಬೆಳದಿದೆ.

ಈ ವರ್ಷದ ಮೇನಲ್ಲಿ ಹಾರ್ವರ್ಡ್'ನಲ್ಲಿ ತಾವು ಪದವೀಧರನಾಗುವುದಾಗಿ ಬಿಲ್'ಗೇಟ್ಸ್ ಅವರೊಂದಿಗೆ ನಡೆದ ವಿಡಿಯೋ ಸಂಭಾಷಣೆಯಲ್ಲಿ ಹೇಳಿಕೊಂಡಿದ್ದಾರೆ. ಹಾರ್ವರ್ಡ್'ನಲ್ಲಿ 2 ರೀತಿಯಲ್ಲಿ ಪದವಿ ಪಡೆಯಬಹುದು. ಮೊದಲನೆಯದಾಗಿ ಕಾಲೇಜಿಗೆ ಹೋಗಿ ಪಡೆದುಕೊಂಡರೆ ಎರಡನೆಯದಾಗಿ ವಿಶ್ವವೆ ಬೆರಗಾಗುವಂತ ಕೆಲಸ ಮಾಡಿದರೆ ವಿವಿಯೇ ನಿಮಗೆ ಪದವಿಯನ್ನು ನೀಡಿ ಗೌರವಿಸುತ್ತದೆ.

ಮತ್ತೊಂದು ಜಾಗತಿಕ ದೈತ್ಯ ಸಂಸ್ಥೆ ಮೈಕ್ರೊಸಾಫ್ಟ್'ನ  ಸಂಸ್ಥಾಪಕರಾದ ಬಿಲ್ ಗೇಟ್ಸ್ ಕೂಡ ಹಾರ್ವರ್ಡ್'ನ ಡ್ರಾಪ್'ಔಟ್ ವಿದ್ಯಾರ್ಥಿ. ಅವರು ಕಾಲೇಜನ್ನು ಆರ್ಧಕ್ಕೆ ಕೈ ಬಿಟ್ಟು ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ವಹಿಸಿ ಮೈಕ್ರೋಸಾಫ್ಟ್'ಅನ್ನು ವಿಶ್ವದ ನಂ.1 ಸಂಸ್ಥೆಯನ್ನಾಗಿಸಿದ್ದರು.

click me!